ಸ್ಟೈಲ್ ವಿಷ್ಯ ಬಂದಾಗ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಹೆಸರು ಬಂದೇ ಬರುತ್ತೆ. ಹೊಸ ಹೊಸ ಪ್ರಯೋಗ ಮಾಡೋದ್ರಲ್ಲಿ ಪಿಗ್ಗಿ ಮುಂದಿದ್ದಾಳೆ. ಆದ್ರೆ ಆಕೆ ಸ್ಟೈಲ್ ಕೆಲವೊಮ್ಮೆ ಮುಜುಗರಕ್ಕೆ ಕಾರಣವಾಗುತ್ತದೆ. ಜೊತೆಗೆ ಟ್ರೋಲರ್ ಬಾಯಿಗೆ ಆಹಾರವಾಗುತ್ತದೆ. ಈಗ್ಲೂ ಹಾಟ್ ಡ್ರೆಸ್ ಮೂಲಕ ಪ್ರಿಯಾಂಕಾ ಸುದ್ದಿಗೆ ಬಂದಿದ್ದಾಳೆ.
ಬಾಲಿವುಡ್ನಿಂದ ಹಾಲಿವುಡ್ಗೆ ತನ್ನದೇ ಛಾಪು ಮೂಡಿಸಿರುವ ನಟಿ ಪ್ರಿಯಾಂಕಾ ಚೋಪ್ರಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾಳೆ. ಪಿಗ್ಗಿಯ ಹಳೆ ಫೋಟೋ ಮತ್ತೆ ಸುದ್ದಿ ಮಾಡ್ತಿದೆ. ಪ್ರಿಯಾಂಕಾ ಹಳೆ ಫೋಟೋಕ್ಕೆ ಜನರು ಟ್ರೋಲ್ ಮಾಡ್ತಿದ್ದಾರೆ.
ಮೊದಲೇ ಹೇಳಿದಂತೆ ಇದು ಹಳೆ ಫೋಟೋ. ಪ್ರಶಸ್ತಿ ಸಮಾರಂಭಕ್ಕೆ ಬಂದ ಪ್ರಿಯಾಂಕಾ, ಕಪ್ಪು ಬಾಡಿಕಾನ್ ಶೈಲಿಯ ಉಡುಗೆಯನ್ನು ಧರಿಸಿದ್ದಳು. ಒಂದು ಬದಿಯಿಂದ ಅತಿ ಹೆಚ್ಚು ಕಟ್ ಹೊಂದಿರುವ ಡ್ರೆಸ್ ಸುದ್ದಿಗೆ ಕಾರಣವಾಗಿದೆ. ಪ್ರಿಯಾಂಕಾ ಈ ಡ್ರೆಸ್ ಸ್ವಲ್ಪ ಅತಿಯಾಗಿದೆ ಅಂದ್ರೆ ತಪ್ಪಾಗಲಾರದು.
ಕಟ್ ಹೆಚ್ಚಿದ್ದರಿಂದ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಆರಾಮವಾಗಿರಲು ಸಾಧ್ಯವಾಗಲಿಲ್ಲ. ಶಿಮ್ರಿ ನೆಟ್ ಪ್ರಿಯಾಂಕಾ ಮಾನ ಕಾಪಾಡಿದ್ದಂತೂ ಸತ್ಯ. ಆದ್ರೆ ಇಷ್ಟರ ಮಧ್ಯೆಯೂ ಪ್ರಿಯಾಂಕಾ ಆತ್ಮವಿಶ್ವಾಸ ಕಡಿಮೆಯಾಗಿರಲಿಲ್ಲ. ಈ ಸಂದರ್ಭದಲ್ಲೂ ಸ್ಟೈಲಿಶ್ ಪೋಸ್ ಕೊಟ್ಟಿದ್ದರು . ಹಿಂದೆ ಮುಚ್ಚಿಕೊಳ್ಳುವ ಪ್ರಯತ್ನ ನಡೆಸಿದ್ರೂ ಅದು ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿತ್ತು. ಆ ಫೋಟೋ ಈಗ ಮತ್ತೆ ಸುದ್ದಿಯಾಗ್ತಿದೆ.