ಸಂಚಾರಿ ನಿಯಮಗಳ ಪಾಲನೆ ಮಾಡದೆ ಹೋದಲ್ಲಿ ದಂಡ, ಶಿಕ್ಷೆ ವಿಧಿಸಲಾಗುತ್ತದೆ. ಟ್ರಾಫಿಕ್ ಪೊಲೀಸರು, ವಾಹನಗಳಿಗೆ ಕೈ ಅಡ್ಡ ಹಾಕಿ ಕೀ ತೆಗೆದುಕೊಳ್ತಾರೆ. ಇಲ್ಲವೇ ವಾಹನದ ಟೈರ್ ಗಾಳಿ ತೆಗೆಯುತ್ತಾರೆ. ಆದ್ರೆ ಟ್ರಾಫಿಕ್ ಪೊಲೀಸರಿಗೆ ಹೀಗೆ ಮಾಡಲು ಹಕ್ಕಿದೆಯಾ ? ಇಲ್ಲಿದೆ ಈ ಬಗ್ಗೆ ಮಾಹಿತಿ.
ವಾಹನಗಳ ತಪಾಸಣೆ ಸಮಯದಲ್ಲಿ ಟ್ರಾಫಿಕ್ ಪೊಲೀಸರು ವಾಹನದ ಕೀ ತೆಗೆಯುತ್ತಾರೆ. ವಾಸ್ತವವಾಗಿ ಟ್ರಾಫಿಕ್ ಪೋಲೀಸರಿಗೆ ಈ ಹಕ್ಕಿಲ್ಲ. ಒಂದು ವೇಳೆ ನೀವು, ಟ್ರಾಫಿಕ್ ಪೊಲೀಸರು ಕೀ ತೆಗೆದುಕೊಂಡರೆ ಅಥವಾ ಟೈರ್ ಗಾಳಿ ತೆಗೆದರೆ ಅವರನ್ನು ಪ್ರಶ್ನೆ ಮಾಡಬಹುದು. ಮೊದಲು ಸಾಕ್ಷ್ಯವಾಗಿ ಇದ್ರ ವಿಡಿಯೋ ಮಾಡಬೇಕು. ನಂತ್ರ ಹತ್ತಿರದ ಪೊಲೀಸ್ ಠಾಣೆಗೆ ಹೂಗಿ ದೂರು ನೀಡಬೇಕು.
ಒಂದು ವೇಳೆ ಪೊಲೀಸರು ಅಥವಾ ಹಿರಿಯ ಅಧಿಕಾರಿಗಳು ಕೂಡ ಟ್ರಾಫಿಕ್ ಪೊಲೀಸರ ಪರ ಮಾತನಾಡಿದರೆ ನೀವು ಕೋರ್ಟ್ ಗೆ ಹೋಗಬಹುದು. ವಾಹನ ಕಾಯ್ದೆ 2019 ರಲ್ಲಿ ಟ್ರಾಫಿಕ್ ಪೊಲೀಸರಿಗೆ ಅಂತಹ ಯಾವುದೇ ಹಕ್ಕನ್ನು ನೀಡಲಾಗಿಲ್ಲ.
ಬಡತನ ರೇಖೆಗಿಂತ ಕೆಳಗಿದ್ದು, ಬಿಪಿಎಲ್ ಕಾರ್ಡ್ ಹೊಂದಿದ್ದರೆ ಕಾನೂನು ಪರಿಣಿತ ವಕೀಲರು ಉಚಿತವಾಗಿ ಸಲಹೆ ನೀಡುತ್ತಾರೆ. ಹೈಕೋರ್ಟ್, ಆ ಸಂಚಾರಿ ಪೊಲೀಸ್ ಮತ್ತು ಅವರ ಹಿರಿಯ ಅಧಿಕಾರಿಗಳನ್ನು ಕರೆಸುತ್ತದೆ. ಈ ಬಗ್ಗೆ ವಿಚಾರಣೆ ನಡೆಸುತ್ತದೆ.