ಪಶ್ಚಿಮ ಬಂಗಾಳದ ಕೋಲ್ಕತ್ತಾದ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. 12 ವರ್ಷದ ಮಗು ಆಕಸ್ಮಿಕವಾಗಿ ಪ್ಲಾಸ್ಟಿಕ್ ಸೀಟಿ ನುಂಗಿದೆ. ಈ ಸೀಟಿ ಮಗುವಿನ ಶ್ವಾಸಕೋಶದಲ್ಲಿ ಸಿಕ್ಕಿಹಾಕಿಕೊಂಡಿತ್ತು. ಕೋಲ್ಕತ್ತಾದ ಸರ್ಕಾರಿ ಎಸ್‌ಎಸ್‌ಕೆಎಂ ಆಸ್ಪತ್ರೆಯ ವೈದ್ಯರು ಆಪರೇಷನ್ ಮಾಡಿ ಶ್ವಾಸಕೋಶದಲ್ಲಿದ್ದ ಸಿಟಿಯನ್ನು ಹೊರತೆಗೆದಿದ್ದಾರೆ.
ಬರುಯಿಪುರ್ ನಿವಾಸಿ ರೆಹಾನ್ ಲಸ್ಕರ್, ಜನವರಿಯಲ್ಲಿ ಆಲೂಗಡ್ಡೆ ಚಿಪ್ಸ್ ತಿನ್ನುವಾಗ ಆಕಸ್ಮಿಕವಾಗಿ ಪ್ಲಾಸ್ಟಿಕ್ ಸೀಟಿಯನ್ನು ನುಂಗಿದ್ದ. ಬಾಯಿ ತೆರೆದಾಗೆಲ್ಲ ಸೀಟಿ ಶಬ್ಧ ಕೇಳಿ ಬರ್ತಿತ್ತು. ಆರಂಭದಲ್ಲಿ ಪಾಲಕರಿಗೆ ಇದು ತಿಳಿಯಲಿಲ್ಲ. ನೀರು ಕುಡಿಯಲು ರೆಹಾನ್ ಕಷ್ಟಪಡ್ತಿದ್ದನಂತೆ. ಎದೆನೋವು ಕಾಣಿಸಿಕೊಂಡು ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಎಸ್‌ಎಸ್‌ಕೆಎಂ ಆಸ್ಪತ್ರೆಗೆ ಕರೆದೊಯ್ದಾಗ ಸೀಟಿ ಸಿಕ್ಕಿಬಿದ್ದಿರುವುದು ಗೊತ್ತಾಗಿದೆ.
ಸೀಟಿ ನುಂಗಿದಾಗ ಮನೆಯವರಿಗೆ ಬಾಲಕ ಏನು ಹೇಳಿರಲಿಲ್ಲ. ಎದೆ ನೋವು ಕಾಣಿಸಿಕೊಂಡಾಗ ಹೇಳಿದ್ದಾನೆ. ಎಕ್ಸ್-ರೇ ಮತ್ತು ಸಿಟಿ ಸ್ಕ್ಯಾನ್ ಮಾಡಿದಾಗ, ಶ್ವಾಸಕೋಶದಲ್ಲಿ ಸೀಟಿ ಸಿಲುಕಿಕೊಂಡಿರುವುದು ಕಂಡು ಬಂದಿದೆ. ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಸೀಟಿ ಹೊರ ತೆಗೆದಿದ್ದಾರೆ. ಸೀಟಿ ತೆಗೆದ ನಂತ್ರ ಬಾಲಕ ಆರೋಗ್ಯವಾಗಿದ್ದಾನೆ. ಶ್ವಾಸಕೋಶದಲ್ಲಿ ಸೀಟಿ ಸಿಲುಕಿ 11 ತಿಂಗಳವರೆಗೆ ಬಾಲಕ ಬದುಕಿದ್ದು ಅಚ್ಚರಿ ಎಂದು ವೈದ್ಯರು ಹೇಳಿದ್ದಾರೆ.