ರಿಲಾಯನ್ಸ್ ಜಿಯೋ ಗ್ರಾಹಕರಿಗೆ ಈಗಾಗಲೇ ಬೆಲೆ ಏರಿಕೆ ಶಾಕ್ ನೀಡಿದೆ. ಡಿಸೆಂಬರ್ 1ರಿಂದ ಕೆಲ ಪ್ರಿಪೇಯ್ಡ್ ಯೋಜನೆಗಳ ಬೆಲೆ ಏರಿಕೆ ಮಾಡಿದೆ. ಇದ್ರ ಜೊತೆ ಜಿಯೋ ಫೋನ್ ಯೋಜನೆ ಬೆಲೆಯನ್ನೂ ಏರಿಕೆ ಮಾಡಿದೆ. ಆದ್ರೆ ಕೆಲ ಪ್ರಿಪೇಯ್ಡ್ ಯೋಜನೆಗಳ ಬೆಲೆಯನ್ನು ಕಂಪನಿ ಹೆಚ್ಚಳ ಮಾಡಿಲ್ಲ. ಇದು ಗ್ರಾಹಕರ ಖುಷಿಗೆ ಕಾರಣವಾಗಿತ್ತು. ಆದ್ರೆ ಅಷ್ಟು ಖುಷಿಪಡುವ ಅಗತ್ಯವಿಲ್ಲ. ಯೋಜನೆ ಬೆಲೆಯಲ್ಲಿ ಬದಲಾವಣೆ ಆಗದೆ ಹೋದ್ರೂ ಸಿಂಧುತ್ವದಲ್ಲಿ ಇಳಿಕೆಯಾಗಿದೆ.
200 ರೂಪಾಯಿಗಿಂತ ಕಡಿಮೆಯಿರುವ ಎರಡು ಯೋಜನೆಗಳ ಸಿಂಧುತ್ವ ಕಡಿಮೆಯಾಗಿದೆ. ಜಿಯೋದ 149 ರೂಪಾಯಿ ಪ್ಲಾನ್ ಬಹಳ ಜನಪ್ರಿಯವಾಗಿದೆ. ಈ ಪ್ಲಾನ್ ಮಾನ್ಯತೆ 28 ದಿನಗಳವರೆಗೆ ಇತ್ತು. ಆದ್ರೆ ಈಗ ಮಾನ್ಯತೆಯನ್ನು 24 ದಿನಗಳವರೆಗೆ ಇಳಿಕೆ ಮಾಡಲಾಗಿದೆ. ಈ ಯೋಜನೆಯಲ್ಲಿ ದಿನಕ್ಕೆ 1 ಜಿಬಿ ಡೇಟಾ ಸಿಗಲಿದೆ. ಯಾವುದೇ ನೆಟ್ವರ್ಕ್ಗೆ ಅನಿಯಮಿತ ಕರೆ ಮಾಡಬಹುದು. ದಿನಕ್ಕೆ 100 ಎಸ್ಎಂಎಸ್ ಗ್ರಾಹಕರಿಗೆ ಸಿಗಲಿದೆ. ಜಿಯೋ ಅಪ್ಲಿಕೇಷನ್ ಗಳಿಗೆ ಉಚಿತ ಚಂದಾದಾರಿಕೆ ಸಿಗಲಿದೆ.
ಜಿಯೋದ 199 ರೂಪಾಯಿ ಯೋಜನೆ ಕೂಡ 28 ದಿನಗಳ ಸಿಂಧುತ್ವದಲ್ಲಿ ಬರ್ತಾಯಿತ್ತು. ಆದ್ರೆ ಈಗ ಸಿಂಧುತ್ವ 23 ದಿನಕ್ಕೆ ಇಳಿದಿದೆ. ಪ್ರತಿದಿನ ಈ ಯೋಜನೆಯಲ್ಲಿ ಗ್ರಾಹಕರಿಗೆ 1.5 ಜಿಬಿ ಡೇಟಾ, 100 ಎಸ್ಎಂಎಸ್ ಸಿಗಲಿದೆ. ಯಾವುದೇ ನೆಟ್ವರ್ಕ್ನಲ್ಲಿ ಅನಿಯಮಿತ ಕರೆ ಸೌಲಭ್ಯ ಪಡೆಯಬಹುದು. ಈ ಎರಡೂ ಪ್ರಿಪೇಯ್ಡ್ ಪ್ಲಾನ್ ಬೆಲೆಯಲ್ಲಿ ಏರಿಕೆ ಮಾಡಲಾಗಿಲ್ಲ. ಆದ್ರೆ ಸಿಂಧುತ್ವ ಕಡಿಮೆ ಮಾಡಿ, ಗ್ರಾಹಕರಿಗೆ ಕಂಪನಿ ನಿರಾಸೆ ಮೂಡಿಸಿದೆ.