ತಾನೇ ಹೆತ್ತ ಮಗುವನ್ನು ಮಾರಿದ್ದಲ್ಲದೇ ಕಳುವಾಗಿರುವುದಾಗಿ ದೂರು ಕೊಟ್ಟ ಮಹಿಳೆಯೊಬ್ಬಳನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ.
ನಗರದ ವೆಪೆರೆ ಠಾಣೆಯ ಪೊಲೀಸರ ಅತಿಥಿಯಾಗಿರುವ ಈಕೆ, ಆಗ ತಾನೇ ತನಗೆ ಜನಿಸಿದ ಮಗುವನ್ನು ಮಾರಿಕೊಂಡಿದ್ದು, ಇದಕ್ಕೆ ನೆರವಾದ ಮೂವರನ್ನು ಬಂಧಿಸಲಾಗಿದೆ. ಸಂತ್ರಸ್ತ ಮಗುವು ಸದ್ಯದ ಮಟ್ಟಿಗೆ ತಮಿಳುನಾಡು ಸಾಮಾಜಿಕ ಕಲ್ಯಾಣ ಇಲಾಖೆಯ ಆಶ್ರಯದಲ್ಲಿದೆ.
ಇಲ್ಲಿನ ಕವನ್ಗರಾಯ್ನ ಕೆಎಸ್ ನಗರದ ನಿವಾಸಿಯಾದ ಯಾಸ್ಮಿನ್ ಹೆಸರಿನ ಮಹಿಳೆ ಈ ಮಗುವಿನ ತಾಯಿಯಾಗಿದ್ದಾಳೆ. ಮಕ್ಕಳ ಕಳ್ಳರ ಜಾಲದೊಂದಿಗೆ ಭಾಗಿಯಾಗಿರುವ ಇಬ್ಬರು ವ್ಯಕ್ತಿಗಳು ತನ್ನ ಮಗುವನ್ನು ಕದ್ದು ಮಾರಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಳು ಯಾಸ್ಮಿನ್. ಯಾಸ್ಮಿನ್ ಜೊತೆಗೆ ಇಬ್ಬರು ದಲ್ಲಾಳಿಗಳಾದ ಜಯಗೀತಾ ಹಾಗೂ ಧನಂರನ್ನು ಇದೇ ವೇಳೆ ಪೊಲೀಸರು ಬಂಧಿಸಿದ್ದಾರೆ.
ಧೋನಿ ಫಾರ್ಮ್ ಹೌಸ್ ಗೆ ಬಂದ ಯಮಹಾ ಆರ್.ಡಿ. 350 : ಇಲ್ಲಿದೆ ರೇಸಿಂಗ್ ಡೆತ್ ಎಂದೇ ಹೆಸರಾಗಿದ್ದ ಈ ಬೈಕ್ ವಿಶೇಷತೆ
ಮಗುವನ್ನು ಖರೀದಿ ಮಾಡಿದ ಶಿವಕುಮಾರ್ ಐಯ್ಯರ್ ಎಂಬ ಹೆಸರಿನ ವ್ಯಕ್ತಿಯನ್ನೂ ಸಹ ಪೊಲೀಸರು ಇದೇ ವೇಳೆ ಬಂಧಿಸಿದ್ದಾರೆ.
ಆಟೋರಿಕ್ಷಾದಲ್ಲಿ ತಾನು ಹಾಗೂ ತನ್ನ ಹಿರಿಯ ಮಗಳು ಮನೆಗೆ ತೆರಳುತ್ತಿದ್ದ ವೇಳೆ ದ್ವಿಚಕ್ರ ವಾಹವೊಂದರಲ್ಲಿ ಬಂದು ತಮ್ಮನ್ನು ಅಡ್ಡಗಟ್ಟಿದ ಇಬ್ಬರು ಪುರುಷರು ತನ್ನಿಂದ ಹಣ ಕಸಿದುಕೊಂಡು ಹೋಗಿದ್ದಾಗಿಯೂ, ಇದಕ್ಕೆ ದಲ್ಲಾಳಿ ಜಯಗೀತಾಳ ಬೆಂಬಲವಿದೆಯೆಂದೂ ದೂರಿನಲ್ಲಿ ತಿಳಿಸಿದ್ದಾಳೆ ಯಾಸ್ಮಿನ್.
