ಲಕ್ನೋ: ಉತ್ತರ ಪ್ರದೇಶದಲ್ಲಿ ಪ್ರೌಢಶಾಲಾ ಮಟ್ಟಕ್ಕಿಂತ ಕೆಳಗಿನ ಪ್ರತಿ ಮೂರು ವಿದ್ಯಾರ್ಥಿಗಳಲ್ಲಿ ಒಬ್ಬರು ಯಾವುದಾದರೂ ರೂಪದಲ್ಲಿ ತಂಬಾಕು ಸೇವಿಸುತ್ತಾರೆ ಎಂಬ ಭಯಾನಕ ಮಾಹಿತಿಯನ್ನು, ವಿಶ್ವ ಆರೋಗ್ಯ ಸಂಸ್ಥೆಯ ಜಾಗತಿಕ ಯುವ ತಂಬಾಕು ಸಮೀಕ್ಷೆಯು (ಜಿವೈಟಿಎಸ್) ತಿಳಿಸಿದೆ.
ಸುರಕ್ಷಿತ ಸ್ಥಳವನ್ನು ಹುಡುಕುತ್ತಾ 37.4 ಪ್ರತಿಶತ ವಿದ್ಯಾರ್ಥಿಗಳು ತಮ್ಮ ಮನೆಗಳಲ್ಲಿ ಧೂಮಪಾನ ಮಾಡುತ್ತಾರೆ. ಹಾಗೂ 19.8 ಪ್ರತಿಶತದಷ್ಟು ವಿದ್ಯಾರ್ಥಿಗಳು ಸ್ನೇಹಿತರ ಮನೆಯಲ್ಲಿ ಧೂಮಪಾನ ಮಾಡುತ್ತಾರೆ ಎಂದು ಸಮೀಕ್ಷೆಯು ಕಂಡುಹಿಡಿದಿದೆ.
ವರದಿಯ ಪ್ರಕಾರ, ಸುಮಾರು 13.5 ಪ್ರತಿಶತದಷ್ಟು ವಿದ್ಯಾರ್ಥಿಗಳು ಶಾಲೆಯಲ್ಲಿ ಧೂಮಪಾನ ಮಾಡುತ್ತಾರೆ. ಶೇ. 10.8 ರಷ್ಟು ಮಂದಿ ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಶೇ. 8.9 ರಷ್ಟು ಮಂದಿ ಸಾಮಾಜಿಕ ಕಾರ್ಯಕ್ರಮಗಳಲ್ಲಿ, ಶೇ. 9.7 ರಷ್ಟು ವಿದ್ಯಾರ್ಥಿಗಳು ವಿವಿಧ ಸ್ಥಳಗಳಲ್ಲಿ ಧೂಮಪಾನ ಮಾಡುತ್ತಾರೆ ಎಂದು ತಿಳಿಸಿದೆ.