ಪಿಂಚಣಿದಾರರು ಮಾಸಿಕ, ವಾರ್ಷಿಕವಾಗಿ ಸರ್ಕಾರಿ ಇಲಾಖೆಗಳಿಗೆ, ಕಚೇರಿಗಳಿಗೆ ನೀಡಬೇಕಾದ ದಾಖಲೆಗಳು ಸಾಕಷ್ಟು ಇರುತ್ತವೆ. ಸರಿಯಾದ ಸಮಯಕ್ಕೆ ಈ ದಾಖಲೆಗಳು ಸಲ್ಲಿಕೆ ಆಗದಿದ್ದರೆ, ಸರ್ಕಾರದಿಂದ ಸಿಗುತ್ತಿರುವ ಕೆಲವು ಲಾಭಗಳು ಕಡಿತಗೊಳ್ಳುತ್ತವೆ. ನಿವೃತ್ತಿ ಪಿಂಚಣಿ, ಪರಿಹಾರ, ಸಹಾಯಧನ, ವಿನಾಯಿತಿಗಳ ಲಾಭ ಇಲ್ಲವಾಗುತ್ತದೆ.
ಹಾಗಾಗಿ, ನ.30 ರೊಳಗೆ ಅಂಥದ್ದೇ ಕೆಲವು ಅಗತ್ಯ ಕಾರ್ಯಗಳನ್ನು ಪಿಂಚಣಿದಾರರು ಮಾಡಬೇಕಿದೆ. ಅವುಗಳಲ್ಲಿ ಮುಖ್ಯವಾದದ್ದು, ತಮ್ಮ ಜೀವಿತದ ದಾಖಲೆಯಾಗಿ ’ಲೈಫ್ ಸರ್ಟಿಫಿಕೇಟ್ ’ಅನ್ನು ಅಂಚೆ ಕಚೇರಿ, ಪಿಂಚಣಿ ಕಚೇರಿ ಹಾಗೂ ಬ್ಯಾಂಕ್‌ಗಳಿಗೆ ನೀಡಬೇಕು.
ಅದೇ ರೀತಿ, ಎಲ್‌ಐಸಿ ಹೌಸಿಂಗ್ ಫೈನಾನ್ಸ್ ವಿಶೇಷ ಗೃಹ ಸಾಲವು ಈ ತಿಂಗಳ ಕೊನೆಗೆ ಅಂತ್ಯಗೊಳ್ಳಲಿದೆ. ಸಾಲ ಪಡೆಯಬೇಕಿದ್ದಲ್ಲಿ ಬೇಗನೇ ಎಲ್‌ಐಸಿ ಕಚೇರಿಗೆ ತೆರಳಿರಿ. ಈ ವಿಶೇಷ ಯೋಜನೆ ಅಡಿಯಲ್ಲಿ ಕೇವಲ 6.66% ಬಡ್ಡಿ ದರದಲ್ಲಿ 2 ಕೋಟಿ ರೂ.ವರೆಗೆ ಗೃಹ ಸಾಲ ನೀಡಲಾಗುತ್ತಿದೆ.
ಪೆಟ್ರೋಲ್, ಡೀಸೆಲ್ ದರ ಇಳಿಕೆ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್
ಮುಂದುವರಿದು, ಜವಾಹರ್ ನವೋದಯ ವಿದ್ಯಾಲಯದ 9ನೇ ತರಗತಿ ಸೇರ್ಪಡೆಗೆ ಏಪ್ರಿಲ್ ನಲ್ಲಿ ನಡೆಯುವ ಪರೀಕ್ಷೆಗೆ ಅರ್ಜಿ ಸಲ್ಲಿಕೆಗೆ ನ. 30 ಕಡೆಯ ದಿನವಾಗಿದೆ. ಏ. 30, 2022ಕ್ಕೆ ಪರೀಕ್ಷೆ ನಿಗದಿಯಾಗಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಇದೆ. ನವೋದಯ ವಿದ್ಯಾಲಯ ಸಮಿತಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದೆ.