ಐಪಿಎಲ್ 2022ಕ್ಕೆ ಭರ್ಜರಿ ತಯಾರಿ ನಡೆಯುತ್ತಿದೆ. ಪ್ರಾಂಚೈಸಿಗಳು ತಾವು ಉಳಿಸಿಕೊಳ್ಳುವ ಎಲ್ಲಾ ಆಟಗಾರರ ಪಟ್ಟಿ ಬಿಡುಗಡೆ ಮಾಡಿವೆ. ಪ್ರಾಂಚೈಸಿಯಲ್ಲಿ ಉಳಿದುಕೊಂಡು ಇಬ್ಬರು ಆಟಗಾರರಿಗೆ ಲಾಟರಿ ಹೊಡೆದಿದೆ. ಲಕ್ಷದಲ್ಲಿದ್ದ ಆಟಗಾರರ ಸಂಭಾವನೆ ಕೋಟಿಯಾಗಿದೆ.
ಚೆನ್ನೈ ಸೂಪರ್ ಕಿಂಗ್ಸ್, ಬ್ಯಾಟ್ಸ್ ಮನ್ ರಿತುರಾಜ್ ಗಾಯಕ್ ವಾಡ್ ಅವರನ್ನು ಉಳಿಸಿಕೊಂಡಿದೆ. 2021ರಲ್ಲಿ ರಿತುರಾಜ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಅವರು 16 ಪಂದ್ಯಗಳಲ್ಲಿ 636 ರನ್ ಗಳಿಸಿದ್ದರು. 2020 ರಲ್ಲಿ ಅವರನ್ನು ಸಿಎಸ್ಕೆ ತಂಡ 40 ಲಕ್ಷ ರೂಪಾಯಿ ಮೂಲ ಬೆಲೆಗೆ ಖರೀದಿಸಿತ್ತು. ಆದರೆ ಈಗ 6 ಕೋಟಿಗೆ ರಿತುರಾಜ್ ಅವರನ್ನು ಉಳಿಸಿಕೊಂಡಿದೆ.
ಇನ್ನು, ಕೆಕೆಆರ್ ಬ್ಯಾಟ್ಸ್ ಮನ್ ವೆಂಕಟೇಶ್ ಅಯ್ಯರ್, ಐಪಿಎಲ್ 2021 ರಲ್ಲಿ ತಮ್ಮ ಪ್ರದರ್ಶನದ ಮೂಲಕ ಎಲ್ಲರ ಹೃದಯ ಗೆದ್ದಿದ್ದರು. 2021ರಲ್ಲಿ 10 ಪಂದ್ಯಗಳಲ್ಲಿ 370 ರನ್ ಗಳಿಸಿದ್ದ ಅಯ್ಯರ್ ಅವರನ್ನು ಕೆಕೆಆರ್ 20 ಲಕ್ಷಕ್ಕೆ ಖರೀದಿಸಿತ್ತು. ಈಗ ತಂಡ, ಅಯ್ಯರ್ ಅವರನ್ನು 8 ಕೋಟಿಗೆ ಉಳಿಸಿಕೊಂಡಿದೆ.
ಸಿ.ಎಸ್.ಕೆ. ಆಟಗಾರರ ಪಟ್ಟಿ : ರವೀಂದ್ರ ಜಡೇಜಾ (16 ಕೋಟಿ ರೂ.), ಮಹೇಂದ್ರ ಸಿಂಗ್ ಧೋನಿ (12 ಕೋಟಿ ರೂ.), ಮೊಯಿನ್ ಅಲಿ ( 8 ಕೋಟಿ ರೂ.), ರಿತುರಾಜ್ ಗಾಯಕ್ವಾಡ್ (6 ಕೋಟಿ ರೂ.). ಸಿ.ಎಸ್.ಕೆ. ತಂಡದ ಬಳಿ 90 ಕೋಟಿ ರೂಪಾಯಿಯಿತ್ತು. ಅದರಲ್ಲಿ 42 ಕೋಟಿ ಖರ್ಚು ಮಾಡಿದೆ. ಈಗ ತಂಡದ ಬಳಿ 48 ಕೋಟಿ ರೂಪಾಯಿ ಉಳಿದಿದೆ.
ಕೆಕೆಆರ್ ತಂಡದ ಆಟಗಾರರು : ಆಂಡ್ರೆ ರಸೆಲ್ ( 12 ಕೋಟಿ ರೂ.), ವರುಣ್ ಚಕ್ರವರ್ತಿ ( 8 ಕೋಟಿ ರೂ.), ವೆಂಕಟೇಶ್ ಅಯ್ಯರ್ ( 8 ಕೋಟಿ ರೂ.), ಸುನೀಲ್ ನರೈನ್ ( 6 ಕೋಟಿ ರೂ.)