ಟ್ವಿಟ್ಟರ್ ನೂತನ ಸಿಇಒ ಆಗಿ ಭಾರತೀಯ ಮೂಲದ ಪರಾಗ್ ಅಗರವಾಲ್ ನೇಮಕವಾಗುತ್ತಿದ್ದಂತೆ, ಭಾರತೀಯರಿಗೆ ಹೆಮ್ಮೆ ತಂದಿದ್ದಾರೆ. ಯಾವುದೇ ಕೆಲಸಕ್ಕೆ ಸೇರಿದ್ರೂ ಭಾರತೀಯರು ಸಾಮಾನ್ಯವಾಗಿ ಕೇಳುವ ಪ್ರಶ್ನೆಯೇನೆಂದರೆ ಸಂಬಳ ಎಷ್ಟು ಎಂಬುದು. ಇದು ಸ್ವತಃ ಟ್ವಿಟ್ಟರ್ ಸಿಇಒ ಅವರನ್ನು ಕೂಡ ಬಿಟ್ಟಿಲ್ಲ. ಗೂಗಲ್ ನಲ್ಲಿ ಭಾರತೀಯರು ಅವರ ಐಐಟಿ ಶ್ರೇಣಿ ಹಾಗೂ ವೇತನದ ಬಗ್ಗೆ ಹುಡುಕಾಟ ನಡೆಸಿದ್ದಾರೆ.
ಗೂಗಲ್ ಮತ್ತು ಮೈಕ್ರೋಸಾಫ್ಟ್‌ಗಾಗಿ ಕ್ರಮವಾಗಿ ಸುಂದರ್ ಪಿಚೈ ಮತ್ತು ಸತ್ಯ ನಾದೆಲ್ಲಾ ನಂತರ, ಭಾರತೀಯ ಮೂಲದ ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣ ದೈತ್ಯ ಟ್ವಿಟ್ಟರ್‌ನ ನಿಯಂತ್ರಣವನ್ನು ತೆಗೆದುಕೊಂಡಿದ್ದಾರೆ. ಇದಕ್ಕೆ ದೇಸಿ ಇಂಟರ್ನೆಟ್ ಬಳಕೆದಾರರು ಬಹಳ ಹೆಮ್ಮೆಪಡುತ್ತಿದ್ದಾರೆ. ಆದರೆ, ಟ್ವಿಟ್ಟರ್ ಸಿಇಒ ಅವರ ವೇತನ ಎಷ್ಟು ಎಂಬ ಹುಡುಕಾಟವು ಇದೀಗ ಗೂಗಲ್ ನ ಟ್ರೆಂಡಿಂಗ್ ಪಟ್ಟಿಯಲ್ಲಿದೆ.
ನಮ್ಮ ಭಾರತೀಯರಿಗೆ ಇದು ಸಾಮಾನ್ಯ ಅಭ್ಯಾಸವಾಗಿದೆ. ವೈಯಕ್ತಿಕ ವಿವರಗಳ ಬಗ್ಗೆಯೂ ದೇಸಿ ನೆಟ್ಟಿಗರು ಹುಡುಕಾಟ ನಡೆಸಿದ್ದಾರೆ ಅವರಿಗೆ ಮದುವೆಯಾಗಿದೆಯಾ..? ಅವರ ಪತ್ನಿ ಯಾರು, ಹೆಸರು ಏನು ಎಂಬ ಬಗ್ಗೆ ಕೂಡ ಸರ್ಚ್ ಮಾಡಿದ್ದಾರೆ.
ಪ್ರಸ್ತುತ ಟ್ವಿಟರ್ ಸಿಇಒ ಪರಾಗ್ ಅವರು ಐಐಟಿ ಪ್ರವೇಶ ಪರೀಕ್ಷೆಯಲ್ಲಿ 77ನೇ ರ್ಯಾಂಕ್ ಗಳಿಸಿದ್ದರು. ಅವರು ಐಐಟಿ ಬಾಂಬೆಯಿಂದ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್‌ನಲ್ಲಿ ಬಿ ಟೆಕ್ ಮತ್ತು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಪಿಎಚ್‌ಡಿ ಪಡೆದಿದ್ದಾರೆ. ಅವರು 2011 ರಲ್ಲಿ ಟ್ವಿಟ್ಟರ್‌ಗೆ ಸೇರುವ ಮೊದಲು ಮೈಕ್ರೋಸಾಫ್ಟ್, ಎಟಿ ಮತ್ತು ಟಿ ಲ್ಯಾಬ್ಸ್ ಮತ್ತು ಯಾಹೂಗಳಲ್ಲಿ ಅಲ್ಪಾವಧಿ ಕೆಲಸ ಮಾಡಿದ್ದರು.