ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಶಾಕಿಂಗ್ ನ್ಯೂಸ್ ನೀಡಿದೆ. ಪ್ರಿಪೇಯ್ಡ್ ಯೋಜನೆಗಳ ಬೆಲೆ ಹೆಚ್ಚಿದೆ. ಡಿಸೆಂಬರ್ 1 ರಿಂದ ಹೊಸ ಬೆಲೆ ಜಾರಿಗೆ ಬರಲಿದೆ. ಪ್ರಿಪೇಯ್ಡ್ ರೀಚಾರ್ಜ್ ಯೋಜನೆ ಬೆಲೆ ಶೇಕಡಾ 20 ರಷ್ಟು ಹೆಚ್ಚಳವಾಗಲಿದೆ.
ಏರ್ಟೆಲ್ ಮತ್ತು ವೊಡಾಫೋನ್- ಐಡಿಯಾ ಕಂಪನಿಗಳು ಈಗಾಗಲೇ ಪ್ರಿಪೇಯ್ಡ್ ಸುಂಕದ ದರಗಳಲ್ಲಿ ಏರಿಕೆ ಮಾಡಿವೆ. ಈಗ ಜಿಯೋ ಬೆಲೆ ಏರಿಕೆ ನಿರ್ಧಾರ ಕೈಗೊಂಡಿದೆ. ಡಿಸೆಂಬರ್ 1ರಿಂದ ಜಿಯೋಫೋನ್ ನ 75 ರೂಪಾಯಿ ಪ್ರಿಪೇಯ್ಡ್ ಪ್ಲಾನ್ ಬೆಲೆ 91 ರೂಪಾಯಿಯಾಗಲಿದೆ. 129 ರೂಪಾಯಿಗಳ ಪ್ಲಾನ್ 155 ರೂಪಾಯಿಯಾಗಲಿದೆ.
ಜಿಯೋದ 149 ರೂಪಾಯಿ ಯೋಜನೆ ಬೆಲೆ 179 ರೂಪಾಯಿಯಾಗಲಿದೆ. ಇನ್ನು 199 ರೂಪಾಯಿ ಪ್ಲಾನ್ ಬೆಲೆ 239 ರೂಪಾಯಿಯಾಗಲಿದೆ. 249 ರೂಪಾಯಿ ಪ್ಲಾನ್ ಬೆಲೆ 399 ಪ್ಲಾನ್ ಬೆಲೆ 479 ರೂಪಾಯಿಯಾಗಲಿದೆ. 444 ರೂಪಾಯಿ ಪ್ಲಾನ್ ಬೆಲೆ 533 ರೂಪಾಯಿಯಾಗಲಿದ್ದು, 329 ಯೋಜನೆ ಬೆಲೆ 395 ರೂಪಾಯಿ ಏರಿಕೆಯಾಗಲಿದೆ.
ಇನ್ನು 555 ರೂಪಾಯಿ ಯೋಜನೆ ಬೆಲೆ 666 ರೂಪಾಯಿಗೆ ಏರಿದ್ರೆ, 599 ರೂಪಾಯಿ ಬೆಲೆ 719 ರೂಪಾಯಿಗೆ ಏರಿಕೆ ಕಂಡಿದೆ. ಇನ್ನು ಜಿಯೋದ 1,299 ಪ್ಲಾನ್ ಬೆಲೆ 1,559 ರೂಪಾಯಿಯಾಗಿದ್ದು, 2,399 ರೂಪಾಯಿ ಯೋಜನೆ ಬೆಲೆ 2,879 ರೂಪಾಯಿ ಹೆಚ್ಚಾಗಿದೆ.
ಜಿಯೋ ತನ್ನ ಡೇಟಾ ಟಾಪ್-ಅಪ್ ಯೋಜನೆ ಬೆಲೆಯಲ್ಲೂ ಹೆಚ್ಚಳ ಮಾಡಿದೆ. 51 ರೂಪಾಯಿ 6ಜಿಬಿ ಡೇಟಾ ಟಾಪ್-ಅಪ್ ಪ್ಯಾಕ್ ಬೆಲೆ ಈಗ 61 ರೂಪಾಯಿಯಾಗಿದೆ. 12 ಜಿಬಿ ಡೇಟಾ ನೀಡ್ತಿದ್ದ 101 ರೂಪಾಯಿ ಡೇಟಾ ಟಾಪ್ ಅಪ್ ಬೆಲೆ 121 ರೂಪಾಯಿಯಾಗಿದೆ. 50 ಜಿಬಿ ಡೇಟಾ ಸಿಗ್ತಿದ್ದ ಡೇಟಾ ಟಾಪ್ ಅಪ್ ಪ್ಯಾಕ್ ಬೆಲೆ 251 ರೂಪಾಯಿಯಿಂದ 301 ರೂಪಾಯಿಗೆ ಹೆಚ್ಚಾಗಿದೆ.