alex Certify ವರ್ಷದ ಕೊನೆಯ ಸೂರ್ಯ ಗ್ರಹಣ: ಯಾವ ರಾಶಿ ಮೇಲೆ ಯಾವ ಪರಿಣಾಮ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವರ್ಷದ ಕೊನೆಯ ಸೂರ್ಯ ಗ್ರಹಣ: ಯಾವ ರಾಶಿ ಮೇಲೆ ಯಾವ ಪರಿಣಾಮ….?

ವರ್ಷದ ಕೊನೆಯ ಸೂರ್ಯಗ್ರಹಣ ಶನಿವಾರ, ಡಿಸೆಂಬರ್ ನಾಲ್ಕರಂದು ಸಂಭವಿಸಲಿದೆ. ಭಾರತೀಯ ಕಾಲಮಾನದ ಪ್ರಕಾರ ಬೆಳಿಗ್ಗೆ 10 ಗಂಟೆ 59 ನಿಮಿಷಕ್ಕೆ ಸೂರ್ಯ ಗ್ರಹಣ ಶುರುವಾಗಲಿದೆ. ಮಧ್ಯಾಹ್ನ 3 ಗಂಟೆ 7 ನಿಮಿಷಕ್ಕೆ ಗ್ರಹಣ ಮುಗಿಯಲಿದೆ. ವೃಶ್ಚಿಕ ರಾಶಿ ಹಾಗೂ ಜೇಷ್ಠ ನಕ್ಷತ್ರದಲ್ಲಿ ಗ್ರಹಣ ಸಂಭವಿಸಲಿದೆ.

ಗ್ರಹಣ, ಅಂಟಾರ್ಟಿಕಾ, ದಕ್ಷಿಣ ಆಫ್ರಿಕಾ, ದಕ್ಷಿಣ ಅಮೇರಿಕಾ ಮತ್ತು ನಮೀಬಿಯಾ ದೇಶಗಳಲ್ಲಿ ಗೋಚರಿಸಲಿದೆ. ಭಾರತದಲ್ಲಿ ಗ್ರಹಣ ಕಾಣುವುದಿಲ್ಲ. ಹಾಗಾಗಿ ಭಾರತೀಯರಿಗೆ ಸೂತಕ ಮಾನ್ಯವಾಗುವುದಿಲ್ಲ. ಆದ್ರೆ ಗ್ರಹಣದ ಪರಿಣಾಮ ರಾಶಿಗಳ ಮೇಲೆ ಆಗಲಿದೆ.

ಕೇತುವಿನೊಂದಿಗೆ ಸೂರ್ಯನ ಸಂಯೋಗವಾಗಲಿದೆ. ಈ ಗ್ರಹಣದಲ್ಲಿ ಚಂದ್ರ ಮತ್ತು ಬುಧನ ಸಂಯೋಗವಾಗಲಿದೆ. ಸೂರ್ಯ ಹಾಗೂ ಕೇತುವಿನ ಸಂಯೋಗ, ದುರ್ಘಟನೆಗಳಿಗೆ ಕಾರಣವಾಗುತ್ತದೆ. ರಾಜಕೀಯದಲ್ಲೂ ಸಾಕಷ್ಟು ಬದಲಾವಣೆ ತರುತ್ತದೆ. ವೃಶ್ಚಿಕ ರಾಶಿ ವಿಷದ ರಾಶಿಯಾಗಿದ್ದು, ಸಾಂಕ್ರಾಮಿಕ ರೋಗ ಹೆಚ್ಚಾಗುವ ಸಾಧ್ಯತೆಯಿದೆ. ಆಕಸ್ಮಿಕ ಅಪಘಾತಗಳು ಮತ್ತು ದುರಂತ ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ.

ಸೂರ್ಯ ಗ್ರಹಣ, ರಾಶಿಯ ಮೇಲೆ ಪರಿಣಾಮ :

ಮೇಷ-  ತಮ್ಮ ಆರೋಗ್ಯ ಮತ್ತು ಅಪಘಾತಗಳ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ.

ವೃಷಭ – ವ್ಯವಹಾರ ಮತ್ತು ವೈವಾಹಿಕ ಜೀವನಕ್ಕೆ ಗಮನ ಕೊಡಿ.

ಮಿಥುನ- ಮಿಥುನ ರಾಶಿಯ ಜನರ ಸಮಸ್ಯೆ ಕೊನೆಗೊಳ್ಳಲಿದೆ.

ಕರ್ಕ – ಆರೋಗ್ಯ ಮತ್ತು ಮಾನಸಿಕ ಸ್ಥಿತಿ ಹದಗೆಡಬಹುದು.

ಸಿಂಹ- ಅನಗತ್ಯ ಚಿಂತೆ ಮತ್ತು ವಿವಾದ ಕಾಡಬಹುದು.

ಕನ್ಯಾ-  ಸ್ಥಗಿತಗೊಂಡ ಕೆಲಸಗಳು ಪೂರ್ಣಗೊಳ್ಳಲಿವೆ.

ತುಲಾ-  ಕೌಟುಂಬಿಕ ಜೀವನ ಮತ್ತು ಅಪಘಾತಗಳ ಬಗ್ಗೆ ಕಾಳಜಿ ವಹಿಸಬೇಕು.

ವೃಶ್ಚಿಕ– ಕೆಲಸ ಮತ್ತು ನಿರ್ಧಾರ ತೆಗೆದುಕೊಳ್ಳುವಾಗ ಜಾಗರೂಕರಾಗಿರಬೇಕು.

ಧನು- ಅಪಘಾತ ಮತ್ತು ವಿಫಲತೆಯಿಂದ ರಕ್ಷಿಸಿಕೊಳ್ಳುವ ಅಗತ್ಯವಿದೆ.

ಮಕರ- ದೊಡ್ಡ ಮತ್ತು ಪ್ರಯೋಜನಕಾರಿ ಬದಲಾವಣೆಯಾಗಲಿದೆ.

ಕುಂಭ- ಕೆಲಸದಲ್ಲಿ ಯಶಸ್ಸು ಸಿಗಲಿದೆ.

ಮೀನ- ನಿರ್ಧಾರಗಳು ಮತ್ತು ಮದುವೆಯ ವಿಷಯದಲ್ಲಿ ಎಚ್ಚರಿಕೆ ಅಗತ್ಯ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...