alex Certify BIG NEWS: ಡಿಜಿಟಲ್​ ಪಾವತಿ ಉತ್ತೇಜಿಸಲು ಮಹತ್ವದ ಕ್ರಮಕ್ಕೆ ಮುಂದಾದ ಕೇಂದ್ರ ಸರ್ಕಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಡಿಜಿಟಲ್​ ಪಾವತಿ ಉತ್ತೇಜಿಸಲು ಮಹತ್ವದ ಕ್ರಮಕ್ಕೆ ಮುಂದಾದ ಕೇಂದ್ರ ಸರ್ಕಾರ

ಭಾರತೀಯ ಟೆಲಿಕಾಂ ರೆಗ್ಯೂಲೇಟರಿ ಅಥಾರಿಟಿ ಆಫ್​ ಇಂಡಿಯಾ(ಟ್ರಾಯ್​) ಭಾರತೀಯ ಬಳಕೆದಾರರಿಗೆ ಡಿಜಿಟಲ್​ ಪಾವತಿಗಳನ್ನು ಹೆಚ್ಚು ಬಳಸುವಂತೆ ಮಾಡುವ ಪ್ರಸ್ತಾವನೆಯನ್ನು ಹೊರಡಿಸಿದೆ.

ಟ್ರಾಯ್​ನ ಈ ಪ್ರಸ್ತಾವವನ್ನು ಭಾರತೀಯ ಗ್ರಾಹಕರಿಗೆ ಅನ್​​ಸ್ಟ್ರಕ್ಚರ್ಡ್​ ಸಪ್ಲಿಮೆಂಟರಿ ಸರ್ವೀಸ್​ ಡೇಟಾ ಸಂದೇಶವನ್ನು ಉಚಿತವಾಗಿ ನೀಡಲು ಬಯಸುತ್ತದೆ. ಇಂಟರ್ನೆಟ್​ ಸೌಕರ್ಯವನ್ನು ಹೊಂದಿರದ ಮೊಬೈಲ್​ಗಳಲ್ಲಿ ಬ್ಯಾಂಕಿಂಗ್​ ಹಾಗೂ ಸಿಮ್​ ಸೇವೆಗಳಿಗಾಗಿ USSDಯನ್ನು ಬಳಸಲಾಗುತ್ತದೆ. ಪ್ರಸ್ತುತ USSD ಸಂದೇಶಗಳಿಗೆ ಗರಿಷ್ಠ 50 ಪೈಸೆ ಶುಲ್ಕವನ್ನು ವಿಧಿಸಲಾಗುತ್ತದೆ. ಆದರೆ ಸರ್ಕಾರವು ಇದನ್ನು ಉಚಿತವಾಗಿ ನೀಡುವ ಪ್ರಸ್ತಾವನೆ ಹೊಂದಿದೆ.

USSD ಸಂದೇಶಗಳನ್ನು ಎಲ್ಲಾ ಬಳಕೆದಾರರಿಗೆ ಉಚಿತವಾಗಿ ನೀಡುವ ಉದ್ದೇಶ ದೇಶದಲ್ಲಿ ಡಿಜಿಟಲ್​ ಪಾವತಿಗಳನ್ನು ಉತ್ತೇಜಿಸುವುದಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್​ ಸ್ಥಾಪಿತ ಡಿಜಿಟಲ್​ ಪಾವತಿಗಳನ್ನು ಜನರು ಹೆಚ್ಚಾಗಿ ಬಳಸುವಂತೆ ಮಾಡುವುದೇ ಈ ಪ್ರಸ್ತಾವನೆಯ ಮುಖ್ಯ ಉದ್ದೇಶವಾಗಿದೆ ಎಂದು ಟ್ರಾಯ್​ ಹೇಳಿದೆ.

ಟ್ರಾಯ್​ ಈ ಹಿಂದೆ ಯುಎಸ್​ಎಸ್​ಡಿ ಆಧಾರಿತ ಬ್ಯಾಂಕಿಂಗ್​ ಹಾಗೂ ಪಾವತಿ ಸೇವೆಗಳಿಗೆ 2016ರಲ್ಲಿ ಸುಂಕವನ್ನು 1.5 ರೂಪಾಯಿಯಿಂದ 0.5 ರೂಪಾಯಿಗೆ ಇಳಿಕೆ ಮಾಡಿತ್ತು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...