ದೆಹಲಿ: ಇಂಧನ ದರದಲ್ಲಿ ಏರಿಕೆಯಾಗಿರುವುದು ಜನರನ್ನು ಸಂಕಷ್ಟಕ್ಕೆ ತಳ್ಳಿದೆ. ಬೆಲೆ ಏರಿಕೆ ಬಿಸಿಗೆ ಹಲವರು ಸರ್ಕಾರಕ್ಕೆ ಹಿಡಿಶಾಪ ಹಾಕಿದ್ರೆ, ಇನ್ನೂ ಕೆಲವರು ವಿಭಿನ್ನವಾಗಿ ಪ್ರತಿಭಟಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಮೀಮ್ಸ್ ಗಳು ಕೂಡ ಹರಿದಾಡಿವೆ.
ಹುಟ್ಟುಹಬ್ಬ, ಮದುವೆ ವಾರ್ಷಿಕೋತ್ಸವ ಮತ್ತು ಮದುವೆಯಂತಹ ವಿಶೇಷ ಸಂದರ್ಭಗಳಲ್ಲಿ ಜನರಿಗೆ ಪೆಟ್ರೋಲ್ ಅನ್ನು ಉಡುಗೊರೆಯಾಗಿ ನೀಡುವ ಬಗ್ಗೆ ಹಲವರು ತಮಾಷೆ ಮಾಡಿದ್ದಾರೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (ಐಒಸಿ) ಈ ಕಲ್ಪನೆಯನ್ನು ಸ್ವಲ್ಪ ಹೆಚ್ಚು ಇಷ್ಟಪಟ್ಟಿರಬಹುದು ಎಂದು ತೋರುತ್ತಿದೆ.
ಹೌದು, ಇದೀಗ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ನ ಜಾಹೀರಾತು ನೋಡಿದ್ರೆ ನಿಮಗೆ ಅಚ್ಚರಿಯಾಗಬಹುದು. ಯಾಕಂದ್ರೆ ದೇಶದ ಉನ್ನತ ರಿಫೈನರ್ ಟ್ವಿಟ್ಟರ್ ನಲ್ಲಿ ಜಾಹೀರಾತು ಪ್ರಕಟಿಸಿದ್ದು, ಅದರಲ್ಲಿ ಇ-ಇಂಧನ ವೋಚರ್ ಗಳನ್ನು ಖರೀದಿಸಿ, ನಿಮ್ಮ ಪ್ರೀತಿ-ಪಾತ್ರರಿಗೆ ಉಡುಗೊರೆಯಾಗಿ ಕೊಡಬಹುದು ಎಂಬ ಜಾಹೀರಾತನ್ನು ಪೋಸ್ಟ್ ಮಾಡಿದೆ.
‘ಮನಿಕೆ ಮಗೆ ಹಿತೆ’ಗೆ ಸ್ಟೆಪ್ ಹಾಕಿದ ಗರ್ಭಿಣಿ: ವಿಡಿಯೋ ವೈರಲ್
ಮೈಕ್ರೋಬ್ಲಾಗಿಂಗ್ ಸೈಟ್‌ನಲ್ಲಿ, ಇ-ಫ್ಯೂಯಲ್ ವೋಚರ್‌ಗಳು ಮದುವೆಗಳನ್ನು ಆಚರಿಸಲು ಇದು ಪರಿಪೂರ್ಣ ಕೊಡುಗೆಯಾಗಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಟ್ವೀಟ್ ಮಾಡಿದೆ. ಐಒಸಿಯ ಜಾಹೀರಾತಿಗೆ ಟ್ವಿಟ್ಟರ್ ಬಳಕೆದಾರರು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.
ಆಯಿಲ್ ಕಾರ್ಪೊರೇಷನ್ ಸಾಮಾಜಿಕ ಮಾಧ್ಯಮದಲ್ಲಿ ಈ ರೀತಿಯ ಪ್ರಚಾರಗಳನ್ನು ಮಾಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ದೀಪಾವಳಿ ಹಬ್ಬಕ್ಕಾಗಿ 500 ರಿಂದ 10,000 ರೂಪಾಯಿ ಮೌಲ್ಯದ ಗಿಫ್ಟ್ ವೋಚರ್ ಗಳನ್ನು ಬಿಡುಗಡೆ ಮಾಡಿದ್ದರು.