ಹೂಡಿಕೆದಾರರಿಗೆ ಇವತ್ತು 7.45 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ. ದಕ್ಷಿಣ ಆಫ್ರಿಕಾ ಸೇರಿದಂತೆ ಕೆಲವು ದೇಶಗಳಲ್ಲಿ ಕೊರೋನಾ ಹೊಸ ತಳಿ ವೈರಸ್ ಆತಂಕ ಮೂಡಿಸಿದೆ.
ಹೊಸ ಪ್ರಭೇದದ ಕೊರೋನಾ ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ಷೇರುಪೇಟೆಯಲ್ಲಿ ಕುಸಿತ ಕಂಡಿದೆ. ಕೊರೋನಾ ವೈರಸ್ ಭೀತಿ ಕಾರಣದಿಂದ ಷೇರುಪೇಟೆಯಲ್ಲಿ ಕುಸಿತವಾಗಿದೆ. ಯುರೋಪ್ ದೇಶಗಳಲ್ಲಿ ಮತ್ತೆ ನಿರ್ಬಂಧ ಜಾರಿ ಸಾಧ್ಯತೆಯಿರುವುದರಿಂದ ವಿದೇಶಿ ಹೂಡಿಕೆದಾರರಿಂದ 2300 ಕೋಟಿ ರೂಪಾಯಿ ಷೇರು ಮಾರಾಟ ಮಾಡಲಾಗಿದೆ.
ದಕ್ಷಿಣ ಆಫ್ರಿಕಾದಲ್ಲಿ ವೇಗವಾಗಿ ಹರಡುತ್ತಿರುವ ಕೊರೋನಾ ವೈರಸ್ ರೂಪಾಂತರದಿಂದಾಗಿ ಹೂಡಿಕೆದಾರರ ಆತಂಕ ತೋರಿದ್ದಾರೆ. ಭಾರತೀಯ ಷೇರುಗಳು ಇಂದು ಜಾಗತಿಕ ಮಾರುಕಟ್ಟೆಗಳಿಗೆ ಅನುಗುಣವಾಗಿ ಕುಸಿತ ಕಂಡಿವೆ. ಯುರೋಪಿಯನ್ ಯೂನಿಯನ್ ದಕ್ಷಿಣ ಆಫ್ರಿಕಾದಿಂದ ವಿಮಾನ ಪ್ರಯಾಣವನ್ನು ಸ್ಥಗಿತಗೊಳಿಸುವಂತೆ ಪ್ರಸ್ತಾಪಿಸಿದ್ದು ಜಾಗತಿಕ ಮಾರುಕಟ್ಟೆಗಳಲ್ಲಿ ತಲ್ಲಣಕ್ಕೆ ಕಾರಣವಾಯಿತು.
ತವರಿನಲ್ಲಿ, ಸೆನ್ಸೆಕ್ಸ್ 1,687 ಅಂಕಗಳ ನಷ್ಟದೊಂದಿಗೆ 57,107 ಕ್ಕೆ ಕೊನೆಗೊಂಡಿತು. ನಿಫ್ಟಿ 509 ಅಂಕಗಳನ್ನು ಕಳೆದುಕೊಂಡು 17,026 ಕ್ಕೆ ತಲುಪಿತು. ಈ ವಾರದ ಕೊನೆಯ ವಹಿವಾಟಿನಲ್ಲಿ ಹೂಡಿಕೆದಾರರು 7.45 ಲಕ್ಷ ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ.