ಈ ಶ್ವಾನದ ವಿಡಿಯೋ ನೋಡಿದ್ರೆ ನೀವೂ ಬಿದ್ದು ಬಿದ್ದು ನಗ್ತೀರಾ……! 27-11-2021 10:43AM IST / No Comments / Posted In: Featured News, Live News, Entertainment ನಾಯಿಗಳು ನೋಡುವುದಕ್ಕೆ ಮುದ್ದಾಗಿ ಇರುತ್ತವೆ. ಅಷ್ಟೇ ಅಲ್ಲ ಇವು ಬುದ್ಧಿವಂತ ಪ್ರಾಣಿ ಕೂಡ ಹೌದು. ಇವುಗಳ ತುಂಟಾಟಗಳನ್ನು ನೋಡುವುದೇ ಕಣ್ಣಿಗೆ ಹಬ್ಬ. ಹಾಗೆಯೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋ ನೋಡಿದ್ರೆ ಖಂಡಿತಾ ನಿಮಗೆ ಖುಷಿಕೊಡುವುದ್ರಲ್ಲಿ ಸಂಶಯವಿಲ್ಲ. ತಾಯಿಯು ತನ್ನ ಪುಟ್ಟ ಕಂದನಿಗೆ ಅಮ್ಮ ಎಂದು ಹೇಳಲು ಪ್ರಯತ್ನಿಸಿದ್ದಾಳೆ. ಅಮ್ಮ ಅಂತಾ ಹೇಳಿದ್ರೆ ಆಹಾರ ಕೊಡುವುದಾಗಿ ಕೈಯಲ್ಲಿ ಹಿಡಿದುಕೊಂಡಿದ್ದಾಳೆ. ಅಮ್ಮ ಎಂದು ಹೇಳಲು ಪ್ರೋತ್ಸಾಹಿಸುವುದಕ್ಕಾಗಿ ಮಗುವಿಗೆ ಆಹಾರ ನೀಡುತ್ತಾರೆ. ಆದರೆ, ಮಗುವಿನ ಜೊತೆ ಸಾಕು ನಾಯಿ ಕೂಡ ನಿಂತಿದೆ. ಪೋಷಕರು ಮಾಮಾ ಹೇಳು ಅಂತಾ ಮಗುವಿಗೆ ಹೇಳಿದ್ರೆ, ನಾಯಿ ಮೊದಲಿಗೆ ಹೇಳುತ್ತದೆ. ಇದರಿಂದ ಪೋಷಕರು ನಗೆಗಡಲಲ್ಲಿ ತೇಲಿದ್ದಾರೆ. ಮಗುವಿನ ತಂದೆ-ತಾಯಿ, ಅಮ್ಮ ಎಂದು ಹೇಳು ಅಂತಾ ಪ್ರಯತ್ನಪಡುತ್ತಿದ್ರೆ, ನಾಯಿ ಮೊದಲಿಗೆ ಹೇಳುವುದನ್ನು ನೋಡಿ ಅವರಿಗೆ ನಗು ತಡೆಯಲಾಗಲಿಲ್ಲ. ಅಂಧ ಬಾಲಕನ ರಾಜ್ಯ ಗೀತೆಗೆ ಮನಸೋತ ಛತ್ತೀಸ್ ಗಢ ಸಿಎಂ…! ಈ ವಿಡಿಯೋವನ್ನು ದಂಪತಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಟ್ವಿಟ್ಟರ್‌ನಲ್ಲಿ ಸಖತ್ ವೈರಲ್ ಆಗಿದೆ. 2.78 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಈ ವಿಡಿಯೋ ನೋಡಿ ನೆಟ್ಟಿಗರು ಸಂತಸ ವ್ಯಕ್ತಪಡಿಸಿದ್ದು, ನಾಯಿಗೆ ಬಹುಮಾನವಾಗಿ ಆಹಾರ ನೀಡಬೇಕಿತ್ತು ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಇದು ನಾಯಿ ತುಂಬಾ ಸ್ಮಾರ್ಟ್ ಆಗಿದೆ ಅಂತೆಲ್ಲಾ ಪ್ರತಿಕ್ರಿಯಿಸಿದ್ದಾರೆ. Mom & dad are trying to get their baby to say "mama" & "more". Instead, they burst out laughing when their dog says it first. That's one smart puppy!😮🐕⭐🐶⭐🐕😮 pic.twitter.com/PZ3ZJ7Oj44 — GoodNewsCorrespondent (@GoodNewsCorres1) November 24, 2021