alex Certify ಕೋವಿಡ್‌ ಲಸಿಕೆ ಅಭಿಯಾನದಲ್ಲಿ ಈ ಹೆಗ್ಗಳಿಕೆಗೆ ಪಾತ್ರವಾಗಿದೆ ಹಿಮಾಚಲ ಪ್ರದೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್‌ ಲಸಿಕೆ ಅಭಿಯಾನದಲ್ಲಿ ಈ ಹೆಗ್ಗಳಿಕೆಗೆ ಪಾತ್ರವಾಗಿದೆ ಹಿಮಾಚಲ ಪ್ರದೇಶ

ಕೋವಿಡ್ ಲಸಿಕೆ ನೀಡುವ ಅಭಿಯಾನವು ದೇಶಾದ್ಯಂತ ಭರದಿಂದ ಸಾಗುತ್ತಿದ್ದು, ಒಂದೂವರೆ ಶತಕೊಟಿ ಜನಸಂಖ್ಯೆಯ ಭಾರತವು ಪ್ರತಿದಿನ ನಿಬ್ಬೆರಗಾಗಿಸುವ ಅಂಕಿಅಂಶಗಳನ್ನು ಹುಟ್ಟುಹಾಕುತ್ತಾ ಸಾಗಿದೆ.

ಇದೇ ವೇಳೆ ಹಿಮಾಚಲ ಪ್ರದೇಶವು ಕೋವಿಡ್ ಲಸಿಕಾಕರಣ ಅಭಿಯಾನದಲ್ಲಿ ಹೊಸದೊಂದು ದಾಖಲೆಗೆ ಭಾಜನವಾಗಿದೆ. ತನ್ನ ಗಡಿಯೊಳಗಿರುವ ವಯಸ್ಕ ಮಂದಿಗೆಲ್ಲಾ ಕೋವಿಡ್ ಲಸಿಕೆಯನ್ನು ಪೂರ್ಣ ಪ್ರಮಾಣದಲ್ಲಿ ಕೊಟ್ಟ ಮೊದಲ ರಾಜ್ಯ ಹಿಮಾಚಲ ಪ್ರದೇಶ. ಆಗಸ್ಟ್‌ ಅಂತ್ಯದ ವೇಳೆಗಾಗಲೇ ತನ್ನ ವಯಸ್ಕ ಮಂದಿಗೆಲ್ಲಾ ಕೋವಿಡ್‌ನ ಲಸಿಕೆಯ ಮೊದಲ ಚುಚ್ಚುಮದ್ದನ್ನು ಕೊಟ್ಟು ಮುಗಿಸಿತ್ತು ಹಿಮಾಚಲ ಪ್ರದೇಶ.

ಶ್ವಾನಗಳೊಂದಿಗೆ ಮೈದಾನಕ್ಕೆ ಆಗಮಿಸಿದ ಆಟಗಾರರು…! ಇದರ ಹಿಂದಿದೆ ಮಹತ್ತರ ಕಾರಣ

ಕೋವಿಡ್-19 ವಿರುದ್ಧ ತನ್ನ ವಯಸ್ಕ ಜನತೆಗೆ 100%ನಷ್ಟು ಲಸಿಕೆ ನೀಡಿರುವ ದೇಶದ ಮೊದಲ ರಾಜ್ಯ ಹಿ.ಪ್ರ ಎಂದು ಅಧಿಕೃತ ವಕ್ತಾರರೊಬ್ಬರು ತಿಳಿಸಿದ್ದಾರೆ. ಇದೇ ವೇಳೆ, ರಾಜ್ಯದ 53,86,393 ಮಂದಿ ಅರ್ಹ ವಯಸ್ಕರಿಗೆ ಕೋವಿಡ್ ಲಸಿಕೆಯ ಎರಡನೇ ಚುಚ್ಚುಮದ್ದು ಕೊಡಲಾಗಿದೆ ಎಂಬ ಅಂಕಿಅಂಶವನ್ನೂ ನೀಡಲಾಗಿದೆ.

ಈ ಸಾಧನೆಗೈದ ಕೋವಿಡ್ ಕಲಿಗಳನ್ನು ಸನ್ಮಾನಿಸಲೆಂದು ಅಖಿಲ ಬಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಬಿಲಾಸ್ಪುರ ಶಾಖೆಯಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ. ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವ್ಯ ಈ ಸಭೆಯಲ್ಲಿ ಹಾಜರಿರಲಿದ್ದು, ಕೋವಿಡ್-19 ಕಾರ್ಯಕರ್ತರಿಗೆ, ರಾಜ್ಯದ ಎಲ್ಲಾ ನಾಗರಿಕರಿಗೆ ಲಸಿಕೆ ಕೊಟ್ಟಿರುವುದಕ್ಕಾಗಿ ಮೆಚ್ಚುಗೆಯ ಪ್ರಮಾಣ ಪತ್ರ ನೀಡಿ ಗೌರವಿಸಲಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...