ಆಟೋರಿಕ್ಷಾ ಚಾಲಕನನ್ನು ಕರೆಯಿಸಿ ವಿಚಾರಿಸಿದ ಪೊಲೀಸರಿಗೆ ಯಾಸ್ಮಿನ್ ಹೇಳಿದ್ದು ಸುಳ್ಳು ಏನೆಂದು ಗೊತ್ತಾಗಿದ್ದು, ಕಳುವಾಗಿದೆಯೆಂದು ಹೇಳಲಾದ ದುಡ್ಡು ಆಕೆಯ ಬಳಿಯೇ ಇರುವುದು ತಿಳಿದು ಬಂದಿದೆ. ಸುಳ್ಳು ದೂರು ಕೊಟ್ಟಿರುವ ಯಾಸ್ಮಿನ್ ತಾನು ಮಾರಿದ ಮಗು ಹಾಗೂ ಅದಕ್ಕೆ ಪಡೆದ ಹಣ ಎರಡನ್ನೂ ತನ್ನ ಬಳಿಯೇ ಇಟ್ಟುಕೊಳ್ಳಲು ಪ್ಲಾನ್ ಮಾಡಿರುವುದನ್ನು ತಿಳಿದುಕೊಂಡಿದ್ದಾರೆ ಪೊಲೀಸರು.
ಜಯಗೀತಾ ಹಾಗೂ ಧನಂ ಯಾಸ್ಮಿನ್ಗೆ ತನ್ನ ಮಗನನ್ನು ಶಿವಕುಮಾರ್ ಎಂಬ ಮೂರನೇ ವ್ಯಕ್ತಿಗೆ ಮಾರಾಟ ಮಾಡಲು ನೆರವಾಗಿದ್ದರು. ತನಗೆ ಮಗುವನ್ನು ಇಟ್ಟುಕೊಳ್ಳಲು ಸಮ್ಮತಿ ಇದೆ ಎಂದು ಶಿವಕುಮಾರ್ ತನ್ನ ಸಹೋದ್ಯೋಗಿ ಮೇರಿಗೆ ತಿಳಿಸಿದ ಮೇಲೆ ಈ ಡೀಲ್ ಅಂತಿಮವಾಗಿದೆ. ಇದಾದ ಬಳಿಕ ದಲ್ಲಾಳಿಗಳು ಯಾಸ್ಮಿನ್ಗೆ ತನ್ನ ಮಗುವನ್ನು ಮಾರಿ ದುಡ್ಡಿನ ಅಗತ್ಯ ಪೂರೈಸಿಕೊಳ್ಳಲು ಮನವೊಲಿಸಿದ್ದಾರೆ.
ಯಾಸ್ಮಿನ್ ಗಂಡು ಮಗುವೊಂದಕ್ಕೆ ಜನ್ಮವಿತ್ತ ಬಳಿಕ, ಹಯಗೀತಾ ಹಾಗೂ ಧನಂ ಆ ಮಗುವನ್ನು ಶಿವಕುಮಾರ್ಗೆ ಒಪ್ಪಿಸಿದ್ದು, ಅದಕ್ಕೆ ಪ್ರತಿಯಾಗಿ 80,000 ರೂಪಾಯಿ ಕಮಿಷನ್ ಇಟ್ಟುಕೊಂಡು ಮಿಕ್ಕ ದುಡ್ಡನ್ನು ಯಾಸ್ಮಿನ್ಗೆ ಕೊಟ್ಟಿದ್ದರು.