
ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ಪಡಿತರ ಚೀಟಿದಾರರಿಗೆ ಜನವರಿಯಿಂದ ಪಡಿತರ ಅಕ್ಕಿಯ ಜೊತೆಗೆ ಸಾರವರ್ಧಿತ ಅಕ್ಕಿಯನ್ನು ಕೂಡ ವಿತರಿಸಲಾಗುತ್ತದೆ. ಆಹಾರ ಇಲಾಖೆ ಪೋಷಕಾಂಶ ಕೊರತೆ ನೀಗಿಸಲು ಸಾರವರ್ಧಿತ ಅಕ್ಕಿಯನ್ನು ವಿತರಿಸಲು ಮುಂದಾಗಿದ್ದು, ಪ್ರಾಯೋಗಿಕವಾಗಿ ಯೋಜನೆ ಜಾರಿಗೆ ಕ್ರಮ ಕೈಗೊಳ್ಳಲಾಗಿದೆ.
ಈಗಾಗಲೇ ಶಾಲಾ ಮಕ್ಕಳಿಗೆ ಬಿಸಿಯೂಟದಲ್ಲಿ ಸಾರವರ್ಧಿತ ಅಕ್ಕಿ ಮಿಶ್ರಣ ಮಾಡಿ ವಿತರಿಸಲಾಗುತ್ತಿದ್ದು, ಇದೇ ರೀತಿಯಲ್ಲಿ ಪಡಿತರ ಚೀಟಿದಾರರಿಗೆ ಕೂಡ ಸಾರವರ್ಧಿತ ಅಕ್ಕಿಯನ್ನು ವಿತರಿಸಲಾಗುವುದು.
ಕೇಂದ್ರ ಸರ್ಕಾರದಿಂದ ಈಗಾಗಲೇ ಅನೇಕ ರಾಜ್ಯಗಳಲ್ಲಿ ಪಡಿತರ ಅಕ್ಕಿಯ ಜೊತೆಗೆ ಸಾರವರ್ಧಿತ ಅಕ್ಕಿಯನ್ನು ಕೂಡ ವಿತರಿಸಲಾಗುತ್ತಿದೆ. ರಾಜ್ಯದಲ್ಲಿಯೂ ಯೋಜನೆ ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ತುಂಡಾದ ಅಕ್ಕಿ ಪುಡಿಮಾಡಿ ಪೋಷಕಾಂಶ ಸೇರಿಸಿ ಅದನ್ನು ಅಕ್ಕಿಯ ಕಾಳುಗಳ ರೂಪದಲ್ಲಿ ಪರಿವರ್ತಿಸಿ ಪಡಿತರ ಅಕ್ಕಿಯ ಜೊತೆಗೆ ಮಿಶ್ರಣ ಮಾಡಿ ವಿತರಿಸಲಾಗುವುದು. 3 ಕೆಜಿ ಅಕ್ಕಿಯಲ್ಲಿ ಶೇಕಡ 25 ರಷ್ಟು ಸಾರವರ್ಧಿತ ಅಕ್ಕಿ ಇರಲಿದ್ದು, ಉಳಿದ ಅಕ್ಕಿ ಪಡಿತರ ಅಕ್ಕಿಯಾಗಿರುತ್ತದೆ. ಪಡಿತರ ಅಕ್ಕಿಯಲ್ಲಿ ಸಾರವರ್ಧಿತ ಅಕ್ಕಿಯನ್ನು ಮಿಶ್ರಣ ಮಾಡುವುದರಿಂದ ಅಕ್ರಮಗಳಿಗೆ ಕಡಿವಾಣ ಬೀಳಲಿದೆ ಎಂದು ಹೇಳಲಾಗಿದೆ.