ತುಳಸಿಯನ್ನು ಆಯುರ್ವೇದದಲ್ಲಿ ಬಳಸುತ್ತಾರೆ. ಇದು ಔಷಧೀಯ ಗುಣಗಳನ್ನು ಹೊಂದಿದೆ. ಇದು ಅನೇಕ ರೋಗಗಳನ್ನು ನಿವಾರಿಸಲು ಸಹಕಾರಿಯಾಗಿದೆ.
ಚಳಿಗಾಲದಲ್ಲಿ ಕಾಡುವಂತಹ ಶೀತ, ಕಫ, ಕೆಮ್ಮು, ಜ್ವರದಂತಹ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಹಾಗಾಗಿ ಚಳಿಗಾಲದಲ್ಲಿ ತುಳಸಿ ಚಟ್ನಿಯನ್ನು ತಯಾರಿಸಿ ಸೇವಿಸಿ.
ರೈತರಿಗೆ ಮತ್ತೊಂದು ಗುಡ್ ನ್ಯೂಸ್: 3 ಲಕ್ಷ ರೂ. ಸಾಲ ಸೌಲಭ್ಯದ ಪಶು ಕಿಸಾನ್ ಕ್ರೆಡಿಟ್ ಯೋಜನೆ
ಬೇಕಾಗುವ ಸಾಮಾಗ್ರಿಗಳು : ¼ ಕಪ್ ತುಳಸಿ ಎಲೆ, ಕೊತ್ತಂಬರಿ ಸೊಪ್ಪು 1 ಕಪ್, ಶುಂಠಿ 1 ಇಂಚು, ರುಚಿಗೆ ತಕ್ಕಷ್ಟು ಉಪ್ಪು, ಕೆಂಪುಮೆಣಸಿನ ಕಾಯಿ 2, ಹಸಿಮೆಣಸಿನಕಾಯಿ 2, ಆಲಿವ್ ಆಯಿಲ್ 2 ಚಮಚ, ನಿಂಬೆ ರಸ 1 ಚಮಚ, ಟೊಮೆಟೊ 2.
ಮಾಡುವ ವಿಧಾನ : ಮಿಕ್ಸಿ ಜಾರ್ ನಲ್ಲಿ ತುಳಸಿ ಎಲೆ, ಕೊತ್ತಂಬರಿ ಸೊಪ್ಪು, ಕೆಂಪು ಮೆಣಸಿನ ಕಾಯಿ, ಶುಂಠಿ, ಹಸಿಮೆಣಸಿನಕಾಯಿ, ಆಲಿವ್ ಆಯಿಲ್, ನಿಂಬೆರಸ ಮತ್ತು ಉಪ್ಪನ್ನು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ಆಗ ತುಳಸಿ ಚಟ್ನಿ ರೆಡಿಯಾಗುತ್ತದೆ. ಇದನ್ನು ಪಕೋಡ, ಸಮೋಸಾ ಜೊತೆ ಸೇವಿಸಬಹುದು.