alex Certify ಕೊರೊನಾ ಲಸಿಕೆ ಪ್ರಮಾಣ ಪತ್ರ ಪಡೆಯಲು ಈತ ಮಾಡಿದ್ದೇನು ಗೊತ್ತಾ..? ಕೇಳಿದ್ರೆ ಶಾಕ್ ಆಗ್ತೀರಾ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಲಸಿಕೆ ಪ್ರಮಾಣ ಪತ್ರ ಪಡೆಯಲು ಈತ ಮಾಡಿದ್ದೇನು ಗೊತ್ತಾ..? ಕೇಳಿದ್ರೆ ಶಾಕ್ ಆಗ್ತೀರಾ..!

ರೋಮ್: ಇಟಲಿಯಲ್ಲಿ ಮತ್ತೆ ಕೊರೋನಾ ಹಾವಳಿ ಹೆಚ್ಚಾಗುತ್ತಿದ್ದು, ಜನರು ಲಸಿಕೆ ಹಾಕುವಂತೆ ಸರ್ಕಾರ ಮನವೊಲಿಸುತ್ತಿದೆ. ಅಲ್ಲದೆ ಲಸಿಕೆ ಪಡೆದ ಪ್ರಮಾಣ ಪತ್ರ ಇಲ್ಲದಿದ್ರೆ ಹೊರಗಡೆ ತಿರುಗಾಡೋಕೆ ಸಾಧ್ಯವಿಲ್ಲ ಎಂಬ ಕಟ್ಟುನಿಟ್ಟಿನ ಸೂಚನೆಯನ್ನು ಇಟಲಿ ಸರ್ಕಾರ ಹೊರತಂದಿದೆ. ಆದರೆ, ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು ಪಡೆಯುವ ಸಲುವಾಗಿ ಲಸಿಕೆ ಪಡೆಯಲು ವ್ಯಕ್ತಿಯೊಬ್ಬರು ನಕಲಿ ತೋಳನ್ನು ಬಳಸಿರುವ ಘಟನೆ ವರದಿಯಾಗಿದೆ.

ಇಟಲಿಯ ಬಿಯೆಲ್ಲಾದಲ್ಲಿ 50 ರ ಹರೆಯದ ವ್ಯಕ್ತಿಯೊಬ್ಬರು ಸಿಲಿಕೋನ್ ತೋಳನ್ನು ಉಪಯೋಗಿಸಿ ಲಸಿಕೆ ಪಡೆಯಲು ಮುಂದಾಗಿದ್ದಾರೆ. ಆ ವ್ಯಕ್ತಿ ತನ್ನ ನಿಜವಾದ ತೋಳನ್ನು ಆವರಿಸಿರುವ ಸಿಲಿಕೋನ್ ನೊಂದಿಗೆ ಲಸಿಕೆ ಪಡೆಯಲು ಆರೋಗ್ಯ ಕೇಂದ್ರಕ್ಕೆ ಧಾವಿಸಿದ್ದಾನೆ. ಅಲ್ಲದೆ ಇದು ಯಾರಿಗೂ ಗೊತ್ತಾಗುವುದಿಲ್ಲ ಎಂದು ಭಾವಿಸಿದ್ದಾನೆ. ಆದರೆ, ಚರ್ಮ ರಬ್ಬರ್ ನಂತಿದೆ ಮತ್ತು ತಂಪಾಗಿದೆಯಲ್ವಾ ಎಂದು ಅನುಮಾನಗೊಂಡ ನರ್ಸ್, ಸರಿಯಾಗಿ ಗಮನಿಸಿದಾಗ ವಿಷಯ ಬೆಳಕಿಗೆ ಬಂದಿದೆ.

ನರ್ಸ್ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಆ ವ್ಯಕ್ತಿ ತನ್ನ ಕುತಂತ್ರಕ್ಕೆ ಬೆಂಬಲ ವ್ಯಕ್ತಪಡಿಸುವಂತೆ ನರ್ಸ್ ಅನ್ನು ಮನವೊಲಿಸಲು ಪ್ರಯತ್ನಿಸಿದ್ದಾನೆ. ಆದರೆ, ನರ್ಸ್ ಈ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಇದೀಗ ಈ ಘಟನೆಯ ಕುರಿತು ಸ್ಥಳೀಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇಟಲಿಯಲ್ಲಿ ಎಲ್ಲಾ ಆರೋಗ್ಯ ಕಾರ್ಯಕರ್ತರಿಗೆ ಹಾಗೂ ಸಾಮಾನ್ಯರಿಗೆ ವ್ಯಾಕ್ಸಿನೇಷನ್ ಕಡ್ಡಾಯವಾಗಿದೆ. ಲಸಿಕೆ ಹಾಕದವರಿಗೆ ನಿಯಮಗಳನ್ನು ಬಿಗಿಗೊಳಿಸುತ್ತಿದೆ. ಸೋಮವಾರದಿಂದ, ಇಟಾಲಿಯನ್ನರಿಗೆ ಕೋವಿಡ್ ಸೂಪರ್ ಗ್ರೀನ್ ಪಾಸ್ ಅಗತ್ಯವಿರುತ್ತದೆ. ಇದು ಲಸಿಕೆ ಹಾಕಿದ ಅಥವಾ ಇತ್ತೀಚೆಗೆ ಕೋವಿಡ್‌ನಿಂದ ಚೇತರಿಸಿಕೊಂಡವರಿಗೆ ಮಾತ್ರ ಲಭ್ಯವಿರುತ್ತದೆ. ರೈಲು ನಿಲ್ದಾಣಗಳು, ಚಿತ್ರಮಂದಿರಗಳು, ರೆಸ್ಟೋರೆಂಟ್‌ಗಳು, ಜಿಮ್‌ಗಳು ಮತ್ತು ಈಜುಕೊಳಗಳನ್ನು ಪ್ರವೇಶಿಸಲು ಈ ಪಾಸ್ ಅತ್ಯಗತ್ಯ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...