alex Certify BIG NEWS: ಜಗತ್ತಿನ ಮೊದಲ ವಿದ್ಯುತ್ ಸ್ವಯಂ-ಚಾಲಿತ ನೌಕೆ ಲೋಕಾರ್ಪಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಜಗತ್ತಿನ ಮೊದಲ ವಿದ್ಯುತ್ ಸ್ವಯಂ-ಚಾಲಿತ ನೌಕೆ ಲೋಕಾರ್ಪಣೆ

ಸಂಪೂರ್ಣ ವಿದ್ಯುತ್‌ ಚಾಲಿತವಾದ ಹಾಗೂ ಸ್ವಯಂ-ಚಾಲಿತವಾದ ಜಗತ್ತಿನ ಮೊದಲ ಕಂಟೇನರ್‌ ಹಡಗು ತನ್ನ ಮೊದಲ ಯಾನವನ್ನು ನಾರ್ವೆಯ ದಕ್ಷಿಣ ಕರಾವಳಿಯವರೆಗೆ ಮಾಡಲು ಸಜ್ಜಾಗುತ್ತಿದೆ.

ದಿ ಯಾರಾ ಬಿರ್ಕ್ಲ್ಯಾಂಡ್‌ ಹೆಸರಿನ ಈ ಹಡಗು 80 ಮೀಟರ್‌ ಉದ್ದವಿದ್ದು, ಫೀಡರ್‌ ಆಗಿರುವ ಈ ಹಡಗು, ದಕ್ಷಿಣ ನಾರ್ವೆಯ ಪಾರ್ಸ್‌ಗ್ರನ್‌ನಲ್ಲಿರುವ ತಯಾರಾದ ಗೊಬ್ಬರವನ್ನು ಉತ್ಪಾದನಾ ಘಟಕದಿಂದ ಬ್ರೆವಿಕ್‌ನಲ್ಲಿರುವ ಕಂಪನಿಯ ರಫ್ತು ಬಂದರಿನ ನಡುವೆ ಇರುವ 14 ಕಿಮೀ ದೂರದ ಪ್ರಯಾಣವನ್ನು ಲಾರಿಗಳ ಬದಲಿಗೆ ತಾನೇ ಸರಕು ಹೊರಲು ಮುಂದಾಗಲಿದೆ.

ಈ ಹಡಗಿನ ಬಳಕೆಯಿಂದಾಗಿ ವಾರ್ಷಿಕ 1,000 ಟನ್‌ಗಳಷ್ಟು ಕಡಿಮೆ ಇಂಗಾಲ ಉತ್ಪಾದನೆಯಾಗುತ್ತದೆ. ಇದು ರಸ್ತೆ ಮುಖಾಂತರ 40,000 ಡೀಸೆಲ್ ಚಾಲಿತ ಜರ್ನಿಗಳಿಂದ ಉತ್ಪತ್ತಿಯಾಗುವ ಇಂಗಾಲದ ಪ್ರಮಾಣವಾಗಿದೆ.

ವಾರ್ಡ್ ನಾರ್ವೆ ಹೆಸರಿನ ಕಂಪನಿ ನಿರ್ಮಾಣ ಮಾಡಿರುವ ಈ ನೌಕೆಯು ಸೆನ್ಸಾರ್‌ಗಳು ಹಾಗೂ ರಿಮೋಟ್ ನಿಯಂತ್ರಣದ ಮೂಲಕ ಸ್ವಯಂ ನಿರ್ವಹಣೆಯ ಕ್ಷಮತೆ ಹೊಂದಿವೆ. ಸ್ವಿಸ್ ಲೆಕ್ಲೇನ್‌ನ ಬ್ಯಾಟರಿಗಳಿಂದ ನೌಕೆ ಕಾರ್ಯನಿರ್ವಹಿಸಲಿದ್ದು, ಎಂಟು ಬ್ಯಾಟರಿ ಕೋಣೆಗಳಲ್ಲಿ 7 ಮೆಗಾವ್ಯಾಟ್‌ ಗಂಟೆಗಳಷ್ಟು ಸಾಮರ್ಥ್ಯ ಹೊಂದಿರಲಿದೆ.

ಮಾನವರ ನೆರವಿನ ಅಗತ್ಯವೇ ಇಲ್ಲದೆ ಈ ಹಡಗು ತನ್ನಿಂತಾನೇ ಸರಕನ್ನು ತುಂಬುವ/ಇಳಿಸುವ ಕೆಲಸ ಮಾಡುವುದಲ್ಲದೇ, ತನ್ನಿಂತಾನೇ ಬ್ಯಾಟರಿಗಳನ್ನು ರೀಚಾರ್ಜ್ ಮಾಡಿಕೊಳ್ಳಬಲ್ಲದಾಗಿದೆ. ನೀರಿನಲ್ಲಿ ಚಲಿಸುವ ವೇಳೆ ಸೆನ್ಸಾರ್‌ಗಳು ಯಾವುದಾದರೂ ಅಪಾಯಕಾರಿ ವಸ್ತು ಕಂಡುಬಂದಲ್ಲಿ ಕೂಡಲೇ ಪತ್ತೆ ಮಾಡುವ ಮೂಲಕ ಅಪಘಾತಗಳನ್ನು ತಪ್ಪಿಸಲು ನೆರವಾಗಲಿವೆ.

ಆರಂಭದಲ್ಲಿ ವಾರಕ್ಕೆ ಎರಡು ಯಾನಗಳನ್ನು ಮಾಡುವ ಈ ನೌಕೆಯಲ್ಲಿ 20 ಅಡಿಯ 120 ಕಂಟೇನರ್‌ಗಳಷ್ಟು ರಸಗೊಬ್ಬರವನ್ನು ಸಾಗಾಟ ಮಾಡಬಹುದಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...