ಇದು ಮೊಬೈಲ್ ಯುಗ. ಪ್ರತಿ ಕ್ಷಣವೂ ಕೈನಲ್ಲಿ ಮೊಬೈಲ್ ಇರಬೇಕು. ನಾಲ್ಕು ಮಂದಿ ಒಟ್ಟಾಗಿ ನಿಂತರೆಂದರೆ ಅವರಲ್ಲಿ ಅದೆಷ್ಟೋ ಮೂವಿಗಳು, ಗೇಮ್ ಗಳು, ಹಾಡುಗಳು ಒಬ್ಬರ ಮೊಬೈಲ್ ನಿಂದ ಇನ್ನೊಬ್ಬರ ಮೊಬೈಲ್ ಗೆ ಹರಿದಾಡುತ್ತವೆ. ಹೀಗೆ ಹಲವು ಉಪಯೋಗಗಳಿಗೆ ಬರುವ ಮೊಬೈಲ್ ಒಮ್ಮೊಮ್ಮೆ ಜನರನ್ನು ಪೇಚಿಗೆ ಸಿಲುಕಿಸುತ್ತದೆ. ಮೊಬೈಲ್ ಬಳಕೆ ಬಗ್ಗೆ ಕೆಲವು ದೇಶಗಳು ಹೊರಡಿಸಿರುವ ಕಾನೂನು ಅಲ್ಲಿನ ಜನರನ್ನು ಕಂಗಾಲಾಗಿಸಿದೆ. ಇದು ಈಗ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಾಗ್ತಿದೆ.
ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಇತ್ತಿಚೆಗೆ ಒಬ್ಬರ ಮೊಬೈಲ್ ಅನ್ನು ಅವರ ಅನುಮತಿ ಇಲ್ಲದೇ ತೆಗೆದುಕೊಂಡರೆ ಅವರಿಗೆ 6 ತಿಂಗಳ ಶಿಕ್ಷೆ ವಿಧಿಸಲಾಗುತ್ತದೆ. ಮೊಬೈಲ್ ಬಳಕೆಯ ಕುರಿತು ಪಾಕಿಸ್ತಾನದ ಹೊರತಾಗಿ ಇನ್ನೂ ಹಲವು ದೇಶಗಳಲ್ಲಿ ಚಿತ್ರ ವಿಚಿತ್ರ ಕಾನೂನಿದೆ.
2022 ರ ಕುರಿತು ನಾಸ್ಟ್ರಡಾಮಸ್ ಭವಿಷ್ಯ…! ಕಾಲಜ್ಞಾನಿಯ ಪುಸ್ತಕದ ಅಂಶಗಳು ಮತ್ತೆ ಮುನ್ನೆಲೆಗೆ
ಸ್ವಲ್ಪ ದಿನಗಳ ಹಿಂದೆ ಚೀನಾದಲ್ಲಿ ಮಕ್ಕಳು ಮತ್ತು ದೊಡ್ಡವರು ವಾರದಲ್ಲಿ ಕೇವಲ 3 ಗಂಟೆ ಮಾತ್ರ ಮೊಬೈಲ್ ಅಥವಾ ಆನ್ ಲೈನ್ ಗೇಮ್ ಗಳನ್ನು ಆಡಬಹುದು ಎಂಬ ಕಾನೂನನ್ನು ಜಾರಿಗೊಳಿಸಿದ್ರು. ಕಾನೂನನ್ನು ಪಾಲಿಸದೇ ಇದ್ದಲ್ಲಿ ಗೇಮ್ ಆಡಿದವರಿಗೆ ಮತ್ತು ಗೇಮ್ ಪ್ರೊವೈಡರ್ ಇಬ್ಬರಿಗೂ ಶಿಕ್ಷೆ ನಿಗದಿಯಾಗಿತ್ತು.
ಇದಲ್ಲದೇ ಚೀನಾದಲ್ಲಿ ಜನಸಂಖ್ಯೆ ಹೆಚ್ಚಿಗೆ ಇರುವುದರಿಂದ ಮೊಬೈಲ್ ಖರೀದಿಯೂ ಹೆಚ್ಚಾಗಿಯೇ ಇತ್ತು. ಮೊದಲು ಇಲ್ಲಿ ಗುರುತಿನ ಪತ್ರ ಕೊಟ್ಟರೆ ಮೊಬೈಲ್ ಸಿಗುತ್ತಿತ್ತು. ಈಗ ಹೊಸ ಮೊಬೈಲ್ ಅಥವಾ ಹೊಸ ನಂಬರ್ ತೆಗೆದುಕೊಂಡವರ ಮುಖ ಸ್ಕ್ಯಾನ್ ಮಾಡಲಾಗುತ್ತೆ. ಹಾಗಾಗಿ ಅಲ್ಲಿನ ನಾಗರಿಕರು ಮತ್ತೆ ಮತ್ತೆ ಮೊಬೈಲ್ ಖರೀದಿಸುವ ಹಾಗಿಲ್ಲ.
ಜಪಾನ್, ಜನರ ಮೊಬೈಲ್ ಹುಚ್ಚು ಬಿಡಿಸಲು ಅಲ್ಲಿನ ಸರಕಾರ ಹೊಸ ಕಾನೂನು ಜಾರಿಗೊಳಿಸಿದೆ. ಅಲ್ಲಿ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಅಥವಾ ವಾಹನ ಚಲಾಯಿಸುವಾಗ ಮೊಬೈಲ್ ನೋಡುವವರಿಗೆ ದಂಡ ವಿಧಿಸಲಾಗುತ್ತದೆ.
ವಾಹನ ಚಲಾಯಿಸುವಾಗ ಮೊಬೈಲ್ ನೋಡುವುದರಿಂದ ಏಕಾಗ್ರತೆ ಕಡಿಮೆಯಾಗಿ ಅವಘಡಗಳು ಸಂಭವಿಸುತ್ತದೆ. ಆದರೆ ಫ್ರಾನ್ಸ್ ನಲ್ಲಿ ಗಾಡಿ ನಿಲ್ಲಿಸಿಕೊಂಡು ಕೂಡ ಮೊಬೈಲ್ ನೋಡುವ ಹಾಗಿಲ್ಲ. ಹಾಗೊಮ್ಮೆ ಮೊಬೈಲ್ ನೋಡಬೇಕೆಂದರೆ ಅದಕ್ಕೆಂದೇ ಇರುವ ಪಾರ್ಕಿಂಗ್ ಸ್ಥಳದಲ್ಲಿ ನಿಂತು ಮೊಬೈಲ್ ಬಳಸಬಹುದು.
ಮೊಬೈಲ್ ನಲ್ಲಿ ಫ್ರೀ ಕಾಲ್ ಇರುವುದರಿಂದ ನಾವು ದೇಶ, ವಿದೇಶದಲ್ಲಿರುವವರಿಗೂ ಕಾಲ್ ಮಾಡುತ್ತೇವೆ. ಆದರೆ ಉತ್ತರ ಕೊರಿಯಾದಲ್ಲಿ ಇಂಟರ್ ನ್ಯಾಶನಲ್ ಕಾಲ್ ಮಾಡಿದರೆ ಪೊಲೀಸರು ನಿಮ್ಮನ್ನು ಎಳೆದುಕೊಂಡು ಹೋಗ್ತಾರೆ.