alex Certify ಹೈಟೆಲ್ ಫೀಚರ್ ಜೊತೆ ಬರ್ತಿದೆ ಸುಜುಕಿಯ ಹೊಸ ಎಸ್-ಕ್ರಾಸ್ ಕಾರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೈಟೆಲ್ ಫೀಚರ್ ಜೊತೆ ಬರ್ತಿದೆ ಸುಜುಕಿಯ ಹೊಸ ಎಸ್-ಕ್ರಾಸ್ ಕಾರು

ಸುಜುಕಿ ಮೂರನೇ ತಲೆಮಾರಿನ ಎಸ್-ಕ್ರಾಸ್‌ನ ಮೊದಲ ಫೋಟೋ ಮತ್ತು ವಿವರಗಳನ್ನು ಬಿಡುಗಡೆ ಮಾಡಿದೆ. ಕಂಪನಿ ಕಾರಿಗೆ, 1.4 ಲೀಟರ್ ಬೂಸ್ಟರ್‌ ಜೆಟ್ ಪೆಟ್ರೋಲ್ ಎಂಜಿನ್ ನೀಡಿದೆ. ಹೊಸ ಸುಜುಕಿ ಎಸ್-ಕ್ರಾಸ್‌ನ ಉದ್ದ 4300 ಎಂಎಂ, ಅಗಲ 1758 ಎಂಎಂ, ಅದರ ಎತ್ತರ 1585 ಎಂಎಂ ಇದೆ. ಇದಕ್ಕೆ 2600 ಎಂಎಂ ವೀಲ್‌ ಬೇಸ್ ನೀಡಲಾಗಿದೆ. ಗಾತ್ರದಲ್ಲಿ, ಈ ಕಾರು ಪ್ರಸ್ತುತ ಕಾರನ್ನು ಹೋಲುತ್ತದೆ.

ಹೊಸ ಎಸ್-ಕ್ರಾಸ್, ಟ್ರೈ-ಬೀಮ್ ಎಲ್.ಇ.ಡಿ.ಗಳೊಂದಿಗೆ ಸ್ಲಿಮ್ ಹೆಡ್‌ ಲ್ಯಾಂಪ್‌ಗಳು, ಗಟ್ಟಿಮುಟ್ಟಾದ ಬಾನೆಟ್‌ನೊಂದಿಗೆ ಬರುತ್ತದೆ. ಇದಲ್ಲದೇ, ಸ್ಟ್ರಾಂಗ್ ಕ್ಲಾಡಿಂಗ್, 17 ಇಂಚಿನ ಡ್ಯುಯಲ್ ಟೋನ್ 5-ಸ್ಪೋಕ್ ಅಲಾಯ್ ವೀಲ್‌ಗಳು, ರೌಂಡ್ ಎಲ್‌.ಇ.ಡಿ. ಟೈಲ್‌ ಲ್ಯಾಂಪ್‌ಗಳು, ರೂಫ್ ಸ್ಪಾಯ್ಲರ್‌ಗಳನ್ನು ಕಾರಿನೊಂದಿಗೆ ನೀಡಲಾಗಿದೆ. ಹೊಸ ಎಸ್-ಕ್ರಾಸ್ ಪ್ರಸ್ತುತ ಮಾದರಿಯಂತೆ 9-ಇಂಚಿನ ಟಚ್‌ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸ್ಟೀರಿಂಗ್ ವೀಲ್, ಗೇರ್ ಲಿವರ್, ಪವರ್ ವಿಂಡೋ ಸ್ವಿಚ್, ಕ್ಲೈಮೇಟ್ ಕಂಟ್ರೋಲ್ ಹೊಂದಿದೆ.

ಸುರಕ್ಷತೆಯ ದೃಷ್ಟಿಯಿಂದ, ಹೊಸ ಸುಜುಕಿ ಎಸ್-ಕ್ರಾಸ್ ಟ್ರಾಫಿಕ್ ಸೈನ್ ರೆಕಗ್ನಿಷನ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಬ್ಲೈಂಡ್‌ಸ್ಪಾಟ್ ಮಾನಿಟರಿಂಗ್ ಮತ್ತು ಫ್ರಂಟ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸರ್‌ ಗಳು ಸೇರಿದಂತೆ ಹಲವಾರು ಡ್ರೈವರ್ ಅಸಿಸ್ಟೆಂಟ್ ಸಿಸ್ಟಮ್‌ ಗಳನ್ನು ಹೊಂದಿದೆ. ಕಂಪನಿಯು ಈ ಎಂಜಿನ್‌ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳನ್ನು ನೀಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...