
ಐಪಿಎಲ್ 2021ರ ಋತುವಿನಲ್ಲಿ ಕೆಕೆಆರ್ ತಂಡವನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ 27 ರನ್‌ಗಳಿಂದ ಸೋಲಿಸಿತ್ತು. ಈ ಮೂಲಕ ಸಿಎಸ್ಕೆ ನಾಲ್ಕನೇ ಪ್ರಶಸ್ತಿ ಗೆದ್ದಿದೆ. ಆದ್ರೆ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಮುಂದಿನ ಸರಣಿ ಆಡಲಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಸಾಕಷ್ಟು ಬದಲಾವಣೆಯಾಗಲಿದೆ.
ಮುಂದಿನ ಸರಣಿಗೂ ಮುನ್ನ ಮೆಗಾ ಹರಾಜು ನಡೆಯಲಿದೆ. ಹರಾಜಿಗೆ ಮುನ್ನ ಎಲ್ಲ ತಂಡಗಳು ನಾಲ್ಕು ಹಳೆ ಆಟಗಾರರನ್ನು ಉಳಿಸಿಕೊಳ್ಳಲಿವೆ. ಸಿಎಸ್ಕೆ ಕೂಡ ನಾಲ್ಕು ಆಟಗಾರರನ್ನು ಉಳಿಸಿಕೊಳ್ಳಲಿದೆ. ಸಿಎಸ್ಕೆ ತಂಡದಲ್ಲಿ ಯಾವ ಆಟಗಾರರಿರಲಿದ್ದಾರೆ ಎಂಬುದು ಬಹುತೇಕ ಸ್ಪಷ್ಟವಾಗಿದೆ. ಅಚ್ಚರಿಯ ಸಂಗತಿ ಅಂದ್ರೆ ಅನೇಕ ವರ್ಷಗಳಿಂದ ಧೋನಿ ಜೊತೆಗಿರುವ ಆಟಗಾರನನ್ನು ತಂಡ ಕೈಬಿಟ್ಟಿದೆ.
ಮುಂದಿನ ಮೂರು ಸರಣಿಗೆ ಸಿಎಸ್‌ಕೆ ನಾಯಕನಾಗಿ ಮಹೇಂದ್ರ ಸಿಂಗ್ ಧೋನಿ ಮುಂದುವರೆಯಲಿದ್ದಾರೆ. ಧೋನಿ ಹೊರತಾಗಿ ಈ ತಂಡದಲ್ಲಿ ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ಮತ್ತು ಯುವ ಆರಂಭಿಕ ಆಟಗಾರ ರಿತುರಾಜ್ ಗಾಯಕ್ವಾಡ್ ಇರಲಿದ್ದಾರೆ. ಮೊಯಿನ್ ಅಲಿ ಜೊತೆ ಮಾತುಕತೆ ನಡೆಯುತ್ತಿದೆ. ಆದ್ರೆ ಸಿಎಸ್ಕೆ ಆಟಗಾರ ಸುರೇಶ್ ರೈನಾರನ್ನು ತಂಡ ಕೈ ಬಿಡ್ತಿದೆ. ಇದು ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿದೆ. ಸುರೇಶ್ ರೈನಾ, ಧೋನಿಯ ಆಪ್ತ. ಹಾಗೆ ಸಿಎಸ್ಕೆ ತಂಡದ ವಿಶೇಷ ಆಟಗಾರ ಎಂದು ಪರಿಗಣಿಸಲಾಗಿದೆ. ಸುರೇಶ್ ರೈನಾರನ್ನು ತಂಡ ಉಳಿಸಿಕೊಳ್ಳಲ್ಲಿದೆ ಎಂಬ ಭರವಸೆಯಲ್ಲಿದ್ದ ಅಭಿಮಾನಿಗಳಿಗೆ ಶಾಕ್ ಆಗಿದೆ.
ಸುರೇಶ್ ರೈನಾ ಅವರನ್ನು ವಿಶ್ವದಾದ್ಯಂತ ಮಿಸ್ಟರ್ ಐಪಿಎಲ್ ಎಂದು ಕರೆಯಲಾಗುತ್ತದೆ. ಐಪಿಎಲ್‌ನಲ್ಲಿ ಅವರ ದಾಖಲೆ ಅತ್ಯುತ್ತಮವಾಗಿದೆ. 205 ಪಂದ್ಯಗಳನ್ನು ಆಡಿರುವ ಸುರೇಶ್ ರೈನಾ, 32.51 ಸರಾಸರಿಯಲ್ಲಿ 5528 ರನ್ ಗಳಿಸಿದ್ದಾರೆ. ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಸುರೇಶ್ ರೈನಾ ಎರಡನೇ ಸ್ಥಾನದಲ್ಲಿದ್ದಾರೆ.