ಕೊರೊನಾ ವೈರಸ್ ಹೊಸ ರೂಪಾಂತರ ಒಮಿಕ್ರಾನ್ ಪ್ರಪಂಚದಾದ್ಯಂತ ಆತಂಕಕ್ಕೆ ಕಾರಣವಾಗಿದೆ.ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ.
ಹೊಸ ರೂಪಾಂತರದಿಂದ ರಕ್ಷಣೆ ಪಡೆಯಲು ಸರ್ಕಾರಗಳು ಸಾಕಷ್ಟು ಕ್ರಮಕೈಗೊಳ್ಳುತ್ತಿವೆ. ದೆಹಲಿ ಸರ್ಕಾರ, ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ಪ್ರಸ್ತಾವನೆ ನೀಡಿದೆ. ಕೊರೊನಾ ಲಸಿಕೆ ಪಡೆಯದ ಜನರಿಗೆ ಸಾರ್ವಜನಿಕ ಸ್ಥಳಗಳಿಗೆ ನಿರ್ಬಂಧ ಹೇರುವ ಬಗ್ಗೆ ಸೂಚನೆ ನೀಡಲಾಗಿದೆ.
ದೆಹಲಿ ಸರ್ಕಾರದ ಪ್ರಸ್ತಾಪದ ಪ್ರಕಾರ, ಇಲ್ಲಿಯವರೆಗೆ ಒಂದೇ ಒಂದು ಡೋಸ್ ಕೊರೊನಾ ಲಸಿಕೆ ಪಡೆಯದ ಜನರಿಗೆ ದೆಹಲಿ ಮೆಟ್ರೋ, ಡಿಟಿಸಿ ಬಸ್‌ಗಳು, ಸಿನಿಮಾ ಹಾಲ್‌ಗಳು, ಮಾಲ್‌ಗಳು, ಧಾರ್ಮಿಕ ಸ್ಥಳಗಳು, ರೆಸ್ಟೋರೆಂಟ್‌ಗಳು, ಸ್ಮಾರಕಗಳು, ಸಾರ್ವಜನಿಕ ಉದ್ಯಾನವನಗಳಿಗೆ ಪ್ರವೇಶ ನಿಷೇಧಿಸಲಾಗುವುದು. ಡಿಸೆಂಬರ್ 15 ರಿಂದ ಕೊರೊನಾ ಲಸಿಕೆ ಪಡೆಯದ ಜನರಿಗೆ ಸರ್ಕಾರಿ ಕಚೇರಿ ಮತ್ತು ಸಾರ್ವಜನಿಕ ಸ್ಥಳಗಳ ಬಾಗಿಲು ಮುಚ್ಚಲಿದೆ.
ಕನಿಷ್ಠ ಒಂದು ಡೋಸ್ ಲಸಿಕೆ ಪಡೆದವರಿಗೆ ಮಾತ್ರ ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಲು ಅವಕಾಶ ನೀಡಲಾಗುವುದು ಎಂದು ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ. ಲಸಿಕೆ ಹಾಕಿಸಿಕೊಂಡವರಿಗೆ ನಗದು ಬಹುಮಾನ ಅಥವಾ ರಿಯಾಯಿತಿಯಂತಹ ಪ್ರೋತ್ಸಾಹ ನೀಡಬೇಕೆಂದು ಸೂಚಿಸಲಾಗಿದೆ.
ಒಮಿಕ್ರಾನ್ ರೂಪಾಂತರದ ಅಪಾಯವು ನಿರಂತರವಾಗಿ ಹೆಚ್ಚುತ್ತಿದೆ. ಕನಿಷ್ಠ 23 ದೇಶಗಳಿಗೆ ಇದು ಹರಡಿದೆ ಎಂದು ಡಬ್ಲ್ಯುಎಚ್ ಒ ಅಂದಾಜಿಸಿದೆ.