
ನೀವು ಕರೆಂಟ್ ಬಿಲ್ನ್ನು ಸರಿಯಾದ ಸಮಯಕ್ಕೆ ಪಾವತಿ ಮಾಡಿದ್ರೆ ಮಾತ್ರ ಮನೆಗೆ ವಿದ್ಯುಚ್ಚಕ್ತಿ ಪೂರೈಕೆ ಸರಿಯಾಗಿ ನೀಡಲಾಗುತ್ತೆ. ಆದರೆ ನೀವು ಸರಿಯಾಗಿ ಬಿಲ್ ಪಾವತಿ ಮಾಡಿಲ್ಲ ಅಂದರೆ ನಿಮ್ಮ ಮನೆಗೆ ಕರೆಂಟ್ ಕಟ್ ಮಾಡ್ತಾರೆ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರವೇ. ಆದರೆ ವಿಜಯಪುರ ತಾಲೂಕಿನ ಜುಮನಾಳ ಎಂಬಲ್ಲಿ ಮಾತ್ರ ಕರೆಂಟ್ ಬಿಲ್ ಕೇಳಲು ಹೋದವರಿಗೆ ಮನೆ ಮಾಲೀಕ ಜೀವ ಬೆದರಿಕೆ ಹಾಕಿದ್ದಾನೆ.
ವಿಜಯಪುರ ತಾಲೂಕಿನ ಜುಮನಾಳ ಎಂಬ ಗ್ರಾಮದ ನಿವಾಸಿಯೊಬ್ಬರು ಕಳೆದ ಹಲವು ತಿಂಗಳಿನಿಂದ ಕರೆಂಟ್ ಬಿಲ್ ಪಾವತಿ ಮಾಡಿರಲಿಲ್ಲ. ಹೀಗಾಗಿ ಈ ಮನೆಗೆ ಸ್ವತಃ ಭೇಟಿ ನೀಡಿದ ವಿಜಯಪುರ ಹೆಸ್ಕಾಂ ಅಧಿಕಾರಿ ಇ.ಎಸ್ ದೊಡ್ಡಮನಿ ಕರೆಂಟ್ ಬಿಲ್ ಪಾವತಿ ಮಾಡಿ ಇಲ್ಲವಾದಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸುತ್ತೇವೆ ಎಂದು ಹೇಳಿದ್ದಾರೆ.
ಇಷ್ಟಕ್ಕೆ ಕೋಪಗೊಂಡ ಮನೆ ಮಾಲೀಕ ಮಚ್ಚನ್ನು ತಂದು ದೊಡ್ಡಮನಿಗೆ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಸ್ಥಳೀಯರು ಈ ದೃಶ್ಯಾವಳಿಗಳು ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.
https://youtu.be/7MNRIehkVIE