ಇಟಲಿಯ ಸ್ತ್ರೀರೋಗತಜ್ಞ ವೈದ್ಯನೊಬ್ಬ ಸೆಕ್ಸ್ ನಿಂದ ಕ್ಯಾನ್ಸರ್ ಗುಣಪಡಿಸುವ ನೆಪ ಹೇಳಿ ರೋಗಿಗಳಿಗೆ ಮೋಸ ಮಾಡಿದ್ದಾನೆ. ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ವೈದ್ಯ, ಕೆಲಸ ಬಿಟ್ಟಿದ್ದಾನೆ. ವೈದ್ಯನ ವಿರುದ್ಧ ತನಿಖೆ ಶುರುವಾಗಿದೆ.
ಮಹಿಳೆಯೊಬ್ಬಳು ಈ ಬಗ್ಗೆ ಟಿವಿ ಚಾನೆಲ್ ಗೆ ಕರೆ ಮಾಡಿದ್ದಾಳೆ. 33 ವರ್ಷದ ಮಹಿಳೆ ಮಾಡಿದ ಕರೆ ನಂತ್ರ ಚಾನೆಲ್ ನವರು ಸ್ಟಿಂಗ್ ಆಪರೇಷನ್ ಮಾಡಲು ಮುಂದಾಗಿದ್ದಾಳೆ. ರೋಗಿಯೊಬ್ಬಳನ್ನು ವೈದ್ಯರ ಬಳಿ ಕಳುಹಿಸಿದ್ದಾಳೆ. ಚಾನೆಲ್ ವರದಿಗಾರ್ತಿ ಕ್ಯಾನ್ಸರ್ ರೋಗಿಯಾಗಿ ವೈದ್ಯರ ಬಳಿ ಹೋಗಿದ್ದಾಳೆ. ಕ್ಯಾನ್ಸರ್ ರೋಗಿಗೆ ಹೊಟೇಲ್ ಗೆ ಬರುವಂತೆ ವೈದ್ಯರು ಹೇಳಿದ್ದಾರೆ.
ಹುಡುಗಿ ರೋಗಿಯಾಗಿ ಹೊಟೇಲ್ ಗೆ ಹೋಗಿದ್ದಾಳೆ. ಹುಡುಗಿ ಹೊಟೇಲ್ ರೂಮ್ ಗೆ ಹೋಗ್ತಿದ್ದಂತೆ ವೈದ್ಯ ಬಟ್ಟೆ ಬಿಚ್ಚಲು ಶುರು ಮಾಡಿದ್ದಾನೆ. ಬಟ್ಟೆ ಬಿಚ್ಚುತ್ತಿದ್ದಂತೆ ಚಾನೆಲ್ ಸಿಬ್ಬಂದಿ ಬಂದಿದ್ದಾರೆ. ಅವರು ಬರ್ತಿದ್ದಂತೆ ವೈದ್ಯ ಎಚ್ಚೆತ್ತುಕೊಂಡಿದ್ದಾನೆ. ಆದರೆ ಎಲ್ಲರೆದುರಲ್ಲೆ ವೈದ್ಯನ ಬಣ್ಣ ಬಯಲಾಗಿದೆ.
ಮಕ್ಕಳಾಗಲಿಲ್ಲ ಎಂಬ ಕಾರಣಕ್ಕೆ ದೂರು ನೀಡಿದ ಮಹಿಳೆ ವೈದ್ಯರ ಬಳಿ ಹೋಗಿದ್ದಳಂತೆ. ಶಾರೀರಿಕ ಸಂಬಂಧ ಬೆಳೆಸುವ ಮೂಲಕ ಸಮಸ್ಯೆ ಕಡಿಮೆ ಮಾಡ್ತೇನೆಂದು ವೈದ್ಯ ಹೇಳಿದ್ದನಂತೆ. ಇದ್ರಿಂದ ಕಂಗಾಲಾದ ಮಹಿಳೆ ಚಾನೆಲ್ ಗೆ ಕರೆ ಮಾಡಿದ್ದಾಳೆ.