ಮನೆಯಲ್ಲೇ ಕುಳಿತು ಆದಾಯ ಗಳಿಸುವ ವಿಧಾನವನ್ನು ಹುಡುಕುವ ಮಂದಿಗೆ ನಾಣ್ಯ ಸಂಗ್ರಹವೂ ದುಡ್ಡು ಮಾಡುವ ಒಳ್ಳೆಯ ಮೂಲ. ಯಾವುದೇ ಪರಿಶ್ರಮ ಇಲ್ಲದೇ ತ್ವರಿತವಾಗಿ ದುಡ್ಡು ಮಾಡಲು ಇದೊಂದು ಒಳ್ಳೆಯ ಮಾರ್ಗ.
ಮನೆಯಲ್ಲೇ ಕುಳಿತು ಒಂದೂವರೆ ಲಕ್ಷ ರೂಪಾಯಿಯಷ್ಟು ಸಂಪಾದಿಸಬಲ್ಲ ಆಯ್ಕೆಯೊಂದರ ಕುರಿತು ನಿಮಗೆ ನಾವು ತಿಳಿಸುತ್ತಿದ್ದೇವೆ.
25 ಪೈಸೆ ಮುಖಬೆಲೆಯ ಸಿಲ್ವರ್ ನಾಣ್ಯ ನಿಮ್ಮದಾಗಿದ್ದಲ್ಲಿ ನೀವೂ ಅದನ್ನು ಆನ್ಲೈನ್ನಲ್ಲಿ 1.5 ಲಕ್ಷ ರೂ.ಗಳಿಗೆ ಮಾರಬಹುದಾಗಿದೆ. ಕ್ವಿಕರ್ನಲ್ಲಿ ಈ ಅಪರೂಪದ ನಾಣ್ಯಗಳ ಪಟ್ಟಿಯನ್ನು ಮಾಡಲಾಗಿದೆ. ಮೊದಲು ಕ್ವಿಕರ್ ಪೋರ್ಟಲ್ನಲ್ಲಿ ನೋಂದಣಿಯಾಗಿ ಬಳಿಕ ನೀವು ಈ ಕರೆನ್ಸಿಯನ್ನು ಮಾರಬಹುದಾಗಿದೆ.
ಟ್ವಿಟರ್ನ ಹೊಸ ಬಾಸ್ಗೆ ಶುಭಾಶಯ ಕೋರಿದ ಎಲಾನ್ ಮಸ್ಕ್
ಹಳೆಯ ನಾಣ್ಯಗಳನ್ನು ಇಂಡಿಯಾಮಾರ್ಟ್.ಕಾಮ್ನಲ್ಲೂ ಸಹ ಮಾರಾಟ ಮಾಡಲಾಗುತ್ತಿದೆ. ಆಂಟಿಕ್ ನಾಣ್ಯಗಳ ಸಂಗ್ರಹದ ಅಭ್ಯಾಸ ನಿಮಗಿದ್ದಲ್ಲಿ ಈ ನಾಣ್ಯಗಳನ್ನು ನೀವು ಓಎಲ್ಎಕ್ಸ್ನಲ್ಲೂ ಸಹ ಮಾರಬಹುದಾಗಿದೆ.
ನಿಮ್ಮಲ್ಲಿ 5ಪೈಸೆ ಹಾಗೂ 10ಪೈಸೆಯ ನಾಣ್ಯಗಳಿದ್ದಲ್ಲಿ, ಅವುಗಳನ್ನು ಮಾರಿ ದುಡ್ಡು ಮಾಡಬಹುದಾಗಿದೆ. 2002ರಲ್ಲಿ ಟಂಕಿಸಲಾದ ಈ ನಾಣ್ಯಗಳಲ್ಲಿ ಮಾತಾ ವೈಷ್ಣೋದೇವಿಯ ಚಿತ್ರವಿರಬೇಕು. ನಿಮ್ಮಲ್ಲಿ ಈ ನಾಣ್ಯಗಳಿದ್ದಲ್ಲಿ ನೀವು ಬೇಕಾದಷ್ಟು ದುಡ್ಡು ಮಾಡಬಹುದಾಗಿದೆ.