ಕೋವಿಡ್ ಸೋಂಕಿನ ಮತ್ತೊಂದು ಅಲೆ ಆವರಿಸುವ ಭೀತಿಯಲ್ಲಿರುವ ಬ್ರಿಟನ್, ಆಫ್ರಿಕಾದ ಆರು ದೇಶಗಳಿಗೆ ಸಂಚಾರ ನಿರ್ಬಂಧ ಹೇರಿದೆ.
ದಕ್ಷಿಣ ಆಫ್ರಿಕಾದಲ್ಲಿ ಕೋವಿಡ್ನ ಹೊಸ ಅವತಾರಿಯೊಂದು ಹಬ್ಬುತ್ತಿರುವ ಸುದ್ದಿಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಬ್ರಿಟನ್ನಲ್ಲಿ ಆತಂಕ ಸೃಷ್ಟಿಯಾಗಿದೆ. ಬಿ.1.1.529 ಎಂದು ಗುರುತಿಸಲ್ಪಡುವ ಈ ಅವತಾರಿಯಲ್ಲಿರುವ ಸ್ಪೈಕ್ ಪ್ರೊಟೀನ್ ಕೋವಿಡ್-19ನ ಮೂಲ ವೈರಾಣುವಿಗಿಂತ ಭಿನ್ನವಾಗಿದೆ ಎಂದು ಬ್ರಿಟನ್ನ ಆರೋಗ್ಯ ಸಚಿವಾಲಯ ತಿಳಿಸಿದೆ.
ಕೃಷಿ ಕಾಯ್ದೆ ವಿರುದ್ಧ ಮತ್ತೆ ಬೀದಿಗಿಳಿದ ಅನ್ನದಾತ; ರಾಜ್ಯದ ಹಲವೆಡೆ ರಸ್ತೆ ತಡೆ; ಬಾರುಕೋಲು ಚಳುವಳಿ ನಡೆಸಿ ಆಕ್ರೋಶ
“ಇದುವರೆಗೂ ನಾವು ಕಂಡ ಅತ್ಯಂತ ಮಹತ್ವದ ಕೋವಿಡ್ ವೈರಾಣು ಇದಾಗಿದೆ. ಈ ವೈರಾಣುವಿನ ಹಬ್ಬುವಿಕೆ, ತೀವ್ರತೆ ಹಾಗೂ ಲಸಿಕೆ ವಿರುದ್ಧ ಪ್ರತಿರೋಧಕ ಶಕ್ತಿಯ ಕುರಿತು ಸಂಶೋಧನೆ ಪ್ರಗತಿಯಲ್ಲಿದೆ,” ಎಂದು ಬ್ರಿಟನ್ ಆರೋಗ್ಯ ಇಲಾಖೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜೆನ್ನಿ ಹ್ಯಾರಿಸ್ ತಿಳಿಸಿದ್ದಾರೆ.
ಈ ವಾರದ ಆರಂಭದಲ್ಲಿ ವೈರಾಣುವಿನ ಹೊಸ ಅವತಾರ ಕಂಡು ಬಂದಿದ್ದು, ದಕ್ಷಿಣ ಆಫ್ರಿಕಾ ಮೇಲೆ ಸಂಚಾರ ನಿರ್ಬಂಧ ಹೇರಿದ ಬೆನ್ನಲ್ಲೇ ಅಕ್ಕಪಕ್ಕದ ಇನ್ನೂ ಐದು ದೇಶಗಳ ಮೇಲೂ ಇಂಥದ್ದೇ ಕ್ರಮಕ್ಕೆ ಮುಂದಾಗಿದೆ ಬ್ರಿಟನ್.
ದಕ್ಷಿಣ ಆಫ್ರಿಕಾ, ಜಿಂಬಾಬ್ವೆ, ನಮೀಬಿಯಾ, ಬೋಟ್ಸ್ವಾನಾ, ಲೆಸೋಥೋ ಹಾಗೂ ಎಸ್ವಾತಿನಿ ದೇಶಗಳಿಗೆ ತಾತ್ಕಾಲಿಕವಾಗಿ ಪ್ರಯಾಣ ನಿರ್ಬಂಧ ಹೇರುತ್ತಿರುವುದಾಗಿ ಬ್ರಿಟನ್ ಸರ್ಕಾರ ಪ್ರಕಟಿಸಿದೆ.