ಕಾರು ತಡೆದ ಪೊಲೀಸರ ವಿರುದ್ಧ ಸಚಿವ ಕೆಂಡಾಮಂಡಲ..! ಅಮಾನತುಗೊಳಿಸುವವರೆಗೂ ಸದನಕ್ಕೆ ಕಾಲಿಡಲಾರೆ ಎಂದು ಶಪಥ 02-12-2021 7:48PM IST / No Comments / Posted In: Latest News, India, Live News ಜಿಲ್ಲಾ ಮ್ಯಾಜಿಸ್ಟ್ರೇಟ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳ ಬೆಂಗಾವಲು ಪಡೆಗೆ ದಾರಿ ಮಾಡಿ ಕೊಡುವ ನಿಮಿತ್ತ ವಿಧಾನಸಭೆಗೆ ತೆರಳುತ್ತಿದ್ದ ಬಿಹಾರದ ಸಚಿವ ಜೀವೇಶ್ ಮಿಶ್ರಾ ಅವರ ಕಾರನ್ನು ಪೊಲೀಸರು ತಡೆದ ಪರಿಣಾಮ ಸಚಿವ ಕೆಂಡಾಮಂಡಲರಾದ ಘಟನೆ ನಡೆದಿದೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಕೋಪಗೊಂಡಿರುವ ಜೀವೇಶ್ ಮಿಶ್ರಾ ಕರ್ತವ್ಯನಿರತ ಪೊಲೀಸರನ್ನು ಅಮಾನತುಗೊಳಿಸುವಂತೆ ಬೆದರಿಕೆಯೊಡ್ಡಿದ್ದನ್ನು ಕೇಳಬಹುದಾಗಿದೆ. ನಾನು ಸರ್ಕಾರದ ಭಾಗವಾಗಿದ್ದೇನೆ. ನೀವು ನನ್ನೊಡನೆ ದುರ್ವರ್ತನೆ ತೋರುತ್ತಿದ್ದೀರಿ ಎಂದು ಜೀವೇಶ್ ಮಿಶ್ರಾ ಆವಾಜ್ ಹಾಕಿದ್ದಾರೆ. ಜಿಲ್ಲಾ ಮ್ಯಾಜಿಸ್ಟ್ರೇಟ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗೆ ದಾರಿ ಮಾಡಿಕೊಡುವ ಸಲುವಾಗಿ ಸಚಿವರನ್ನು ರಸ್ತೆ ಮೇಲೆ ಕಾಯುವಂತೆ ಮಾಡಿದ್ದಾರೆ. ಈ ಪೊಲೀಸರು ಅಮಾನತು ಆಗುವವರೆಗೂ ನಾನು ವಿಧಾನಸಭೆಗೆ ಕಾಲಿಡೋದಿಲ್ಲ ಎಂದು ಜೀವೇಶ್ ಮಿಶ್ರಾ ಆವಾಜ್ ಹಾಕಿದ್ದಾರೆ. #WATCH Bihar minister Jivesh Mishra gets angry after his car is stopped in Assembly premises by police to give way to SP & DM, demands their suspension#Patna pic.twitter.com/a0JroXccPq — ANI (@ANI) December 2, 2021