ವಿಶ್ವದ ಅತ್ಯಂತ ಹಿರಿಯ ಟೆಸ್ಟ್ ಕ್ರಿಕೆಟಿಗರಾದ ಐಲೀನ್ ಆಶ್ ಅವರು ತಮ್ಮ 110 ನೇ ವಯಸ್ಸಿನಲ್ಲಿ ನಿಧನರಾದರು ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ(ECB) ತಿಳಿಸಿದೆ.
ಐಲೀನ್ ಅವರು 1930 ಮತ್ತು 1940 ರ ದಶಕಗಳಲ್ಲಿ ಇಂಗ್ಲೆಂಡ್‌ಗಾಗಿ 7 ಟೆಸ್ಟ್ ಗಳನ್ನು ಆಡಿದ್ದು, ಬಲಗೈ ವೇಗದ ಬೌಲಿಂಗ್ ನೊಂದಿಗೆ 23 ರ ಸರಾಸರಿಯಲ್ಲಿ 10 ವಿಕೆಟ್ ಪಡೆದಿದ್ದಾರೆ.
ಅವರು 1949 ರಲ್ಲಿ ಆಶಸ್ ಸರಣಿಗಾಗಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾಗವಹಿಸಿದ್ದರು, ಜೊತೆಗೆ ಮಹಿಳೆಯರ ಸಿವಿಲ್ ಸರ್ವಿಸ್, ಮಿಡ್ಲ್ಸೆಕ್ಸ್ ಮಹಿಳೆಯರು ಮತ್ತು ದಕ್ಷಿಣ ಮಹಿಳೆಯರ ದೇಶೀಯ ಕ್ರಿಕೆಟ್ ನಲ್ಲಿ ತಂಡಗಳನ್ನು ಪ್ರತಿನಿಧಿಸಿದ್ದರು.
110 ನೇ ವಯಸ್ಸಿನಲ್ಲಿ ನಿಧನರಾದ ಐಲೀನ್ ಆಶ್ ಅವರಿಗೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಕಂಬನಿ ಮಿಡಿದಿದೆ. 1937 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಗೆ ಪಾದಾರ್ಪಣೆ ಮಾಡಿದ ಆಶ್ ಅಸಾಮಾನ್ಯ ಜೀವನವನ್ನು ನಡೆಸಿದ ಗಮನಾರ್ಹ ಮಹಿಳೆಯಾಗಿದ್ದಾರೆ.
ಬಲಗೈ ಸೀಮರ್ ಆಶ್(ನೀ ವ್ಹೇಲನ್) 1937 ರಲ್ಲಿ ನಾರ್ಥಾಂಪ್ಟನ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಗೆ ಪಾದಾರ್ಪಣೆ ಮಾಡಿದ್ದರು. 1949 ರಲ್ಲಿ ನಿವೃತ್ತಿ ಹೊಂದಿದರು. ಎರಡನೇ ಮಹಾಯುದ್ಧದ ವೇಳೆ ಎರಡೂ ಕಡೆ 7 ಸಂದರ್ಭಗಳಲ್ಲಿ ತನ್ನ ದೇಶವನ್ನು ಅವರು ಪ್ರತಿನಿಧಿಸಿದ್ದರು ಎಂದು ECB ಹೇಳಿಕೆಯಲ್ಲಿ ತಿಳಿಸಿದೆ.