alex Certify ಪ್ರೀತಿ ಹೆಸರಿನಲ್ಲಿ ಅಪ್ರಾಪ್ತೆಗೆ ಕಿರುಕುಳ; ಚಾಕು ಇರಿದಿದ್ದಲ್ಲದೇ ಗುಂಡು ಹಾರಿಸಿ ಹತ್ಯೆಗೈದ ಕಿರಾತಕ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರೀತಿ ಹೆಸರಿನಲ್ಲಿ ಅಪ್ರಾಪ್ತೆಗೆ ಕಿರುಕುಳ; ಚಾಕು ಇರಿದಿದ್ದಲ್ಲದೇ ಗುಂಡು ಹಾರಿಸಿ ಹತ್ಯೆಗೈದ ಕಿರಾತಕ..!

ಪ್ರೀತಿ ಮಾಯೆ ಹುಷಾರು ಅಂತಾರೆ..! ಇಲ್ಲೊಬ್ಬ 19 ವರ್ಷದ ಯುವಕ ಪ್ರೀತಿ ಪ್ರೇಮದ ಗೀಳಿಗೆ ಬಿದ್ದು 15 ವರ್ಷದ ಬಾಲಕಿಯ ಪ್ರಾಣವನ್ನೇ ತೆಗೆದಿದ್ದಾನೆ..!

ಆಂಧ್ರಪ್ರದೇಶದ ಗರ್ವಾ ಜಿಲ್ಲೆಯ ಖರೋಂಧಿ ಪೊಲೀಸ್​ ಠಾಣಾ ವ್ಯಾಪ್ತಿಯ ಕರಿವಾಡಿ ಎಂಬಲ್ಲಿ ಇಂತಹದ್ದೊಂದು ದಾರುಣ ಘಟನೆ ವರದಿಯಾಗಿದೆ. 15 ವರ್ಷದ ಬಾಲಕಿಯನ್ನು ಚಾಕುವಿನಿಂದ ಇರಿದಿದ್ದು ಮಾತ್ರವಲ್ಲದೇ ಆಕೆಯ ಮೇಲೆ ಫೈರಿಂಗ್​ ನಡೆಸಿದ್ದಾನೆ.

ಬಾಲಕಿಯನ್ನು ಯುವಕ ಪ್ರೀತಿಸುತ್ತಾ ಇದ್ದುದೆ ಈ ಕೃತ್ಯಕ್ಕೆ ಕಾರಣ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆರೋಪಿಯನ್ನು ಇಮ್ತಿಯಾಜ್ ಅಲಿ ಎಂದು ಗುರುತಿಸಲಾಗಿದೆ. ಈತ 9ನೇ ತರಗತಿಯ ಶಬನಮ್​ ಖತೂನ್​​​ ಳಿಗೆ ಕಳೆದ ಅನೇಕ ದಿನಗಳಿಂದ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.

ಮಂಗಳವಾರ ಮಧ್ಯಾಹ್ನದ ಸುಮಾರಿಗೆ ಶಬನಮ್​ ತನ್ನ ಆರು ಮಂದಿ ಸ್ನೇಹಿತರ ಜೊತೆಯಲ್ಲಿ ಮನೆಗೆ ವಾಪಸ್ಸಾಗುತ್ತಿದ್ದ ವೇಳೆ ಈತ ಆಕೆಯನ್ನು ಮಾತನಾಡಿಸಲು ಯತ್ನಿಸಿದ್ದಾನೆ. ಆಕೆಯ ಬಳಿ ಬಂದು ಚಾಕು ತೆಗೆದ ಯುವಕ ಆಕೆಗೆ ಇರಿದಿದ್ದಾನೆ.

ಆದರೆ ಇದಕ್ಕೆ ಶಬನಮ್​ ವಿರೋಧ ವ್ಯಕ್ತಪಡಿಸಲು ಆರಂಭಿಸುತ್ತಿದ್ದಂತೆಯೇ ಇಮ್ತಿಯಾಜ್ ಆಕೆಯ ಮೇಲೆ ಕಂಟ್ರಿ ಮೇಡ್​ ಪಿಸ್ತೂಲ್​ನಿಂದ ಫೈರಿಂಗ್​ ನಡೆಸಿದ್ದಾನೆ.

ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಬಂಶಿದ್​ನಗರದ ಪೊಲೀಸ್​ ಅಧಿಕಾರಿ ಪ್ರಮೋದ್​ ಕುಮಾರ್​ ಸ್ಥಳಕ್ಕೆ ಧಾವಿಸಿದ್ದಾರೆ. ಅಲ್ಲದೇ ಮೃತ ಬಾಲಕಿಯ ಸಹಪಾಠಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಈ ವೇಳೆ ಇಮ್ತಿಯಾಜ್ ಶಬನಮ್​ಗೆ ಪ್ರೀತಿ ಹೆಸರಿನಲ್ಲಿ ಕಿರುಕುಳ ನೀಡುತ್ತಿದ್ದ ಎಂಬ ವಿಚಾರ ಬೆಳಕಿಗೆ ಬಂದಿದೆ. ಶೀಘ್ರದಲ್ಲೇ ಆರೋಪಿಯನ್ನು ಬಂಧಿಸಲಾಗುವುದು ಎಂದು ಪ್ರಮೋದ್​ ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...