alex Certify ಬಹುಕಾಲದ ಗೆಳತಿ ಜೊತೆ ಟೀಂ ಇಂಡಿಯಾ ಕ್ರಿಕೆಟಿಗ ಶಾರ್ದೂಲ್​ ಠಾಕೂರ್​ ನಿಶ್ಚಿತಾರ್ಥ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಹುಕಾಲದ ಗೆಳತಿ ಜೊತೆ ಟೀಂ ಇಂಡಿಯಾ ಕ್ರಿಕೆಟಿಗ ಶಾರ್ದೂಲ್​ ಠಾಕೂರ್​ ನಿಶ್ಚಿತಾರ್ಥ

ಟೀಂ ಇಂಡಿಯಾ ಆಟಗಾರ ಶಾರ್ದೂಲ್​ ಠಾಕೂರ್​​ ತಮ್ಮ ಬಹುಕಾಲದ ಗೆಳತಿ ಮಿಥಾಲಿ ಪರುಲ್ಕರ್​ ಜೊತೆಯಲ್ಲಿ ಮುಂಬೈನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮುಂದಿನ ವರ್ಷ ಐಸಿಸಿ ಟಿ 20 ವಿಶ್ವಕಪ್​ ಪಂದ್ಯಾವಳಿಯ ಬಳಿಕ ಶಾರ್ದೂಲ್​ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮುಂಬೈನ ಬಿಕೆಸಿಯಲ್ಲಿರುವ ಕ್ರಿಕೆಟ್​ ಅಸೋಸಿಯೇಷನ್​ ಫೆಸಿಲಿಟಿಯಲ್ಲಿ ನಡೆದ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ 75 ಮಂದಿಗೆ ಆಹ್ವಾನ ನೀಡಲಾಗಿತ್ತು ಎನ್ನಲಾಗಿದೆ. ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಯಾವೆಲ್ಲ ಕ್ರಿಕೆಟಿಗರು ಭಾಗಿಯಾಗಿದ್ದರು ಎಂಬುದಕ್ಕೆ ಇನ್ನು ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಈ ದಿನಗಳಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್​ನಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವ 30 ವರ್ಷದ ಶಾರ್ದೂಲ್​ ಸದ್ಯ ವಿಶ್ರಾಂತಿಯಲ್ಲಿದ್ದಾರೆ. ಶಾರ್ದೂಲ್​ ಟೀಂ ಇಂಡಿಯಾ ಪರವಾಗಿ ಈವರೆಗೆ ನಾಲ್ಕು ಟೆಸ್ಟ್​, 15 ಏಕದಿನ ಪಂದ್ಯ ಹಾಗೂ 24 ಟಿ 20 ಪಂದ್ಯಗಳನ್ನು ಆಡಿದ್ದಾರೆ. ಟಿ 20 ವಿಶ್ವಕಪ್​ನಲ್ಲಿಯೂ ಶಾರ್ದೂಲ್ ಟೀಂ ಇಂಡಿಯಾದ ಪರ ಆಡಿದ್ದರು. ಐಪಿಎಲ್​ನಲ್ಲಿ ಶಾರ್ದೂಲ್​ ಠಾಕೂರ್​ ಪಂಜಾಬ್​ ಕಿಂಗ್ಸ್​ ತಂಡದ ಸದಸ್ಯನಾಗಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...