ಒಮಿಕ್ರಾನ್ ಕೊರೋನ ವೈರಸ್ ರೂಪಾಂತರವು ಸೋಂಕು ಉಲ್ಬಣಗೊಳ್ಳುವ ಹೆಚ್ಚಿನ ಅಪಾಯವನ್ನು ಹೊಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಸೋಮವಾರದಂದು ಹೇಳಿದೆ. ಹೆಚ್ಚಿನ ದೇಶಗಳು ತಮ್ಮ ಗಡಿಗಳನ್ನು ಮುಚ್ಚಿರುವುದರಿಂದ ಎರಡು ವರ್ಷಗಳ ಸಾಂಕ್ರಾಮಿಕ ರೋಗದಿಂದ ಆರ್ಥಿಕ ಚೇತರಿಕೆಯ ಭಯವನ್ನು ಪುನರುಜ್ಜೀವನಗೊಳಿಸಿದೆ.
ಭಾರತದಲ್ಲಿಯೂ ಕಳವಳಗಳು ಹೆಚ್ಚುತ್ತಿರುವಂತೆಯೇ, ದೇಶದ ಉನ್ನತ ಜೀನೋಮ್ ಸೀಕ್ವೆನ್ಸಿಂಗ್ ತಜ್ಞ ಡಾ.ಅನುರಾಗ್ ಅಗರವಾಲ್ ಅವರು, ಹೊಸ ರೂಪಾಂತರಕ್ಕೆ ಭಯಭೀತರಾಗಬೇಕಿಲ್ಲ ಎಂದು ಹೇಳಿದ್ದಾರೆ. ಒಮಿಕ್ರಾನ್ ಡೆಲ್ಟಾ ರೂಪಾಂತರಕ್ಕಿಂತ ಆರು ಪಟ್ಟು ಹೆಚ್ಚು ಹರಡುತ್ತದೆ ಎಂದು ಯಾವುದೇ ಅಧ್ಯಯನವು ತೀರ್ಮಾನಿಸಿದರೆ, ಅದು ಕೆಟ್ಟ ವಿಜ್ಞಾನವಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಒಮಿಕ್ರಾನ್ ಅಷ್ಟೊಂದು ಪ್ರಮಾಣದ ಅಪಾಯಕಾರಿಯಲ್ಲ ಎಂಬುದು ಡಾ. ಅಗರ್ವಾಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅನೇಕ ದೇಶಗಳು ವಿಮಾನಗಳನ್ನು ಏಕೆ ಸ್ಥಗಿತಗೊಳಿಸಿವೆ ಎಂಬುದು ಅರ್ಥವಾಗುತ್ತಿಲ್ಲ ಎಂದು ಅಗರ್ವಾಲ್ ತಿಳಿಸಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆ ತನ್ನ 194 ಸದಸ್ಯ ರಾಷ್ಟ್ರಗಳಿಗೆ ಸೋಂಕು ಉಲ್ಬಣಗೊಂಡು ತೀವ್ರ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ಸಲಹೆ ನೀಡಿದೆ. ಆದರೆ, ಕೊರೋನಾದಿಂದ ಸಂಭವಿಸಿರುವ ಸಾವುಗಳು ಇನ್ನೂ ಹೊಸ ರೂಪಾಂತರಕ್ಕೆ ಸಂಬಂಧಿಸಿದುದಲ್ಲ ಎಂದು ಅದು ಹೇಳಿದೆ.
ಲಸಿಕೆಗಳು ಮತ್ತು ಹಿಂದಿನ ಸೋಂಕುಗಳಿಂದ ದೇಹದಲ್ಲಿ ಉಂಟಾಗುವ ಪ್ರತಿಕಾಯಗಳಿಂದ ಒಮಿಕ್ರಾನ್ ಸಾಮರ್ಥ್ಯವನ್ನು ಅರ್ಥಮಾಡಿಕೊಳ್ಳಲು ಹೆಚ್ಚಿನ ಸಂಶೋಧನೆ ಅಗತ್ಯವಿದೆ. ಮುಂಬರುವ ವಾರಗಳಲ್ಲಿ ಹೆಚ್ಚಿನ ಡೇಟಾವನ್ನು ನಿರೀಕ್ಷಿಸಲಾಗಿದೆ ಎಂದು ಡಬ್ಲ್ಯೂಎಚ್ಒ ಹೇಳಿದೆ.
ಇನ್ನು ಯುಎಸ್ ಅಧ್ಯಕ್ಷ ಜೋ ಬಿಡೆನ್ ಕೂಡ ಡಾ. ಅಗರ್ವಾಲ್ ಮಾತಿಗೆ ಧ್ವನಿಗೂಡಿಸಿದ್ದಾರೆ. ಹೊಸ ರೂಪಾಂತರವು ಕಳವಳಕ್ಕೆ ಕಾರಣವಾಗಿದೆ. ಆದರೆ, ಪ್ಯಾನಿಕ್ ಅಲ್ಲ. ಹೀಗಾಗಿ ಯುಎಸ್ ನ ಎಲ್ಲಾ ಜನರು ಲಸಿಕೆ ಹಾಕಿಸುವಂತೆ ಅವರು ಒತ್ತಾಯಿಸಿದ್ದಾರೆ.
ಅಂದಹಾಗೆ, ರೂಪಾಂತರಿ ಒಮಿಕ್ರಾನ್ ನ ತೀವ್ರತೆಯನ್ನು ಅರ್ಥಮಾಡಿಕೊಳ್ಳಲು ವಾರಗಳೇ ಬೇಕಾಗಬಹುದು ಎಂದು ವಿಜ್ಞಾನಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.