ಬೆಂಗಳೂರು: ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಆರೋಪ ಹಿನ್ನೆಲೆಯಲ್ಲಿ ಮುಂಜಾನೆಯಿಂದಲೇ ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು, ಶೋಧ ನಡೆಸಿದ್ದಾರೆ. ಅಧಿಕಾರಿಗಳ ಮನೆಯಲ್ಲಿ ಪತ್ತೆಯಾಗುತ್ತಿರುವ ಕಂತೆ ಕಂತೆ ನಗದು, ಚಿನ್ನಾಭರಣಗಳನ್ನು ಕಂಡು ಅಧಿಕಾರಿಗಳೇ ಶಾಕ್ ಆಗಿದ್ದಾರೆ.
ಒಟ್ಟು 15 ಎಸಿಬಿ ಅಧಿಕಾರಿಗಳು 68 ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಕಲಬುರ್ಗಿಯ ಲೋಕೋಪಯೋಗಿ ಇಲಾಖೆಯ ಜೆಇ ಶಾಂತಗೌಡ ಬಿರಾದಾರ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸುತ್ತಿದ್ದಂತೆ ಹೆದರಿದ ಶಾಂತಗೌಡ ಮನೆಯ ನೀರಿನ ಪೈಪ್ ಗಳಲ್ಲೂ ಕಂತೆ ಕಂತೆ ಹಣವನ್ನು ಬಚ್ಚಿಟ್ಟಿರುವ ಘಟನೆ ನಡೆದಿದೆ.
ಬೆಕ್ಕಸಬೆರಗಾಗಿಸುತ್ತೆ ಈ ಕೋಟ್ಯಾಧೀಶ ಕೋಣದ ಸ್ಟೋರಿ
ಗುಬ್ಬಿ ಕಾಲೋನಿಯಲ್ಲಿರುವ ಮೂರು ಅಂತಸ್ಥಿನ ಭವ್ಯ ಬಂಗಲೆಯಲ್ಲಿ ಇಂಚಿಂಚು ತಪಾಸಣೆ ನಡೆಸಿರುವ ಅಧಿಕಾರಿಗಳು ಮನೆಯ ಪೈಪ್ ಗಳನ್ನು ಪ್ಲಂಬರ್ ಸಹಾಯದಿಂದ ಕತ್ತರಿಸಿ ಕಂತೆ ಕಂತೆ ಹಣವನ್ನು ಹೊರ ತೆಗೆದಿದ್ದಾರೆ. ಬಕೆಟ್ ಗಳಲ್ಲಿ ರಾಶಿ ರಾಶಿ ನೋಟುಗಳನ್ನು ಮೊಗೆದು ತುಂಬಿದ್ದಾರೆ.
ಕಲಬುರ್ಗಿ ವಿವಿ ರಸ್ತೆಯಲ್ಲಿ ಎರಡು ನಿವೇಶನ, ತಾಲೂಕಿನ ಹಂಗರಗಾ ಗ್ರಾಮದಲ್ಲಿ 40 ಎಕರೆ ಜಮೀನು, ಹಂಗರಗಾ ಗ್ರಾಮದಲ್ಲಿ ಮೂರು ಮನೆ, ಬೆಂಗಳೂರಿನಲ್ಲಿಯೂ ಆಸ್ತಿಯನ್ನು ಶಾಂತಗೌಡ ಹೊಂದಿರುವುದಾಗಿ ತಿಳಿದು ಬಂದಿದೆ. ಒಟ್ಟಾರೆ ಭ್ರಷ್ಟ ಅಧಿಕಾರಿಯ ಅಕ್ರಮ ಆಸ್ತಿ, ಕಂತೆ ಕಂತೆ ಹಣ ಕಂಡು ಅಧಿಕಾರಿಗಳೇ ಸುಸ್ತಾಗಿದ್ದಾರೆ.