ಪಿಂಚಣಿದಾರರಿಗೆ ಸರ್ಕಾರ ಖುಷಿ ಸುದ್ದಿಯೊಂದನ್ನು ನೀಡಿದೆ. ಪಿಂಚಣಿ ಪಡೆಯಲು ಪ್ರತಿ ವರ್ಷ, ಪಿಂಚಣಿದಾರರು, ಜೀವನ ಪ್ರಮಾಣ ಪತ್ರವನ್ನು ಸಲ್ಲಿಸಬೇಕು. ಆದ್ರೆ ಇನ್ಮುಂದೆ ಜೀವನ ಪ್ರಮಾಣ ಪತ್ರ ಸಲ್ಲಿಸುವ ಅಗತ್ಯವಿಲ್ಲ. ಮುಖ ತೋರಿಸಿದ್ರೆ ನಿಮ್ಮ ಜೀವನ ಪ್ರಮಾಣ ಪತ್ರ ಸಲ್ಲಿಕೆಯಾಗುತ್ತದೆ.
ಕೇಂದ್ರ ಸರ್ಕಾರ ಇದೀಗ ಹೊಸ ತಂತ್ರಜ್ಞಾನ ‘ಫೇಸ್ ರೆಕಗ್ನಿಷನ್’ ಬಿಡುಗಡೆ ಮಾಡಿದೆ. ಮುಖ ಗುರುತಿಸುವಿಕೆ ತಂತ್ರಜ್ಞಾನ, ಮುಖ ಗುರುತಿಸುವಿಕೆಗೆ ವಿಶೇಷ ತಂತ್ರಜ್ಞಾನವಾಗಿದೆ. ಇದಕ್ಕೆ ಚಾಲನೆ ನೀಡಿದ ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್, ನಿವೃತ್ತ ಮತ್ತು ಹಿರಿಯ ಪಿಂಚಣಿದಾರರಿಗೆ ಇದು ಹೆಚ್ಚಿನ ಅನುಕೂಲವಾಗಲಿದೆ. ಈ ಫೇಸ್ ರೆಕಗ್ನಿಷನ್ ತಂತ್ರಜ್ಞಾನದ ಸಹಾಯದಿಂದ ಪಿಂಚಣಿದಾರರನ್ನು ಜೀವಂತವಾಗಿ ಖಚಿತಪಡಿಸಿಕೊಳ್ಳಬಹುದು ಎಂದಿದ್ದಾರೆ.
ಎಲ್ಲಾ ಪಿಂಚಣಿದಾರರು ವರ್ಷಾಂತ್ಯದಲ್ಲಿ ತಮ್ಮ ಜೀವನ ಪ್ರಮಾಣಪತ್ರವನ್ನು ಸಲ್ಲಿಸಬೇಕು. ಪಿಂಚಣಿದಾರರು ಜೀವಂತವಾಗಿದ್ದಾರೆ ಎಂಬುದಕ್ಕೆ ಈ ಪ್ರಮಾಣಪತ್ರವು ಪುರಾವೆಯಾಗಿದೆ. ಈ ಆಧಾರದ ಮೇಲೆ ನಿವೃತ್ತ ಮತ್ತು ಹಿರಿಯ ಪಿಂಚಣಿದಾರರ ಪಿಂಚಣಿ ಮುಂದುವರಿಸಲಾಗುತ್ತದೆ.
ಈಗ ವಿಶಿಷ್ಟ ಮುಖ ಗುರುತಿಸುವಿಕೆ ತಂತ್ರಜ್ಞಾನವನ್ನು ಪ್ರಾರಂಭಿಸಲಾಗಿದೆ. ಇದು ದೇಶದ ಕೋಟ್ಯಂತರ ಪಿಂಚಣಿದಾರರಿಗೆ ಮೊಬೈಲ್ ಅಪ್ಲಿಕೇಶನ್ ಮೂಲಕ ಸುಲಭವಾಗಿ ಜೀವನ ಪ್ರಮಾಣಪತ್ರವನ್ನು ಸಲ್ಲಿಸಲು ಸಹಾಯ ಮಾಡಲಿದೆ. ಪಿಂಚಣಿದಾರರಿಗೆ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಸೌಲಭ್ಯವನ್ನು ಸರ್ಕಾರ ಆರಂಭಿಸಿತ್ತು. ಈಗ ಈ ಫೇಸ್ ರೆಕಗ್ನಿಷನ್ ತಂತ್ರಜ್ಞಾನ ಪರಿಚಯಿಸಿದೆ. ಇದು ಪಿಂಚಣಿದಾರರ ಕೆಲಸವನ್ನು ಮತ್ತಷ್ಟು ಸುಲಭಗೊಳಿಸಲಿದೆ.