alex Certify ಗುಂಡೇಟಿಗೆ ಕೇರಳ ಮೂಲದ ಯುವತಿ ಬಲಿ​..! ಕಳೆದ 2 ತಿಂಗಳಲ್ಲಿ ಅಮೆರಿಕದಲ್ಲಿ ಮೂರನೇ ಭಾರತೀಯ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗುಂಡೇಟಿಗೆ ಕೇರಳ ಮೂಲದ ಯುವತಿ ಬಲಿ​..! ಕಳೆದ 2 ತಿಂಗಳಲ್ಲಿ ಅಮೆರಿಕದಲ್ಲಿ ಮೂರನೇ ಭಾರತೀಯ ಸಾವು

ಕೇರಳ ಮೂಲದ 19 ವರ್ಷದ ಯುವತಿಯನ್ನು ಅಮೆರಿಕದ ಅಲಬಾಮಾ ಎಂಬಲ್ಲಿ ಗುಂಡಿಕ್ಕಿ ಕೊಲೆಗೈಯಲಾಗಿದೆ. ಮೃತ ಯುವತಿಯನ್ನು ಮರಿಯಂ ಸುಸಾನ್​ ಮ್ಯಾಥ್ಯೂ ಎಂದು ಗುರುತಿಸಲಾಗಿದೆ. ಈಕೆ ತಿರುವಲ್ಲಾ ಮೂಲದವರು ಎಂದು ತಿಳಿದುಬಂದಿದೆ. ಮರಿಯಂ ತನ್ನ ನಿವಾಸದಲ್ಲಿ ಮಲಗಿದ್ದ ವೇಳೆ ಮೇಲಿನ ಮಹಡಿಯಿಂದ ಬಂದ ಗುಂಡುಗಳು ಸೀಲಿಂಗ್​ ತೂರಿಕೊಂಡು ಯುವತಿಗೆ ನಾಟಿದೆ ಎಂದು ತಿಳಿದುಬಂದಿದೆ.

ಅಲಬಮಾದ ಮಾಂಟ್ಗೋಮೆರಿಯಲ್ಲಿ ಈ ಘಟನೆಯು ನಡೆದಿದೆ. ಈ ಪ್ರಕರಣ ಸಂಬಂಧ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಸೌತ್​ ವೆಸ್ಟ್​​ ಅಮೆರಿಕ ಮಲಂಕರ ಆರ್ಥೋಡಾಕ್ಸ್​​ ಚರ್ಚ್​ ಡಯಾಸಿಸ್​ನ ಫಾದರ್​ ಜಾನ್ಸನ್​ ಪಪ್ಪಚನ್​​ ಈ ಸಂಬಂಧ ಪ್ರಕಟಣೆ ಹೊರಡಿಸಿದ್ದು, ಸೂಸನ್​ ಮ್ಯಾಥ್ಯೂ ಮನೆಯ ಮೇಲಿನ ಮಹಡಿಯಲ್ಲಿ ವಾಸಿಸುತ್ತಿದ್ದು, ಬಂದೂಕಿನಿಂದ ಗುಂಡು ಹಾರಿಸಿದ್ದಾರೆ. ಈ ಗುಂಡು ಸುಸನ್​​ಗೆ ತಗುಲಿದ ಪರಿಣಾಮ ಅವರು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. ಫೈರಿಂಗ್​​ ಆದ ತಕ್ಷಣವೇ ಸುಸನ್​ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಅಂದಹಾಗೆ ಕಳೆದ 7 ದಿನಗಳಲ್ಲಿ ಮಾಂಟ್ಗೊಮೆರಿಯಲ್ಲಿ ನಡೆದ 2ನೇ ಗುಂಡಿನ ದಾಳಿ ಇದಾಗಿದೆ. ಇದಕ್ಕೂ ಮೊದಲು ಗುರುವಾರ ವ್ಯಕ್ತಿಯೊಬ್ಬನನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು.

ಡಲ್ಲಾಸ್​ ಎಂಬಲ್ಲಿ ದರೋಡೆಕೋರರ ಗುಂಡಿನ ದಾಳಿಗೆ ಮತ್ತೊಬ್ಬ ಕೇರಳಿಗ ಬಲಿಯಾಗಿದ್ದಾನೆ. ಡಲ್ಲಾಸ್​ನಲ್ಲಿ ಸೌಂದರ್ಯವರ್ಧಕಗಳ ಅಂಗಡಿ ಹೊಂದಿದ್ದ ಸಜನ್​ ಮ್ಯಾಥ್ಯೂಸ್​​ ಕೊಲೆಯಾದ ಕೇರಳಿಗ ವ್ಯಕ್ತಿ. ಇವರ ಅಂಗಡಿಗೆ ನುಗ್ಗಿದ ದರೋಡೆಕೋರ ಮ್ಯಾಥ್ಯೂಸ್​ ಮೇಲೆ ಗುಂಡು ಹಾರಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...