ಗಾಂಧಿನಗರ: 40 ವರ್ಷದ ವಿವಾಹಿತ ಮಹಿಳೆಯೊಬ್ಬಳು 14 ವರ್ಷದ ಬಾಲಕನೊಂದಿಗೆ ಪರಾರಿಯಾಗಿರುವ ವಿಲಕ್ಷಣ ಘಟನೆ ಗುಜರಾತ್ ನ ದಾಹೋದ್ ಜಿಲ್ಲೆಯ ಸುಖಸರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪತಿ ಮತ್ತು ಆರು ಮಕ್ಕಳನ್ನು ಹೊಂದಿರುವ ಮಹಿಳೆಗೆ ಗಾಂಧಿನಗರದಲ್ಲಿ ಕೂಲಿ ಕೆಲಸ ಮಾಡುತ್ತಿರುವಾಗ ಅಪ್ರಾಪ್ತನ ಪರಿಚಯವಾಗಿ, ಬಳಿಕ ಪ್ರೀತಿಗೆ ತಿರುಗಿದೆ ಎಂದು ಹೇಳಲಾಗಿದೆ.
ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಲು ಪೊಲೀಸರು ಬಾಲಕನ ಜನ್ಮ ಪ್ರಮಾಣಪತ್ರಕ್ಕಾಗಿ ಕಾಯುತ್ತಿದ್ದಾರೆ. ಜನ್ಮ ಪ್ರಮಾಣಪತ್ರ ಕೊಡುವಂತೆ ಬಾಲಕನ ಕುಟುಂಬಕ್ಕೆ ತಿಳಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಒಂದು ತಿಂಗಳಿನ ಹಿಂದೆ ತಮ್ಮ ಪುತ್ರನನ್ನು ಮಹಿಳೆ ಅಪಹರಿಸಿದ್ದಾಳೆ ಎಂದು ಅಪ್ರಾಪ್ತನ ಕುಟುಂಬ ಪೊಲೀಸರಿಗೆ ದೂರು ನೀಡಿತ್ತು. ಆಧಾರ್ ಕಾರ್ಡ್ ನಲ್ಲಿ ಬಾಲಕನ ಜನ್ಮ ವರ್ಷ 2007 ಎಂದಿದೆ. ಆದರೆ, ತನಿಖೆಯ ಸಮಯದಲ್ಲಿ ಆತನ ಜನ್ಮವರ್ಷ 1997 ಎಂದಿದ್ದು, ಈ ಬಗ್ಗೆ ಸ್ಪಷ್ಟೀಕರಣಕ್ಕಾಗಿ ಜನ್ಮಪ್ರಮಾಣಪತ್ರ ನೀಡುವಂತೆ ಕೋರಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.