alex Certify ದಿ. ಜಯಲಲಿತಾ ನಿವಾಸ ತಮಿಳುನಾಡು ಸರ್ಕಾರದ ಸ್ವತ್ತಲ್ಲ: ಮಹತ್ವದ ಆದೇಶ ಪ್ರಕಟಿಸಿದ ಹೈಕೋರ್ಟ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಿ. ಜಯಲಲಿತಾ ನಿವಾಸ ತಮಿಳುನಾಡು ಸರ್ಕಾರದ ಸ್ವತ್ತಲ್ಲ: ಮಹತ್ವದ ಆದೇಶ ಪ್ರಕಟಿಸಿದ ಹೈಕೋರ್ಟ್​

ತಮಿಳುನಾಡು ಮಾಜಿ ಸಿಎಂ ದಿವಂಗತ ಜೆ. ಜಯಲಲಿತಾ ಅವರ ಪೋಯಸ್​ ಗಾರ್ಡನ್​ ನಿವಾಸವನ್ನು ಸ್ವಾಧೀನಪಡಿಸಿಕೊಂಡಿದ್ದ ರಾಜ್ಯ ಸರ್ಕಾರದ ಆದೇಶವನ್ನು ಮದ್ರಾಸ್​ ಹೈಕೋರ್ಟ್ ಇಂದು ರದ್ದುಗೊಳಿಸಿದೆ. ಜಯಲಲಿತಾ ನಿವಾಸವನ್ನು ಸ್ಮಾರಕವನ್ನಾಗಿ ಪರಿವರ್ತಿಸಿದ್ದ ಎಐಎಡಿಎಂಕೆ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ್ದ ಸೊಸೆ ಹಾಗೂ ಸೋದರಳಿಯ ಜೆ.ದೀಪಾ ಹಾಗೂ ಜೆ.ದೀಪಕ್​​ ಅವರಿಗೆ ಮುನ್ನಡೆ ಸಿಕ್ಕಂತಾಗಿದೆ.

ಹಿಂದಿನ ಎಐಎಡಿಎಂಕೆ ಸರ್ಕಾರವು ಜಯಲಲಿತಾ ಅವರ ನಿವಾಸ ವೇದ ನಿಲಯವನ್ನು ಸ್ಮಾರಕವನ್ನಾಗಿ ಪರಿವರ್ತಿಸಲು ಪ್ರಸ್ತಾವನೆಯನ್ನು ಇಟ್ಟಿತ್ತು. ಈ ಮನೆಯನ್ನು ಸ್ಮಾರಕವನ್ನಾಗಿ ಪರಿವರ್ತಿಸಲು ಎಐಎಡಿಎಂಕೆ ಪಕ್ಷಕ್ಕೆ ಸಂಪೂರ್ಣ ಅಧಿಕಾರ ಹಾಗೂ ಜವಾಬ್ದಾರಿಯಿದೆ. ಈ ನಿವಾಸವು ತಮಿಳುನಾಡು ಜನತೆ ಹಾಗೂ ಪಕ್ಷದ ಕಾರ್ಯಕರ್ತರ ಹೃದಯದ ಬಯಕೆಯಾಗಿದೆ ಎಂದು ಹೇಳಿತ್ತು.

ಜಯಲಲಿತಾ ಮರಣದ ಬಳಿಕ 2017ರ ಆಗಸ್ಟ್​ 17ರಂದು ಅಂದಿನ ತಮಿಳುನಾಡು ಸಿಎಂ ಇ.ಪಳನಿಸ್ವಾಮಿ ಅಮ್ಮನ ಸಾಧನೆಯನ್ನು ತಮಿಳುನಾಡು ಜನತೆಯ ಎದುರು ತೆರೆದಿಡುವ ಸಲುವಾಗಿ ಜಯಲಲಿತಾ ನಿವಾಸವನ್ನು ಸ್ಮಾರಕವನ್ನಾಗಿ ಮಾಡೋದಾಗಿ ಘೋಷಣೆ ಮಾಡಿದ್ದರು.

ಕಳೆದ ವರ್ಷ ಜುಲೈ ತಿಂಗಳಲ್ಲಿ ತಮಿಳುನಾಡು ಸರ್ಕಾರ 0.55 ಎಕರೆ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳಲು ನಗರ ನ್ಯಾಯಾಲಯದಲ್ಲಿ 67.9 ಕೋಟಿ ರೂಪಾಯಿ ಠೇವಣಿಯನ್ನು ಹೂಡಿತ್ತು.

ಆದರೆ ಕಾನೂನಿನ ಪ್ರಕಾರ ಈ ಮನೆಯ ವಾರಸುಧಾರರಾದ ದೀಪಕ್​ ಹಾಗೂ ದೀಪಾ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಕೋರ್ಟ್​ ಮೆಟ್ಟಿಲೇರಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...