ಕಲಬುರ್ಗಿ: ಹಸೆಮಣೆಯೇರಲು ಭರ್ಜರಿ ಸಿದ್ಧತೆ ನಡೆಸಿದ್ದ ಪೊಲೀಸ್ ಪೇದೆ ಮದುವೆಗೆ ಒಂದು ವಾರ ಬಾಕಿ ಇದೆ ಎನ್ನುವಾಗ ರೈಲ್ವೆ ಹಳಿ ಮೇಲೆ ಶವವಾಗಿ ಪತ್ತೆಯಾಗಿರುವ ಘಟನೆ ಕಲಬುರ್ಗಿ ಜಿಲ್ಲೆ ಸಾವಳಗಿಯಲ್ಲಿ ನಡೆದಿದೆ.
ಮದರಾ ಗ್ರಾಮದ ನಿವಾಸಿ ಶ್ರೀನಾಥ್ (25) ಶವವಾಗಿ ಪತ್ತೆಯಾದ ಪೊಲೀಸ್ ಪೇದೆ. ಶ್ರೀನಾಥ್ ಕಲಬುರ್ಗಿಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ಶ್ರೀನಾಥ್ ಮದುವೆಗೆ ಒಂದು ವಾರ ಬಾಕಿ ಇತ್ತು. ಭರ್ಜರಿ ಸಿದ್ಧತೆಯನ್ನೂ ನಡೆಸಿದ್ದರು. ಆದರೆ ಇದೀಗ ಶ್ರೀನಾಥ್ ಶವ ಸಾವಳಗಿ ಬಳಿ ರೈಲ್ವೆ ಹಳಿ ಮೇಲೆ ರುಂಡ-ಮುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪೇದೆ ಸಾವಿನ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿದ್ದು, ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.