ಕೇಂದ್ರ ಸರ್ಕಾರಿ ಉದ್ಯೋಗಿಗಳ ಮೊಗದಲ್ಲಿ ನಗು ಮೂಡಿಸುವ ಸುದ್ದಿಯೊಂದರಲ್ಲಿ, ತುಟ್ಟಿ ಭತ್ಯೆಯಲ್ಲಿ (ಡಿಎ) ಹೆಚ್ಚಳ ಮಾಡಲು ನರೇಂದ್ರ ಮೋದಿ ಸರ್ಕಾರ ಮುಂದಾಗುವ ಸಾಧ್ಯತೆ ಇದೆ.
ಜನವರಿ 2022ರಿಂದ ಪರಿಣಾಮಕ್ಕೆ ಬರಲಿರುವ ಈ ಏರಿಕೆಯ ದರ ಎಷ್ಟು ಎಂಬ ಬಗ್ಗೆ ಅಧಿಕೃತವಾಗಿ ಇನ್ನೂ ಏನೂ ಪ್ರಕಟವಾಗದೇ ಇದ್ದರೂ ಸಹ, ಎಐಸಿಪಿಐ ಸೂಚ್ಯಂಕದ ಅನುಸಾರ ಡಿಎನಲ್ಲಿ 3%ದಷ್ಟು ಹೆಚ್ಚಳವಾಗುವ ನಿರೀಕ್ಷೆ ಇದೆ. ಈ ಹೆಚ್ಚಳದಿಂದಾಗಿ ಉದ್ಯೋಗಿಗಳ ವೇತನದಲ್ಲೂ ಏರಿಕೆಯಾಗಲಿದೆ.
ತಡರಾತ್ರಿ ಗಡಿ ನುಸುಳಲು ಯತ್ನಿಸಿದ ಭಯೋತ್ಪಾದಕ ಫಿನಿಶ್
ಈ ಮೂಲಕ, ಮೂಲ ವೇತನದ 31%ರಷ್ಟಿದ್ದು ಡಿಎ ಇನ್ನು ಮುಂದೆ 34%ರಷ್ಟು ಇರಲಿದೆ. ಸೆಪ್ಟೆಂಬರ್ 2021ರ ವರೆಗಿನ ಅಂಕಿಅಂಶಗಳ ಅನುಸಾರ ಡಿಎ 32.81%ದಷ್ಟು ಇತ್ತು. ಆದರೆ ಈ ಬಗ್ಗೆ ಕೇಂದ್ರ ಸರ್ಕಾರ ಅಧಿಕೃತವಾಗಿ ಏನನ್ನೂ ಹೇಳಿಲ್ಲ.