ಧಾರವಾಡ: ಧಾರವಾಡ ಎಸ್ ಡಿ ಎಂ ವೈದ್ಯಕೀಯ ಕಾಲೇಜಿನಲ್ಲಿ ಕೊರೊನಾ ಸೋಂಕು ಸ್ಫೋಟಗೊಂಡಿದ್ದು, ಇಂದು ಮತ್ತೆ 77 ವಿದ್ಯಾರ್ಥಿಗಳಲ್ಲಿ ಸೋಂಕು ದೃಢಪಟ್ಟಿದೆ.
ನಿನ್ನೆವರೆಗೂ 187 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಇಂದು ಮತ್ತೆ 77 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಈ ಮೂಲಕ ಎಸ್ ಡಿ ಎಂ ಕಾಲೇಜಿನ 281 ವಿದ್ಯಾರ್ಥಿಗಳಿಗೆ ಕೋರೊನಾ ಸೋಂಕು ದೃಢಪಟ್ಟಿದೆ.
ವರದಕ್ಷಿಣೆಗೆ ಮೀಸಲಿಟ್ಟ ಹಣ ಸಾರ್ಥಕ ಕಾರ್ಯಕ್ಕೆ ಬಳಕೆ
ಈ ಹಿನ್ನೆಲೆಯಲ್ಲಿ ಕಾಲೇಜು ಹಾಸ್ಟೇಲ್ ನಲ್ಲಿ ಸೋಂಕಿತರನ್ನು ಕ್ವಾರಂಟೈನ್ ಮಾಡಲಾಗಿದ್ದು, ಆಸ್ಪತ್ರೆ ಹೊರರೋಗಿಗಳ ವಿಭಾಗವನ್ನೇ ಬಂದ್ ಮಾಡಲಾಗಿದೆ.