alex Certify Breaking: ಮುಖೇಶ್ ಅಂಬಾನಿ ಹಿಂದಿಕ್ಕಿ ಏಷ್ಯಾದ ಶ್ರೀಮಂತ ವ್ಯಕ್ತಿ ಪಟ್ಟಕ್ಕೇರಿದ ಗೌತಮ್ ಅದಾನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Breaking: ಮುಖೇಶ್ ಅಂಬಾನಿ ಹಿಂದಿಕ್ಕಿ ಏಷ್ಯಾದ ಶ್ರೀಮಂತ ವ್ಯಕ್ತಿ ಪಟ್ಟಕ್ಕೇರಿದ ಗೌತಮ್ ಅದಾನಿ

ಅದಾನಿ ಗ್ರೂಪ್ ಸಂಸ್ಥಾಪಕ ಮತ್ತು ಅಧ್ಯಕ್ಷ ಗೌತಮ್ ಅದಾನಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮುಖೇಶ್ ಅಂಬಾನಿ  ಹಿಂದಿಕ್ಕಿ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ತಜ್ಞರ ಪ್ರಕಾರ, ಇದು ಮಾರುಕಟ್ಟೆ ಕ್ಯಾಪ್  ಆಧರಿಸಿದೆ. ವರದಿಗಳ ಪ್ರಕಾರ, ಏಪ್ರಿಲ್ 2020 ರಿಂದ ಅದಾನಿ ನಿವ್ವಳ ಮೌಲ್ಯವು ಗಮನಾರ್ಹವಾಗಿ ಹೆಚ್ಚಾಗಿದೆ. ಮಾರ್ಚ್ 18,2020 ರಂತೆ ನಿವ್ವಳ ಮೌಲ್ಯ 4.91  ಅರಬ್ ಡಾಲರ್ ಆಗಿತ್ತು.

ಈ ಹಿಂದೆ, ಗೌತಮ್ ಅದಾನಿ ನಿವ್ವಳ ಮೌಲ್ಯ 88.8 ಅರಬ್ ಡಾಲರ್ ಇತ್ತು. ಮುಖೇಶ್ ಅಂಬಾನಿಯವರ ನಿವ್ವಳ ಮೌಲ್ಯ 91 ಅರಬ್ ಡಾಲರ್ ಇತ್ತು. ಗೌತಮ್ ಅದಾನಿಯವರ ನಿವ್ವಳ ಮೌಲ್ಯ ಕಳೆದ 20 ತಿಂಗಳುಗಳಲ್ಲಿ 1808 ಪ್ರತಿಶತದಷ್ಟು ಅಂದರೆ 83.89 ಬಿಲಿಯನ್ ಅಮೆರಿಕನ್ ಡಾಲರ್ ಹೆಚ್ಚಾಗಿದೆ. ಮುಖೇಶ್ ಅಂಬಾನಿ ಅವರ ನಿವ್ವಳ ಮೌಲ್ಯವು 250 ಪ್ರತಿಶತದಷ್ಟು ಅಂದ್ರೆ 54.7 ಅರಬ್ ಡಾಲರ್ ಹೆಚ್ಚಾಗಿದೆ.

ACB Raid: PWD ಅಧಿಕಾರಿ ಮನೆಯ ಪೈಪ್ ಗಳಲ್ಲೂ ಕಂತೆ ಕಂತೆ ಹಣ ಪತ್ತೆ; ಭ್ರಷ್ಟ ಶಾಂತಗೌಡನ ಸಂಪತ್ತು ಕಂಡು ಅಧಿಕಾರಿಗಳೇ ಶಾಕ್….!

ತಜ್ಞರ ಪ್ರಕಾರ, ಅದಾನಿ ಟೋಟಲ್ ಗ್ಯಾಸ್, ಅದಾನಿ ಪೋರ್ಟ್ಸ್ ಮತ್ತು ಅದಾನಿ ಗ್ರೀನ್‌ನಂತಹ ಕಂಪನಿಗಳು ಸೇರಿದಂತೆ ಅದಾನಿ ಕಂಪನಿಗಳ ಷೇರುಗಳು ಗಗನಕ್ಕೇರುತ್ತಿವೆ. ಮುಖೇಶ್ ಅಂಬಾನಿಯವರ 14.3 ಬಿಲಿಯನ್ ಡಾಲರ್‌ಗಳಿಗೆ ಹೋಲಿಸಿದರೆ, ಗೌತಮ್ ಅದಾನಿ ಸಂಪತ್ತು  ವರ್ಷದಿಂದ ವರ್ಷಕ್ಕೆ 55 ಬಿಲಿಯನ್ ಡಾಲರ್ ಹೆಚ್ಚಾಗ್ತಿದೆ. ಮತ್ತೊಂದೆಡೆ, ಕಳೆದ 2OC ಒಪ್ಪಂದ ರದ್ದಾದ ನಂತರ ಅಂಬಾನಿ ಕಂಪನಿಯ ಷೇರುಗಳು ಒತ್ತಡದಲ್ಲಿವೆ.

ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ, ಅಂಬಾನಿ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 11 ನೇ ಸ್ಥಾನದಲ್ಲಿದ್ದರು, 96.3 ಅರಬ್ ಡಾಲರ್ ನಿವ್ವಳ ಮೌಲ್ಯ ಹೊಂದಿದ್ದಾರೆ. ಈ ವರ್ಷ ಅವರ ನಿವ್ವಳ ಮೌಲ್ಯವು 19.6 ಅರಬ್ ಡಾಲರ್ ಹೆಚ್ಚಾಗಿದೆ. ಅಂಬಾನಿ ಇತ್ತೀಚೆಗೆ 100 ಅರಬ್ ಡಾಲರ್ ಎಲೈಟ್ ಕ್ಲಬ್‌ಗೆ ಸೇರಿದ್ದರು. ಆದರೆ ಅಂದಿನಿಂದ ಅವರ ನಿವ್ವಳ ಮೌಲ್ಯವು ಕುಸಿದಿದೆ.

ಗೌತಮ್ ಅದಾನಿ ಅವರ ನಿವ್ವಳ ಮೌಲ್ಯವು ಕಳೆದ 2 ವರ್ಷಗಳಲ್ಲಿ ಗಮನಾರ್ಹವಾಗಿ ಹೆಚ್ಚಾಗಿದೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ, ಅದಾನಿ 84.4 ಅರಬ್ ಡಾಲರ್ ನಿವ್ವಳ ಮೌಲ್ಯದೊಂದಿಗೆ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 13 ನೇ ಸ್ಥಾನದಲ್ಲಿದ್ದಾರೆ. ಈ ವಾರ ಅವರ ಸಂಪತ್ತು ಗಮನಾರ್ಹವಾಗಿ ಹೆಚ್ಚಾದ ಕಾರಣ, ಅವರ ಸ್ಥಾನದಲ್ಲಿ ಏರಿಕೆಯಾಗಿದೆ. ಈ ವರ್ಷ ಅವರ ನಿವ್ವಳ ಮೌಲ್ಯವು 50.7 ಅರಬ್ ಡಾಲರ್ ಹೆಚ್ಚಾಗಿದೆ. ಅಂದರೆ, ಈ ವರ್ಷ ಅವರ ನಿವ್ವಳ ಮೌಲ್ಯ ಅಂಬಾನಿಯವರಿಗಿಂತ ಎರಡೂವರೆ ಪಟ್ಟು ಹೆಚ್ಚಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...