ಪಂಜಾಬ್ನ ರೋಪರ್ನಲ್ಲಿ ಪ್ರತಿಭಟನಾನಿರತರಾಗಿದ್ದ ಗುಂಪೊಂದು ಬಾಲಿವುಡ್ ನಟಿ ಕಂಗನಾ ರಣಾವತ್ ಕಾರನ್ನು ಅಡ್ಡಗಟ್ಟಿದೆ. ಶುಕ್ರವಾರ ಮಧ್ಯಾಹ್ನ ಜರುಗಿದ ಈ ಘಟನೆಯಲ್ಲಿ ಮಹಿಳೆಯರನ್ನೊಳಗೊಂಡ ಈ ಗುಂಪು ಇಲ್ಲಿನ ಕಿರತ್ಪುರ್ ಸಾಹಿಬ್ ಬಳಿಯ ಬಂಗಾ ಸಾಹಿಬ್ ಬಳಿ ಹೀಗೆ ಮಾಡಿದೆ.
ಕಳೆದ ವರ್ಷ ಹಿರಿಯ ರೈತ ಮಹಿಳೆಯೊಬ್ಬರ ವಿರುದ್ಧ ನೀಡಿದ್ದ ವಿವಾದಾತ್ಮಕ ಹೇಳಿಕೆಗಳಿಗೆ ಕ್ಷಮೆಯಾಚಿಸಲು ಕೋರಿ ಕಂಗನಾರನ್ನು ಪ್ರತಿಭಟನಾಕಾರರು ಹೀಗೆ ಅಡ್ಡಗಟ್ಟಿದ್ದರು.
ಹಿರಿಯ ರೈತ ಮಹಿಳೆಯೊಬ್ಬರ ಭಾವಚಿತ್ರವೊಂದನ್ನು ಪೋಸ್ಟ್ ಮಾಡಿದ್ದ ಕಂಗನಾ, “100 ರೂ.ಗೆ ಪ್ರತಿಭಟನೆ ಮಾಡಲು ಮಹಿಳೆಯರು ದೊರಕುತ್ತಾರೆ,” ಎಂದು ಪೋಸ್ಟ್ ಮಾಡಿದ್ದರು.
ಈ ಗಿಡಗಳು ಮನೆಯ ಮುಂದಿದ್ದರೆ ಇರದು ಸೊಳ್ಳೆ ಕಾಟ…..!
’ವೈ’ ಕೆಟಗರಿ ಭದ್ರತೆ ಹೊಂದಿರುವ ಕಂಗನಾ, ಚಂಡೀಘಡ ವಿಮಾನ ನಿಲ್ದಾಣದಿಂದ ಹಿಮಾಚಲ ಪ್ರದೇಶದ ಕುಲುವಿನಲ್ಲಿರುವ ತಮ್ಮ ತವರೂರಿನತ್ತ ಸಾಗುತ್ತಿದ್ದರು. ಈ ವೇಳೆ, ಮೇಲ್ಕಂಡ ಜಾಗದ ಸುತ್ತಲಿನ ಊರುಗಳಿಂದ ಬಂದ ಪ್ರತಿಭಟನಾಕಾರರು ಆಕೆಯ ಕಾರನ್ನು 30-35 ನಿಮಿಷಗಳ ಕಾಲ ಅಡ್ಡಗಟ್ಟಿದ್ದರು ಎನ್ನಲಾಗಿದೆ.
ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಕಂಗನಾ, “ಅವರು ನನ್ನನ್ನು ಕೊಲ್ಲುವುದಾಗಿ ಬೆದರಿಕೆಯೊಡ್ಡಿ, ನನ್ನ ಮೇಲೆ ಅವಾಚ್ಯವಾಗಿ ನಿಂದನೆ ಮಾಡಿದ್ದರು. ಪೊಲೀಸರು ಇಲ್ಲಿ ಇರದೇ ಇದ್ದಿದ್ದರೆ, ಅವರು ಕಲ್ಲು ತೂರಾಟಕ್ಕೂ ಮುಂದಾಗಲಿದ್ದರು… ನನ್ನ ಹೆಸರಿನಲ್ಲಿ ಅನೇಕ ಮಂದಿ ರಾಜಕೀಯ ಮಾಡುತ್ತಿದ್ದಾರೆ ಮತ್ತು ಇಂದಿನ ಘಟನೆ ಅದಕ್ಕೊಂದು ಉದಾಹರಣೆ,” ಎಂದಿದ್ದಾರೆ.
ತಮ್ಮ ಟ್ವೀಟ್ ಬಗ್ಗೆ ಸ್ಪಷ್ಟನೆ ಕೊಟ್ಟ ಕಂಗನಾ, ತಾವು ಆ ರೀತಿ ಹೇಳಿದ್ದು ಶಹೀನ್ಬಾಗ್ ಪ್ರತಿಭಟನಾಕಾರರ ಬಗ್ಗೆಯೇ ಹೊರತು ರೈತ ಮಹಿಳೆ ಬಗ್ಗೆ ಅಲ್ಲ ಎಂದಿದ್ದಾರೆ.