ಭಾರತದಲ್ಲಿ ಪೆಟ್ರೋಲ್ ಬೆಲೆಗಳು ಜನಸಾಮಾನ್ಯರಿಗೆ ದೊಡ್ಡ ತಲೆನೋವಾಗಿದೆ. ನಿರಂತರವಾಗಿ ಪೆಟ್ರೋಲ್ ಬೆಲೆಗಳು ಹೆಚ್ಚಾಗ್ತಿವೆ. ಕೇಂದ್ರ ಸರ್ಕಾರ, ಭಾರತದಲ್ಲಿ ಪೆಟ್ರೋಲ್ ಬೆಲೆ ಮತ್ತು ಡೀಸೆಲ್ ಬೆಲೆಯನ್ನು ಕ್ರಮವಾಗಿ 5 ಮತ್ತು 10 ರೂಪಾಯಿಗಳಷ್ಟು ಕಡಿಮೆ ಮಾಡಿದೆ. ಆದ್ರೂ ದೇಶದಲ್ಲಿ ಪೆಟ್ರೋಲ್ ಬೆಲೆ 100 ರೂಪಾಯಿಗಿಂತ ಹೆಚ್ಚಿದೆ. ಭಾರತ ಇಂಧನ ಉತ್ಪಾದಿಸುವ ರಾಷ್ಟ್ರವಲ್ಲ. ಇಂಧನವನ್ನು ಆಮದು ಮಾಡಿಕೊಳ್ಳುವ ರಾಷ್ಟ್ರ.
ಉತ್ಪಾದಿಸುವ ರಾಷ್ಟ್ರಕ್ಕಿಂತ ಆಮದು ಮಾಡಿಕೊಳ್ಳುವ ರಾಷ್ಟ್ರದಲ್ಲಿ ಬೆಲೆ ಹೆಚ್ಚಿರುವುದು ಸಾಮಾನ್ಯ ಸಂಗತಿ. ಆದ್ರೆ ಇಂಧನ ಬೆಲೆಗಳು ಬೇರೆ ಬೇರೆ ರಾಷ್ಟ್ರಗಳಲ್ಲಿ ಬೇರೆ ಬೇರೆಯಾಗಿದೆ.
ವಾಹನ ಸವಾರರಿಗೆ ಮತ್ತೊಂದು ಗುಡ್ ನ್ಯೂಸ್: DL, RC ಸೇರಿದಂತೆ RTO ಗೆ ಸಂಬಂಧಿಸಿದ ಗಡುವು 2 ತಿಂಗಳು ವಿಸ್ತರಣೆ
ಪ್ರಪಂಚದಾದ್ಯಂತ ಪೆಟ್ರೋಲ್ ಬೆಲೆಗಳು : ಭಾರತದ ಪೆಟ್ರೋಲ್ ಬೆಲೆಗೆ ಹೋಲಿಕೆ ಮಾಡಿದ್ರೆ ಭಾರತಕ್ಕಿಂತ ದುಬಾರಿ ಪೆಟ್ರೋಲ್ ಬೆಲೆ ಹೊಂದಿರುವ ರಾಷ್ಟ್ರಗಳು ಸಾಕಷ್ಟಿವೆ. ವಿಶ್ವದಲ್ಲೇ ಹಾಂಗ್ ಕಾಂಗ್ ಜನರು ಹೆಚ್ಚು ಬೆಲೆಯನ್ನು ಪೆಟ್ರೋಲ್ ಗೆ ಪಾವತಿ ಮಾಡುತ್ತಾರೆ.
ಹಾಂಗ್ ಕಾಂಗ್ ನಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ $2.618 ಅಂದ್ರೆ ಸುಮಾರು 196.55 ರೂಪಾಯಿಯಿದೆ. ನಂತ್ರದ ಸ್ಥಾನದಲ್ಲಿ ನೆದರ್ಲ್ಯಾಂಡ್ ಇದೆ. ಇಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ $2.256 ಅಂದ್ರೆ ಸುಮಾರು 169.37 ರೂಪಾಯಿ. ಇಸ್ರೇಲ್ ವಿಶ್ವದ ಮೂರನೇ ಅತ್ಯಂತ ದುಬಾರಿ ಪೆಟ್ರೋಲ್ ಬೆಲೆಯನ್ನು ಹೊಂದಿದೆ. ಇಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ $2.212 ಅಥವಾ 166.07 ರೂಪಾಯಿ ಆಗಿದೆ. ನಾರ್ವೆ, ಫಿನ್‌ಲ್ಯಾಂಡ್, ಡೆನ್ಮಾರ್ಕ್, ಯುಕೆ, ಗ್ರೀಸ್, ಐಸ್‌ಲ್ಯಾಂಡ್ ಮತ್ತು ಸ್ವೀಡನ್ ಈ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
ಕಾರು ತಡೆದ ಪೊಲೀಸರ ವಿರುದ್ಧ ಸಚಿವ ಕೆಂಡಾಮಂಡಲ..! ಅಮಾನತುಗೊಳಿಸುವವರೆಗೂ ಸದನಕ್ಕೆ ಕಾಲಿಡಲಾರೆ ಎಂದು ಶಪಥ
ಇನ್ನು ಅತಿ ಕಡಿಮೆ ದರ ಪಾವತಿಸುವ ದೇಶಗಳ ಪಟ್ಟಿ ನೋಡೋದಾದ್ರೆ ವೆನೆಜುವೆಲಾ ಮೊದಲ ಸ್ಥಾನದಲ್ಲಿದೆ. ವೆನೆಜುವೆಲಾದಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ $0.025 ಅಥವಾ 1.88 ರೂಪಾಯಿಯಾಗಿದೆ. ಸಿರಿಯಾ ಎರಡನೇ ಸ್ಥಾನದಲ್ಲಿದೆ. ಅಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ $ 0.060 ಅಥವಾ 4.50 ರೂಪಾಯಿಯಾಗಿದೆ. ನಂತ್ರ ಅಂಗೋಲಾ ಅಗ್ಗದ ಪೆಟ್ರೋಲ್ ದರ ಹೊಂದಿದೆ. ಅಲ್ಲಿನ ಜನರು $0.274 ಅಂದ್ರೆ 20.57 ರೂಪಾಯಿ ಪಾವತಿ ಮಾಡುತ್ತಾರೆ.