ಉತ್ತರ ಪ್ರದೇಶದ ಪ್ರಾಥಮಿಕ ಶಾಲೆಯೊಂದರಲ್ಲಿ ಶಿಕ್ಷಾ ಮಿತ್ರನಾಗಿ ಕೆಲಸ ಮಾಡುತ್ತಿರುವ ವ್ಯಕ್ತಿಯೊಬ್ಬ ಅಪ್ರಾಪ್ತ ವಯಸ್ಸಿನ ಮೂವರು ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ರಾಜ್ಯದ ರಾಮ್ಪುರ ಜಿಲ್ಲೆಯಲ್ಲಿ ಘಟನೆ ಜರುಗಿದೆ.
ಸಂತ್ರಸ್ತರೆಲ್ಲಾ ಮೂರನೇ ತರಗತಿ ಮಕ್ಕಳಾಗಿದ್ದಾರೆ. ಘಟನೆ ಬೆಳಕಿಗೆ ಬರುತ್ತಲೇ ಶಾಲೆಯ ಸುತ್ತ ಅನೇಕ ಮಹಿಳೆಯರು ಜಮಾಯಿಸಿದ್ದರು. ಮಕ್ಕಳು ತಮಗಾದ ಹಿಂಸೆಯನ್ನು ಹೆತ್ತವರ ಬಳಿ ವಿವರಿಸಿದಾಗ ಘಟನೆ ಬೆಳಕಿಗೆ ಬಂದಿದೆ.
ಮೂಲ ವೇತನ ಹೆಚ್ಚಳದ ನಿರೀಕ್ಷೆಯಲ್ಲಿದ್ದ ಸರ್ಕಾರಿ ನೌಕರರಿಗೆ ಇಲ್ಲಿದೆ ಮಹತ್ವದ ಮಾಹಿತಿ
ಆಪಾದಿತನನ್ನು ಬಂಧಿಸಿರುವ ಪೊಲೀಸರು ಆತನ ವಿರುದ್ಧ ಐಪಿಸಿಯ 354ನೇ ವಿಧಿ (ಮಹಿಳೆಯ ಮಾನಹರಣ ಮಾಡುವ ಯತ್ನ) ಹಾಗೂ ಮಕ್ಕಳ ವಿರುದ್ಧ ಲೈಂಗಿಕ ದೌರ್ಜನ್ಯ ವಿರೋಧಿ ಕಾನೂನಿನ (ಪೋಕ್ಸೋ) ಅಡಿ ಪ್ರಕರಣ ದಾಖಲಿಸಲಾಗಿದೆ.
ತನ್ನ ಬಟ್ಟೆಯನ್ನು ಕಳಚಿ ಖಾಸಗಿ ಅಂಗಗಳನ್ನು ಈತ ಮುಟ್ಟುತ್ತಿದ್ದ ಎಂದು ಮತ್ತೊಬ್ಬ ಸಂತ್ರಸ್ತೆ ತನ್ನ ತಾಯಿಯೊಂದಿಗೆ ಹೇಳಿಕೊಂಡಿದ್ದಾಳೆ. ವಿವಾಹಿತನಾಗಿರುವ ಆಪಾದಿತ ಕಳೆದ ನಾಲ್ಕು ವರ್ಷಗಳಿಂದ ಈ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದಾನೆ.