alex Certify ಪಿಯುಸಿ ನಂತರ ಮುಂದೇನು ಎಂದು ಯೋಚಿಸ್ತಿದ್ದೀರಾ…..? ಹಾಗಾದರೆ ಈ ಕೋರ್ಸ್ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಿಯುಸಿ ನಂತರ ಮುಂದೇನು ಎಂದು ಯೋಚಿಸ್ತಿದ್ದೀರಾ…..? ಹಾಗಾದರೆ ಈ ಕೋರ್ಸ್ ಮಾಡಿ

ಪಿಯುಸಿ ಮುಗಿದ ನಂತರ ಮುಂದೆ ಏನು ಮಾಡಬೇಕು..? ಯಾವ ಕ್ಷೇತ್ರದಲ್ಲಿ ಮುಂದುವರೆಯಬೇಕು…? ಮುಂದೆ ಯಾವ ವೃತ್ತಿ ಮಾಡಬೇಕು ಎಂಬ ಚಿಂತೆ ಸಾಮಾನ್ಯವಾಗಿ ಎಲ್ಲ ವಿದ್ಯಾರ್ಥಿಗಳನ್ನೂ ಕಾಡುತ್ತೆ. ವಿದ್ಯಾರ್ಥಿಗಳು ತಮ್ಮ ಜೀವನದ ಯಶಸ್ಸಿಗೆ ಬೇಕಾದ ಕರೀಯರ್ ಅನ್ನು ಆಯ್ದುಕೊಳ್ಳುವುದು ಅಷ್ಟೊಂದು ಸುಲಭವಲ್ಲ. ಈಗ ಶಿಕ್ಷಣ ರಂಗದಲ್ಲಿ ಹತ್ತು ಹಲವು ಕೋರ್ಸಗಳು ಲಭ್ಯವಿದೆ. ಯಾರು ಯಾವ ವಿಷಯಗಳಲ್ಲಿ ಆಸಕ್ತಿ ಹೊಂದಿದ್ದಾರೋ ಅಂತಹ ವಿಷಯವನ್ನು ಅವರು ಆಯ್ದುಕೊಳ್ಳಬಹುದು. ಈಗ ನಾವು ಜನಸಾಮಾನ್ಯರಿಗೆ ಅಪರಿಚಿತವಾಗಿರುವ ಒಂದು ವಿಷಯದ ಬಗ್ಗೆ ಹೇಳಲಿದ್ದೇವೆ. ಇದು ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ ಮುನ್ನುಡಿಯಾಗಿದೆ.

ಭಾರತದಲ್ಲಿ ಆಕ್ಯುಪೇಶನಲ್ ಥೆರಪಿ 1950ರಲ್ಲೇ ಶುರುವಾಗಿತ್ತು. ಆದರೆ ಈಗ ಇದರ ಕುರಿತಾದ ಹೆಚ್ಚಿನ ಮಾಹಿತಿ ಯಾರಿಗೂ ತಿಳಿದಿಲ್ಲ. ಅಂಗವಿಕಲ ಮಕ್ಕಳಿಗೆ ಶಾರೀರಿಕ ಮತ್ತು ಮಾನಸಿಕ ರೂಪದಲ್ಲಿ ಚಿಕಿತ್ಸೆ ನೀಡುವುದೇ ಆಕ್ಯುಪೇಶನಲ್ ಥೆರಪಿ. ಮಾನಸಿಕ ಅಸ್ವಸ್ಥರ ಆರೈಕೆ ಮತ್ತು ಅವರ ಪುನರ್ವಸತಿಗಳಿಗೆ ಕೆಲಸ ಮಾಡುವವರನ್ನು ಆಕ್ಯುಪೇಶನಲ್ ಥೆರಪಿಸ್ಟ್ ಎನ್ನುತ್ತಾರೆ.

ಕೋರ್ಸ್ ನಂತರ ಇಲ್ಲಿ ಸಿಗುತ್ತೆ ಅವಕಾಶ : ಆಕ್ಯುಪೇಶನಲ್ ಥೆರಪಿ ಕೋರ್ಸ್ ಗೆ ಪ್ರವೇಶ ಪಡೆಯಲು ಬಯೊಲಜಿ, ಫಿಜಿಕ್ಸ್, ಕೆಮೆಸ್ಟ್ರಿ ವಿಷಯಗಳಲ್ಲಿ ದ್ವಿತೀಯ ಪಿಯುಸಿಯನ್ನು ಪಾಸಾಗಿರಬೇಕು. ಆಕ್ಯುಪೇಶನಲ್ ಥೆರಪಿ 4 ವರ್ಷದ ಡಿಗ್ರಿ ಕೋರ್ಸ್ ಆಗಿದೆ. ಡಿಗ್ರಿ ಆದ ಮೇಲೆ ಮಾಸ್ಟರ್ ಡಿಗ್ರಿ ಮತ್ತು ಡಾಕ್ಟರೇಟ್ ಪದವಿಯನ್ನು ಕೂಡ ಮಾಡಬಹುದು.

ಪಿಡಿಯಾಟ್ರಿಕ್ಸ್, ನ್ಯುರೊಲಜಿಸ್ಟ್, ಮಾನಸಿಕ ರೋಗ, ಕಮ್ಯುನಿಟಿ ರಿಹ್ಯಾಬಿಲಿಟೇಶನ್ ನಲ್ಲಿ ಮಾಸ್ಟರ್ ಡಿಗ್ರಿ ಪಡೆಯಬಹುದು. ಇದಲ್ಲದೆ ಸರ್ಕಾರಿ ಸಂಸ್ಥೆ, ಖಾಸಗಿ ಸಂಸ್ಥೆ, ಶಾಲೆ, ಡೇ ಕೇರ್ ಸೆಂಟರ್ ಗಳಲ್ಲಿ ಆಕ್ಯುಪೇಶನಲ್ ಥೆರಪಿಸ್ಟ್ ಗಳಿಗೆ ಸಾಕಷ್ಟು ಬೇಡಿಕೆ ಇದೆ.

ಈ ಸ್ಕಿಲ್ಸ್ ಅಗತ್ಯ : ಆಕ್ಯುಪೇಶನಲ್ ಥೆರಪಿಯಲ್ಲಿ ವಿದ್ಯಾರ್ಥಿಗಳು ವೈಜ್ಞಾನಿಕ ವಿಧಾನಗಳ ಜೊತೆಗೆ ರೋಗಿಗಳ ನೋವನ್ನು ಅರಿತು ಚಿಕಿತ್ಸೆ ನೀಡುವ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು. ಒಳ್ಳೆಯ ಕಮ್ಯುನಿಕೇಶನ್, ಟೀಮ್ ವರ್ಕ್, ಹಾರ್ಡ್ ವರ್ಕ್, ಒತ್ತಡ ನಿರ್ವಹಣೆ ಮುಂತಾದ ಗುಣಗಳು ಈ ವೃತ್ತಿಗೆ ಅತಿ ಮುಖ್ಯ.

ಆಕ್ಯುಪೇಶನಲ್ ಥೆರಪಿಯಲ್ಲಿರುವ ಕೋರ್ಸ್ ಗಳು : ಬಿ ಎಸ್ಸಿ ಇನ್ ಆಕ್ಯುಪೇಶನಲ್ ಥೆರೆಪಿ, ಬ್ಯಾಚುಲರ್ ಆಫ್ ಆಕ್ಯುಪೇಶನಲ್ ಥೆರೆಪಿ, ಡಿಪ್ಲೊಮಾ ಇನ್ ಆಕ್ಯುಪೇಶನಲ್ ಥೆರೆಪಿ, ಎಮ್ ಎಸ್ ಸಿ ಇನ್ ಫಿಜಿಕಲ್ ಎಂಡ್ ಆಕ್ಯುಪೇಶನಲ್ ಥೆರೆಪಿ, ಮಾಸ್ಟರ್ ಆಫ್ ಆಕ್ಯುಪೇಶನಲ್ ಥೆರೆಪಿ.

ವಿದೇಶದಲ್ಲೂ ಬೇಡಿಕೆ : ಆಕ್ಯುಪೇಶನಲ್ ಥೆರೆಪಿಸ್ಟ್ ಗೆ ವಿದೇಶದಲ್ಲೂ ಉತ್ತಮ ಅವಕಾಶಗಳಿವೆ. ಅಮೆರಿಕಾದಲ್ಲಿ ಆಕ್ಯುಪೇಶನಲ್ ಥೆರೆಪಿಸ್ಟ್ ಗಳ ಒಂದು ವರ್ಷದ ಸಂಬಳ 70 ಸಾವಿರ ಡಾಲರ್. ಅಂದರೆ ಸುಮಾರು 50 ಲಕ್ಷ ರೂಪಾಯಿಯಾಗಿದೆ. ಭಾರತದಲ್ಲಿ ಮೊದಮೊದಲು ಆಕ್ಯುಪೇಶನಲ್ ಥೆರೆಪಿಸ್ಟ್ ಗಳಿಗೆ ಕಡಿಮೆ ಸಂಬಳ ಇದ್ದರೂ ಅನುಭವಸ್ಥರಿಗೆ ಒಳ್ಳೆಯ ವರಮಾನವಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...