ಮೊಬೈಲ್ ಬಳಕೆದಾರರ ಜೇಬಿಗೆ ಕತ್ತರಿ ಬಿದ್ದಿದೆ. ಏರ್ಟೆಲ್ ನಂತ್ರ ವೊಡಾಫೋನ್, ಐಡಿಯಾ ಎಲ್ಲಾ ಪ್ರಿಪೇಯ್ಡ್ ಯೋಜನೆಗಳ ಬೆಲೆಯನ್ನು ಹೆಚ್ಚಿಸಿದೆ. ವೊಡಾಫೋನ್ ಐಡಿಯಾ ಯೋಜನೆಗಳ ಬೆಲೆ ಶೇಕಡಾ 25 ರಷ್ಟು ಹೆಚ್ಚಾಗಿದೆ. ಇಂದಿನಿಂದಲೇ ಹೊಸ ದರ ಜಾರಿಗೆ ಬಂದಿದೆ.
ಇದುವರೆಗೆ 79 ರೂಪಾಯಿ ಇದ್ದ ವೋಡಾಫೋನ್ ಐಡಿಯಾ ಮೂಲ ಯೋಜನೆ ಬೆಲೆ 99 ರೂಪಾಯಿಗೆ ಏರಿಕೆಯಾಗಿದೆ. ಟಾಪ್ ಅಪ್ ಪ್ಯಾಕ್ ಬೆಲೆ 48 ರೂಪಾಯಿ ಬದಲಾಗಿ 58 ರೂಪಾಯಿಯಾಗಿದೆ.
ದಿನಕ್ಕೆ 1.5ಜಿಬಿ ಡೇಟಾ ಹೊಂದಿರುವ ಪ್ಯಾಕ್ ಬೆಲೆ ಈಗ 249 ರೂಪಾಯಿ ಬದಲಿಗೆ 299 ರೂಪಾಯಿಯಾಗಿದೆ. ಈ ಯೋಜನೆಯ ಸಿಂಧುತ್ವ 28 ದಿನಗಳು. ಒಂದು ಜಿಬಿ ಡೇಟಾ ಪ್ಯಾಕ್ ಬೆಲೆ 219 ರೂಪಾಯಿಯಿಂದ 269 ರೂಪಾಯಿಗೆ ಏರಿದೆ. 2 ಜಿಬಿ ಡೇಟಾ ಪ್ಯಾಕ್ ಬೆಲೆ 299 ರೂಪಾಯಿ ಬದಲಾಗಿ 359 ರೂಪಾಯಿಯಾಗಿದೆ.
24 ಜಿಬಿ ಡೇಟಾದ ವಾರ್ಷಿಕ ಯೋಜನೆ ಬೆಲೆ 1499 ರೂಪಾಯಿಯಿಂದ 1799 ರೂಪಾಯಿಯಾಗಿದೆ. ವೊಡಾಫೋನ್ ಐಡಿಯಾದ 149 ರೂಪಾಯಿ ಯೋಜನೆ ಬೆಲೆ ಈಗ 179 ರೂಪಾಯಿಯಾಗಿದೆ.
ಸಾಲದ ಸುಳಿಯಲ್ಲಿ ಸಿಲುಕಿರುವ ವೊಡಾಫೋನ್ ಐಡಿಯಾ, ಬೆಲೆ ಏರಿಕೆಗೆ ಮುಂದಾಗಿದೆ. ಇದು ಆರ್ಥಿಕ ಒತ್ತಡದಿಂದ ಹೊರಬರಲು ನೆರವಾಗಲಿದೆ ಎಂದು ಕಂಪನಿ ಹೇಳಿದೆ.
ವೊಡಾಫೋನ್-ಐಡಿಯಾ ಮೊದಲು, ಏರ್ಟೆಲ್ ಪ್ರಿಪೇಯ್ಡ್ ಯೋಜನೆಗಳ ಬೆಲೆಯನ್ನು ಹೆಚ್ಚಿಸಿದೆ. ಏರ್ಟೆಲ್‌ನ 79 ರೂಪಾಯಿ ಯೋಜನೆ ಬೆಲೆ ಈಗ 99 ರೂಪಾಯಿಯಾಗಿದೆ. 149 ರೂಪಾಯಿ ಯೋಜನೆ ಬೆಲೆ 179 ರೂಪಾಯಿಯಾಗಿದೆ.