ಮಧ್ಯ ಪ್ರದೇಶ ಪೊಲೀಸ್‌ನ ಮಹಿಳಾದ ಪೇದೆಯೊಬ್ಬರು ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಈ ಕ್ರಿಯೆಗೆ ಅಗತ್ಯವಿರುವ ಮಾನಸಿಕ ಹಾಗೂ ದೈಹಿಕ ಪರೀಕ್ಷೆಗಳಿಗೆ ಒಳಪಟ್ಟ ಬಳಿಕ ಈ ಪೇದೆ 2019ರಲ್ಲಿ ಅರ್ಜಿ ಸಲ್ಲಿಸಿದ್ದರು.
ಈ ಸರ್ಜರಿಗೆ ಒಳಗಾಗಲು ಗ್ವಾಲಿಯರ್ ಹಾಗೂ ದೆಹಲಿಯ ಅನೇಕ ವೈದ್ಯರು ಈ ಪೇದೆಗೆ ಸಲಹೆ ನೀಡಿದ್ದರು ಎಂದು ಗೃಹ ಸಚಿವ ನರೋತ್ತಮ್ ಮಿಶ್ರಾ ತಿಳಿಸಿದ್ದಾರೆ. “ಲಿಂಗ ಬದಲಾವಣೆ ಪ್ರತಿಯೊಬ್ಬ ವ್ಯಕ್ತಿಯ ವೈಯಕ್ತಿಕ ಹಕ್ಕಾಗಿದ್ದು, ಇದೇ ವಿಷಯವಾಗಿ ಪೇದೆಗೆ ಅನುಮತಿ ನೀಡಲಾಗಿದೆ,” ಎಂದಿದ್ದಾರೆ ಮಿಶ್ರಾ.
ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಒಮಿಕ್ರಾನ್ ಕರಿನೆರಳು
ಈ ಬಗ್ಗೆ ಮಾತನಾಡಿದ ರಾಜ್ಯದ ಗೃಹ ಇಲಾಖೆಯ ಮುಖ್ಯ ಕಾರ್ಯದರ್ಶಿ ರಾಜೇಶ್ ಅರೋರಾ, “ಆಕೆಯ ಫೈಲ್ ನನ್ನ ಮುಂದೆ ಬರುತ್ತಲೇ ಅವರು ಖುದ್ದಾಗಿ ನನ್ನ ಮುಂದೆ ಹಾಜರಾಗಿದ್ದಾರೆ. ಮಹಿಳೆಯ ದೇಹದೊಳಗೆ ಪುರುಷ ಹೊಕ್ಕಂತೆ ತಮಗೆ ಭಾಸವಾಗುತ್ತಿದೆ ಎಂದು ಈ ವೇಳೆ ಅವರು ಹೇಳಿಕೊಂಡಿದ್ದರು,” ಎಂದಿದ್ದಾರೆ.
ದೆಹಲಿಯ ಏಮ್ಸ್‌ನಲ್ಲಿ ಈ ಪೇದೆ ಸರ್ಜರಿಗೆ ಒಳಗಾಗುವ ಸಾಧ್ಯತೆ ಇದೆ. ತಮ್ಮ ಲಿಂಗ ಬದಲಾವಣೆ ಚಿಕಿತ್ಸೆಗೆ ತಮ್ಮದೇ ಉಳಿತಾಯದ ಹಣವನ್ನು ವಿನಿಯೋಗಿಸಲಿದ್ದಾರೆ ಇವರು.
ಮಹಾರಾಷ್ಟ್ರದ ಬೀಡ್‌ನಲ್ಲಿ ಪೇದೆಯಾಗಿರುವ ಲಲಿತಾ ಸಾಳ್ವೆ ಅವರು 2018ರಲ್ಲಿ ಹೀಗೆಯೇ ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಹೀಗೆ ಮಾಡಿದ ದೇಶದ ಮೊದಲ ಮಹಿಳಾ ಪೇದೆ ಲಲಿತಾ ಆಗಿದ್ದಾರೆ.