ಗಾರ್ಲಿಕ್ ಅಂದ್ರೆ ಶುಂಠಿ ಎಂದ ಪಾಕ್ ಸಚಿವ: ಯಾವ ಶಾಲೆಯಲ್ಲಿ ಓದಿದ್ದು ಅಂತಾ ಟ್ರೋಲ್ ಮಾಡಿದ ನೆಟ್ಟಿಗರು..! 25-11-2021 7:09AM IST / No Comments / Posted In: Latest News, Live News, International ಪಾಕಿಸ್ತಾನದ ಮಾಹಿತಿ ಸಚಿವ ಫವಾದ್ ಚೌಧರಿ ಅವರು, ಇಂಗ್ಲೀಷ್ ನಲ್ಲಿ ಗಾರ್ಲಿಕ್ (ಬೆಳ್ಳುಳ್ಳಿ) ಅಂದ್ರೆ ಶುಂಠಿ ಅಂತಾ ಹೇಳಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ. ಸಚಿವರ ವಿಡಿಯೋವನ್ನು ಪಾಕಿಸ್ತಾನಿ ಪತ್ರಕರ್ತೆ ನೈಲಾ ಇನಾಯತ್ ಅವರು ಟ್ವಿಟ್ಟರ್ನಲ್ಲಿ ಹಂಚಿಕೊಂಡ ನಂತರ ಭಾರಿ ವೈರಲ್ ಆಗಿದೆ. ಇಂಗ್ಲೀಷ್ ನಲ್ಲಿ ಗಾರ್ಲಿಕ್ ಅಂದ್ರೆ ಶುಂಠಿ ಎಂದ ಮಾಹಿತಿ ಸಚಿವ ಫವಾದ್ ಚೌಧರಿ. ಒಬ್ಬ ವ್ಯಕ್ತಿಯು ಪ್ರತಿದಿನ ಹೊಸದನ್ನು ಕಲಿಯುತ್ತಾನೆ ಎಂದು ಅವರು ಈ ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ. ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಈರುಳ್ಳಿ, ಬೆಳ್ಳುಳ್ಳಿ ಬೆಲೆ ತೀರಾ ಕುಸಿದಿರುವ ಬಗ್ಗೆ ಹೇಳಿಕೆ ನೀಡಿದ್ದಾರೆ. ಅವರು ಹಿಂದಿಯಲ್ಲಿ ಮಾತನಾಡುತ್ತಾ, ಬೆಳ್ಳುಳ್ಳಿ ಹಾಗೂ ಶುಂಠಿಗೆ ಇಂಗ್ಲೀಷ್ ನಲ್ಲಿ ಏನು ಹೇಳುತ್ತಾರೆ ಎಂಬ ಬಗ್ಗೆ ಕನ್ಫ್ಯೂಸ್ ಆಗಿದ್ದಾರೆ. ಗಾರ್ಲಿಕ್ ಅಂದ್ರೆ ಶುಂಠಿ, ಅಲ್ಲಲ್ಲಾ ಬೆಳ್ಳುಳ್ಳಿ…… ಇಲ್ಲ ಶುಂಠಿಯೇ ಇರಬಹುದು ಎಂದು ಸಚಿವರು ಗೊಂದಲಕ್ಕೊಳಗಾಗಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೋ ವೈರಲ್ ಆದ ಕೂಡಲೇ, ಸಚಿವರ ಶುಂಠಿ-ಬೆಳ್ಳುಳ್ಳಿ ಕನ್ಫ್ಯೂಸ್ ಗೆ ನೆಟ್ಟಿಗರು ಉಲ್ಲಾಸದ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಈ ವಿಡಿಯೋ 1600ಕ್ಕೂ ಹೆಚ್ಚು ರೀಟ್ವೀಟ್ ಗಳಿಸಿದೆ. ಶುಂಠಿ ಮತ್ತು ಬೆಳ್ಳುಳ್ಳಿಯ ನಡುವೆ ಗೊಂದಲಕ್ಕೀಡಾಗುವುದು ಅಸಾಮಾನ್ಯವೇನಲ್ಲ ಎಂದು ಹಲವು ಬಳಕೆದಾರರು ಸಚಿವರನ್ನು ಬೆಂಬಲಿಸಿದ್ದಾರೆ. ಅನೇಕರು ಸಚಿವರನ್ನು ಬಾಲ್ಯದಲ್ಲಿ ಯಾವ ಶಾಲೆಗೆ ಹೋಗಿದ್ದರು ಎಂದು ಟ್ರೋಲ್ ಮಾಡಿದ್ದಾರೆ. "Garlic is adrak," information minister Fawad Chaudhry. One learns a new thing everyday. pic.twitter.com/oXjgey4Kd8 — Naila Inayat (@nailainayat) November 23, 2021