ದುಬಾರಿ ದುನಿಯಾದಲ್ಲಿ ಟೊಮ್ಯಾಟೊ ಕೆ.ಜಿ.ಗೆ 70-80 ರೂ. ಆಗಿದೆ. ಪೆಟ್ರೋಲ್-ಡೀಸೆಲ್ ದಾಖಲೆ ದರ ಮುಟ್ಟಿವೆ. ಅಡುಗೆ ಅನಿಲ ಸಿಲಿಂಡರ್ ಬೆಲೆಯು ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದೆ. ಇವೆಲ್ಲವುಗಳ ನಡುವೆ ಹೊಸ ಕಾರ್ಯಕ್ರಮ, ಹೊಸ ಸಿನಿಮಾಗಳು, ವಿಶಿಷ್ಟ ವೆಬ್ ಸಿರೀಸ್‌ಗಳ ಮೂಲಕ ಮನಸ್ಸಿಗೆ ಮುದನೀಡುತ್ತಿದ್ದ ಅಮೆಜಾನ್ ಕಂಪನಿಯ ಪ್ರೈಮ್ ವಿಡಿಯೊ ಸದಸ್ಯತ್ವ ಶುಲ್ಕ ಕೂಡ ಏರಿಕೆ ಕಾಣುತ್ತಿದೆ.
ಕಂಪನಿಯು ಅಮೆಜಾನ್ ಪ್ರೈಮ್ ಸದಸ್ಯತ್ವ ಶುಲ್ಕವನ್ನು ಗರಿಷ್ಠ 50% ಹೆಚ್ಚಿಸಿದೆ. ಇದುವರೆಗೂ ವಾರ್ಷಿಕ ಶುಲ್ಕವು ಕೇವಲ 999 ರೂ. ಇತ್ತು. ಸದ್ಯ, ಶುಲ್ಕವನ್ನು 1499 ರೂ. ಮಾಡಲಾಗಿದೆ. ಇನ್ನು ಮೂರು ತಿಂಗಳ ಸದಸ್ಯತ್ವ ಪಡೆದಿರುವವರಿಗೆ ಶುಲ್ಕವು 329 ರೂ.ನಿಂದ 459 ರೂ. ಹೆಚ್ಚಳವಾಗಿದೆ.
ಪ್ರತಿಭಟನೆಯಲ್ಲಿ ಪ್ರಾಣ ಕಳೆದುಕೊಂಡ 700 ರೈತರಿಗೆ ಪರಿಹಾರ, ಲೋಕಸಭೆಯಲ್ಲಿ ಘೋಷಣೆಗೆ ಆಗ್ರಹ
ಒಂದೇ ತಿಂಗಳ ಪ್ಲಾನ್ ಇರುವವರಿಗೆ ಶುಲ್ಕವು 129 ರೂ.ಗಳಿಂದ 179 ರೂ. ಆಗಿದೆ. ಡಿ. 14 ರಿಂದ ನೂತನ ದರಗಳು ಜಾರಿಗೆ ಬರಲಿವೆ ಎಂದು ಕಂಪನಿಯು ವೆಬ್‌ಸೈಟ್‌ನಲ್ಲಿ ಘೋಷಿಸಲಾಗಿದೆ.
ಜಾರಿಗೆ ಬಂದ ಕಳೆದ ಐದು ವರ್ಷಗಳಿಂದಲೂ ಸ್ವಲ್ಪವೇ ಪ್ರಮಾಣದಲ್ಲಿ ಅಮೆಜಾನ್ ಕಂಪನಿಯು ತನ್ನ ಸದಸ್ಯತ್ವ ಶುಲ್ಕವನ್ನು ಏರಿಕೆ ಮಾಡಿದೆ. ಆದರೆ ಈ ಬಾರಿ ಮಾತ್ರ ಗ್ರಾಹಕರ ಜೇಬಿಗೆ ದೊಡ್ಡ ಮಟ್ಟದ ಕತ್ತರಿಯನ್ನೇ ಹಾಕಿದೆ.
ಅಮೆಜಾನ್ ಪ್ರೈಮ್ ಗ್ರಾಹಕರು ಪ್ರೈಮ್ ವಿಡಿಯೊಗಳನ್ನು ಉಳಿದ ಅಮೆಜಾನ್ ಸದಸ್ಯರಿಗಿಂತಲೂ ಒಂದು ದಿನ ಮೊದಲೇ ನೋಡಬಹುದು. ಅಲ್ಲದೇ, ಅಮೆಜಾನ್ ಶಾಪಿಂಗ್‌ನಲ್ಲಿ ಖರೀದಿಸಿದ ವಸ್ತುಗಳನ್ನು ಡೆಲಿವರಿ ಶುಲ್ಕವಿಲ್ಲದೆಯೇ ಬೇಗನೇ ಪಡೆಯಬಹುದು. ಅಲ್ಲಿಗೆ ಪ್ರೈಮ್ ಗ್ರಾಹಕರೆಂದರೆ ಅಮೆಜಾನ್‌ಗೆ ಆದ್ಯತೆಯ ಸದಸ್ಯರು.